ಅನೇಕ ಹೀರೋಗಳು ಕೀರ್ತಿ ಸುರೇಶ್​ ಅವರ... ಅಚ್ಚರಿ ಹೇಳಿಕೆ ನೀಡಿದ ಬಾಲಿವುಡ್​ ನಟ ವರುಣ್​ ಧವನ್​! Keerthy Suresh

Keerthy Suresh
Published on

Keerthy Suresh : ನಟಿ ಕೀರ್ತಿ ಸುರೇಶ್ ಅವರು ಬೇಬಿ ಜಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ಇಂದು (ಡಿಸೆಂಬರ್ 25) ದೇಶಾದ್ಯಂತ ತೆರೆಗೆ ಅಪ್ಪಳಿಸಿದೆ. ಮದುವೆಯಾದ ಎರಡೇ ದಿನದಲ್ಲಿ ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ ಸಿನಿಮಾದ ಪ್ರಚಾರದಲ್ಲಿ ಕೀರ್ತಿ ಸುರೇಶ್​ ಬಿಜಿಯಾಗಿದ್ದು, ವೃತ್ತಿಪರತೆಯನ್ನು ಮೆರೆದಿದ್ದಾರೆ. ಇತ್ತೀಚೆಗಷ್ಟೇ ಬೇಬಿ ಜಾನ್ ಚಿತ್ರದ ಹೀರೋ ವರುಣ್ ಧವನ್ ಜೊತೆಗಿನ ಸಂದರ್ಶನದಲ್ಲಿ ಕೀರ್ತಿ ಸುರೇಶ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವರುಣ್ ಧವನ್, ಶೂಟಿಂಗ್​ ಸಮಯದಲ್ಲಿ ನಾವು ಯಾವಾಗಲೂ ಮದುವೆ ವಿಚಾರದ ಬಗ್ಗೆ ಮಾತನಾಡುತ್ತಿದ್ದೆವು. ನನಗೆ ಮದುವೆ ಆಗಿದೆ. ಕೀರ್ತಿ ಸುರೇಶ್ ಆಗ ಮದುವೆಗೆ ತಯಾರಾಗುತ್ತಿದ್ದರು. ಹಾಗಾಗಿ ಮದುವೆ ವಿಚಾರದ ಬಗ್ಗೆ ಸದಾ ಹರಟುತ್ತಿದ್ದೆವು. ಮದುವೆಯ ನಂತರ ನಾನು ಒಳ್ಳೆಯ ಹೆಂಡತಿಯಾಗುತ್ತೇನೆ. ಸಿನಿಮಾದಲ್ಲಿ ಹೆಂಡ್ತಿ ಪಾತ್ರ ಹೇಗಿದೆ ನೋಡಿ. ತನಗೆ ವೈಫ್ ಆಫ್ ದಿ ಇಯರ್ ಪ್ರಶಸ್ತಿ ಕೊಡಬೇಕು ಎಂದು ಕೀರ್ತಿ ಹೇಳ್ತಾರೆ. ಆದರೆ, ವಾಸ್ತವವಾಗಿ ಕೀರ್ತಿ ಸುರೇಶ್​ ಮದುವೆಯಾಗಿದ್ದರಿಂದ ಅನೇಕರ ಹೃದಯ ಬ್ರೇಕ್​ ಆಗಿದೆ ಎಂದು ವರುಣ್​ ಧವನ್​ ಹಾಸ್ಯ ಚಟಾಕಿ ಹಾರಿಸಿದರು.

ಕೀರ್ತಿ ಅವರು ವರ್ಷಗಟ್ಟಲೆ ತನ್ನ ಪ್ರೀತಿಯ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ ಎಂದು ವರುಣ್​ ಧವನ್​ ಹೇಳಿದಾಗ, ಮಧ್ಯ ಪ್ರವೇಶಿಸಿದ ಕೀರ್ತಿ ಸುರೇಶ್​, ತನ್ನ ಆಪ್ತರಿಗೆ ಗೊತ್ತಾಗಿತ್ತು ಎಂದರು. ನಿಮ್ಮ ಜೊತೆ ಸಿನಿಮಾ ಶೂಟಿಂಗ್​ ಆರಂಭವಾದಾಗಿನಿಂದಲೇ ನಿರ್ದೇಶಕ ಅಟ್ಲಿ ಮತ್ತು ಅವರ ಪತ್ನಿಗೂ ಗೊತ್ತಿತ್ತು. ನನ್ನ ಆಪ್ತರಿಗೂ ಗೊತ್ತಿತ್ತು. ಈ ವಿಷಯವನ್ನು ನಾನು ಸಾರ್ವಜನಿಕರಿಗೆ ತಿಳಿಸದಿದ್ದು ಒಳ್ಳೆಯದಾಯಿತು ಎಂದರು.

ನಾವು ಮುಂಬೈನಲ್ಲಿ ಶೂಟಿಂಗ್ ಮಾಡುತ್ತಿದ್ದಾಗ, ಬಾಲಿವುಡ್​ನ ಅನೇಕ ಹೀರೋಗಳು ಕೀರ್ತಿ ಸುರೇಶ್ ಅವರ​ ಫೋನ್ ನಂಬರ್​ ಕಳುಹಿಸುವಂತೆ ಮಸೇಜ್​ ಮಾಡಿದರು. ಆದರೆ, ನಾನು ಫೋನ್​ ನಂಬರ್​ ಕಳುಹಿಸಲಿಲ್ಲ. ಏಕೆಂದರ, ಆಕೆಯನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿತ್ತು. ಹೀಗಾಗಿ ಆಕೆಯ ನಂಬರ್ ಅನ್ನು ಯಾರಿಗೂ ಕೊಡದೆ ರಕ್ಷಣೆ ಮಾಡಿದ್ದೆ ಎಂದು ವರುಣ್​ ಧವನ್​ ಹೇಳಿದರು.

ಅಷ್ಟಕ್ಕೂ ಕೀರ್ತಿ ಸುರೇಶ್​ ಅವರ ನಂಬರ್ ಅನ್ನು ಯಾರೂ ಕೇಳಿರಬಹುದು ಎಂಬ ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಅಂದಹಾಗೆ ಕೀರ್ತಿ ಸುರೇಶ್​ ಅವರು ಹದಿನೈದು ವರ್ಷಗಳ ಡೇಟಿಂಗ್ ನಂತರ, ನಟಿ ಆಂಟೋನಿ ಥಟ್ಟಿಲ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿ.12ರಂದು ಹಿಂದು ಸಂಪ್ರದಾಯದಂತೆ ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ವಿವಾಹವಾದರು. ಬಳಿಕ ಕ್ರಿಶ್ಚಿಯನ್​ ಸಂಪ್ರದಾಯಂತೆಯೂ ಮದುವೆಯಾದರು. ಕೀರ್ತಿ ಮತ್ತು ಆಂಟೋನಿ ಒಂದೇ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದರು. ಹೈಸ್ಕೂಲ್ ದಿನಗಳಲ್ಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆಂಟೋನಿ ಕೀರ್ತಿಗಿಂತ ಎರಡು ವರ್ಷ ದೊಡ್ಡವರು. ಕೀರ್ತಿಗೆ ಸದ್ಯ 32 ವರ್ಷ ಮತ್ತು ಆಂಟೋನಿಗೆ 34 ವರ್ಷ. ಕೊಚ್ಚಿ ಮೂಲದ ಆಂಟೋನಿ ದೋಹಾದಲ್ಲಿ ಉದ್ಯಮಿಯಾಗಿದ್ದಾರೆ. ಆಂಟೋನಿ ಕೊಚ್ಚಿ ಮೂಲದ ಆಸ್ಪರೋಸ್ ವಿಂಡೋಸ್ ಸಲ್ಯೂಷನ್ಸ್ ಎಂಬ ಕಂಪನಿಯ ಮಾಲೀಕರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net