

ಬೆಂಗಳೂರು: ಆಟಿಸಂ ಕಾಯಿಲೆಯನ್ನೇ ಪ್ರಧಾನವಾಗಿಸಿಕೊಂಡು ‘ವರ್ಣಪಟಲ’ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ ನಿರ್ದೇಶಕ ಚೇತನ್ ಮುಂಡಾಡಿ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಇಡೀ ಸಿನಿಮಾದಲ್ಲಿ ಆಟಿಸಂ ಕಾಯಿಲೆ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳುವುದರ ಜತೆಗೆ ತಾಯಿ, ಮಗುವಿನ ನಡುವಿನ ಬಾಂಧವ್ಯಕ್ಕೂ ನಿರ್ದೇಶಕರು ಚಿತ್ರದಲ್ಲಿ ಜಾಗ ಕಲ್ಪಿಸಿದ್ದಾರೆ.
ಅನೂಪ್ ಸಾಗರ್ ನಾಯಕನ ಪಾತ್ರ ಮಾಡಿದರೆ, ಜ್ಯೋತಿ ರೈ ನಾಯಕಿಯಾಗಿದ್ದಾರೆ. ಬಹುಭಾಷಾ ನಟಿ ಸುಹಾಸಿನಿ ವಿಶೇಷ ಪಾತ್ರದಲ್ಲಿದ್ದಾರೆ. ಧನಿಕ ಹೆಗ್ಡೆ, ಚೇತನ್ ರೈ ಮಾಣಿ, ಇಳಾ ವಿಟ್ಲ, ಅರವಿಂದ್ ರಾವ್, ಶ್ರೀಕಾಂತ್ ಹೆಬ್ಳಿಕರ್ ಚಿತ್ರದಲ್ಲಿದ್ದಾರೆ. ಡಾ. ಸರಸ್ವತಿ ಹೊಸದುರ್ಗ ಮತ್ತು ಕವಿತಾ ಸಂತೋಷ್, ‘ವರ್ಣಪಟಲ’ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ಮಾಣ ಮಾಡಿದ್ದಾರೆ.