ಮನೆ ಅಂದ ಮೇಲೆ ಕಿರಿಕ್​ ಇದ್ದದ್ದೇ: ವರದನ ಆಗಮನಕ್ಕೆ ದಿನಗಣನೆ

varada
Published on

"ವರದ' ಚಿತ್ರದ ನಿರ್ದೇಶಕ-ನಿರ್ಮಾಪಕ ಉದಯ್​ ಪ್ರಕಾಶ್​ ಮತ್ತು ನಾಯಕ ವಿನೋದ್​ ಪ್ರಭಾಕರ್​ ನಡುವೆ ಸಂಭಾವನೆ ವಿಚಾರವಾಗಿ ಮುನಿಸು ಹೊಗೆಯಾಡುತ್ತಿದೆಯೇ?

ಇಂಥದ್ದೊಂದು ಪ್ರಶ್ನೆ ಎದುರಾಗಿದ್ದು "ವರದ' ಚಿತ್ರದ ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ. ಇದೇ 18ಕ್ಕೆ ಚಿತ್ರವು ರಾಜ್ಯಾದ್ಯಂತ 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಮಧ್ಯೆ, ಹೆಚ್ಚು ಸುದ್ದಿಯಾಗದ ಚಿತ್ರತಂಡದವರ ನಡುವಿನ ಮುನಿಸು ಮುನ್ನಲೆಗೆ ಬಂದಿದೆ.

ಈ ಕುರಿತು ಮಾತನಾಡಿರುವ ಪ್ರಕಾಶ್​, "ನಮ್ಮ ಮತ್ತು ವಿನೋದ್​ ನಡುವೆ ಯಾವುದೇ ಮುನಿಸಿಲ್ಲ. ಅವರಿಗೆ ಕೊಡಬೇಕಾದ ಸಂಭಾವನೆಯಲ್ಲಿ ಒಂದಷ್ಟು ಮೊತ್ತ ಬಾಕಿ ಇತ್ತು. ಕೋವಿಡ್​ ಹಿನ್ನೆಲೆಯಲ್ಲಿ ಎದುರಾದ ಹಣಕಾಸಿನ ಸಮಸ್ಯೆ ಬಗ್ಗೆ ಅವರ ಬಳಿ ಹೇಳಿಕೊಂಡಿದ್ದೆ. ಅದಕ್ಕೆ ಅವರೂ ಒಪ್ಪಿದ್ದರು. ಸಿನಿಮಾದಿಂದ ಲಾಭ ಬಂದರೆ ಅವರಿಗೆ ಸಲ್ಲಬೇಕಾದ ಮೊತ್ತ ತಲುಪಲಿದೆ' ಎಂದರು.

ಇದಕ್ಕೆ ವಿನೋದ್​ ಸಹ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. "ಸಿನಿಮಾ ಅಂದರೆ ಅದೊಂದು ಕುಟುಂಬ. ಮನೆಯಲ್ಲಿ ಇರುವಂತೆ ಇಲ್ಲಿಯೂ ಸಣ್ಣಪುಟ್ಟ ಮುನಿಸುಗಳಿರುತ್ತವೆ. ಅದೇ ರೀತಿ ನಿರ್ಮಾಪಕರು ನನಗೆ 14 ಲಕ್ಷ ಹಣ ಕೊಡಬೇಕಿತ್ತು. ಅವರ ಸಮಸ್ಯೆ ಹೇಳಿಕೊಂಡರು. ಆ ಮೊತ್ತವನ್ನು ಸಿನಿಮಾದ ತಾಂತ್ರಿಕವರ್ಗದವರಿಗೆ ನೀಡಿ ಎಂದು ಅವರಿಗೆ ಹೇಳಿದ್ದೆ. ಅದನ್ನು ಅವರು ತಲುಪಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಇನ್ನುಳಿದಂತೆ ಎಲ್ಲವೂ ಚೆನ್ನಾಗಿಯೇ ಇದೆ' ಎಂದರು.

ಟ್ರೇಲರ್​ನಲ್ಲಿ ಅಪೂರ್ವ ಫೋಟೋ ಇಲ್ಲದ್ದಕ್ಕೆ ಬೇಸರ: ಇನ್ನು ಬಿಡುಗಡೆಯಾದ "ವರದ' ಚಿತ್ರದ ಟ್ರೇಲರ್​ನಲ್ಲಿ ಪುನೀತ್​ ಅವರ ೋಟೋ ಇಲ್ಲದ್ದಕ್ಕೆ ವಿನೋದ್​ ಪ್ರಭಾಕರ್​ ಬೇಸರಿಸಿಕೊಂಡಿದ್ದಾರೆ. ""ನನ್ನದೇ ಹೋಮ್​ ಬ್ಯಾನರ್​ನ "ಲಂಕಾಸುರ' ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದರಿಂದ ಟ್ರೇಲರ್​ ನೋಡಿರಲಿಲ್ಲ. ನೋಡಿದ ಮೇಲೆ ಅಪು$್ಪ ಅವರ ಫೋಟೋ ಇಲ್ಲದ್ದು ಗಮನಕ್ಕೆ ಬಂತು. ಅವರಿಗೆ ಸಣ್ಣ ನಮನವೂ ಎಲ್ಲಿಯೂ ಕಾಣಿಸಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net