ಸಪ್ತಪದಿ ತುಳಿಯೋ ಮುನ್ನವೇ ಸನ್ನಿಧಿಗೆ ಮೋಸ? ಈ ಸಂಗತಿ ಗೊತ್ತಾದ್ರೆ ವೈಷ್ಣವಿಗೆ ಉಗಿದು ಉಪ್ಪಿನಕಾಯಿ ಹಾಕ್ತಾರಂತೆ!

Sannidhi
Published on

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಅಗ್ನಿಸಾಕ್ಷಿ (Agnisakshi) ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಅಲಿಯಾಸ್​ ಸನ್ನಿಧಿ (Sannidhi) ಅವರ ನಿಶ್ಚಿತಾರ್ಥ (Engagement) ದ ಸುದ್ದಿ ಹರಿದಾಡಿತ್ತು. ಅಲ್ಲದೆ, ಅದಕ್ಕೆ ಸಂಬಂಧಿಸಿದ ಫೋಟೋಗಳು ಸಹ ವೈರಲ್​ ಆಗಿ, ಮದುವೆ ಆಗುವುದು ಖಚಿತ ಎಂಬ ಸುದ್ದಿಯು ವೈರಲ್​ ಆಗಿತ್ತು. ಆದರೆ, ಇದೀಗ ವೈಷ್ಣವಿ ಅವರಿಗೆ ಮದುವೆಗೂ ಮುನ್ನವೇ ಮೋಸ ಆಗಿದೆ ಎಂದು ಮಾತುಗಳು ಕೇಳಿಬರುತ್ತಿವೆ. ಸ್ವತಃ ಇಬ್ಬರು ಯುವತಿಯರು ವೈಷ್ಣವಿ ಪರ ಅಖಾಡಕ್ಕಿಳಿದಿದ್ದು, ಯಾವುದೇ ಕಾರಣಕ್ಕೂ ವೈಷ್ಣವಿಗೆ ಮೋಸ ಆಗಲು ಬಿಡುವುದಿಲ್ಲ ಎಂಬ ಮಾತುಗಳನ್ನಾಡುತ್ತಿದ್ದಾರೆ.

ಹಾಗಾದರೆ, ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯೋ ಮುನ್ನವೇ ಸನ್ನಿಧಿಗೆ ಮೋಸವಾಯಿತಾ? ಸನ್ನಿಧಿಗೆ ಮೋಸ ಆಗಬಾರದು ಅಂತಾ ಕಣಕ್ಕಿಳಿದ ಆ ಇಬ್ಬರು ಹುಡುಗಿಯರು ಯಾರು? ಆಡಿಯೋ ರಿಲೀಸ್ ಮಾಡಿದ ಆ ಇಬ್ಬರು ಹುಡುಗಿಯರು ಹೇಳಿದ್ದೇನು? ಇಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿದ್ದು, ಮುಂದೆ ಈ ಬಗ್ಗೆ ಇನ್ನಷ್ಟು ಸ್ಪಷ್ಟನೆ ಸಿಗುವ ಭರವಸೆ ಇದೆ.

ಮೊನ್ನೆಯಷ್ಟೇ ವೈಷ್ಣವಿ (Vaishnavi Gowda Engagement) ಎಂಗೇಜ್ಮೆಂಟ್ ಆಗಿರೋ ಫೋಟೋ ವೈರಲ್‌ ಆಗಿತ್ತು. ವಿರಾಜ್ (Viraj Kannda Film) ಸಿನಿಮಾದ ನಾಯಕ ವಿದ್ಯಾಭರಣ್ (Vidyabharan K S) ಎಂಬುವರ ಜತೆ ವೈಷ್ಣವಿ ನಿಶ್ಚಿತಾರ್ಥ ನೆರವೇರಿತ್ತು. ಫೋಟೋದಲ್ಲಿ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ ಬಿದರಿ ಅವರು ಕೂಡ ಇದ್ದರು. ಫೋಟೋ ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿದ್ದ ವೈಷ್ಣವಿ, ಎಂಗೇಜ್ಮೆಂಟ್ ಆಗಿಲ್ಲ, ಹುಡುಗನ ಕಡೆಯವರು ಬಂದು ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ್ದಾರೆ ಎಂದಿದ್ದರು.

ಇದೀಗ ಇದ್ದಕ್ಕಿದ್ದ ಹಾಗೇ ಇಬ್ಬರು ಹುಡುಗಿಯರು ಅಖಾಡಕ್ಕಿಳಿದಿದ್ದಾರೆ. ಆ ಹುಡುಗಿಯರಿಗೂ ಹಾಗೂ ವಿರಾಜ್​ಗೂ ಏನು ಸಂಬಂಧ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ, ವಿರಾಜ್​ ಬಗ್ಗೆ ಸಾಕಷ್ಟು ಗಂಭೀರ ಆರೋಪಗಳನ್ನು ಮಾಡಿದ್ದು, ವೈಷ್ಣವಿಗೆ ಮೋಸ ಆಗಬಾರದು ಎಂದು ಹೇಳಿದ್ದಾರೆ.

ವೈಷ್ಣವಿ ತುಂಬಾ ಒಳ್ಳೆ ಹುಡುಗಿ. ಆಕೆಗೆ ಅವನಿಂದ ಮೋಸ ಆಗಬಾರದು. ವೈಷ್ಣವಿ ಜೀವನ ಹಾಳಾಗುವುದಕ್ಕೆ ನಾವು ಬಿಡುವುದಿಲ್ಲ. ಆಕೆ ಜತೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ಹುಡುಗ ಸರಿಯಿಲ್ಲ. ವೈಷ್ಣವಿಗೂ ಮೊದಲೇ ಆತ ಐದಾರು ಜನ ಹುಡುಗಿಯರ ಜತೆ ರಿಲೇಷನ್​ಶಿಪ್​ನಲ್ಲಿದ್ದ. ಅಲ್ಲದೆ, ಹುಡುಗಿಯರನ್ನು ಮನೆಗೂ ಸಹ ಕರೆದುಕೊಂಡು ಹೋಗುತ್ತಿದ್ದ. ಆತನ ಕೃತ್ಯಕ್ಕೆ ಅವರ ತಂದೆ-ತಾಯಿಯ ಫುಲ್ ಸಪೋರ್ಟ್ ಇದೆ ಎಂದು ಇಬ್ಬರು ಅನಾಮಧೇಯ ಹುಡುಗಿಯರು ಆರೋಪ ಮಾಡಿದ್ದಾರೆ,

ಮಾತು ಮುಂದುವರಿಸಿರುವ ಹುಡುಗಿಯರು ಈಗ ನೋಡಿಡಿದರೆ ವೈಷ್ಣವಿ ಅವರ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡಿದ್ದಾನೆ. ತಾನು 150 ಕೋಟಿಗೆ ಬಾಳುತ್ತೇನೆ ಅಂತಾ ಹೇಳಿದ್ದಾರೆ. ಹೀಗಿರುವಾಗ ಅಷ್ಟು ಸಿಂಪಲ್‌ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದೇಕೆ? ವೈಷ್ಣವಿಗೆ ಹಾಗೂ ಅವರ ಕುಟುಂಬಕ್ಕೆ ಈ ವಿದ್ಯಾಭರಣ ಎಂತವನು ಅಂತ ಇನ್ನೂ ಗೊತ್ತಿಲ್ಲ ಅನ್ಸುತ್ತೆ! ಒಂದು ವೇಳೆ ಗೊತ್ತಾದರೆ ವೈಷ್ಣವಿ ಉಗಿದು ಉಪ್ಪಿನಕಾಯಿ ಹಾಕ್ತಾರೆ. ಯಾವುದೇ ಕಾರಣಕ್ಕೂ ವೈಷ್ಣವಿ, ವಿದ್ಯಾಭರಣ್ ಮದುವೆ ಆಗಬಾರದು. ಒಂದ್ವೇಳೆ ಅವರಿಬ್ಬರು ಮದುವೆ ಆದರೆ, ಮೂರು ವರ್ಷವೂ ಸಂಸಾರ ಮಾಡಲ್ಲ. ಯಾವುದೇ ಕಾರಣಕ್ಕೂ ವಿರಾಜ್, ವೈಷ್ಣವಿ ಗೌಡ ಅವರನ್ನು ಬಾಳಸಲ್ಲ. ಅವರಿಬ್ಬರು ಡೈವೋರ್ಸ್ ತೆಗೆಕೊಳ್ಳೋದು ಗ್ಯಾರಂಟಿ ಎಂದಿದ್ದಾರೆ.

ಮುಂದೆಂದೋ ಅವರ ಲೈಫ್ ಹಾಳಾಗುವ ಬದಲು ಈಗಲೇ ಮದುವೆ ನಿಂತು ಹೋಗಲಿ. ನಟಿ ವೈಷ್ಣವಿ ಗೌಡ (Vaishnavi Gowda) ಬದುಕು ಅಲ್ಲೋಲ-ಕಲ್ಲೋಲ ಆಗಬಾರದು. ನಾವು ಇಷ್ಟು ಹೇಳಿದ ಮೇಲೂ ಕೂಡ ವೈಷ್ಣವಿ ಹಾಗೂ ಅವರ ಕುಟುಂಬಸ್ಥರು ವಿದ್ಯಾಭರಣ್​ (Vidyabharan K S) ಕಡೆ ಮಾತನಾಡಿದರೆ ನಾವು ತಾನೇ ಏನು ಮಾಡುವುದಕ್ಕೆ ಆಗುತ್ತೆ? ಯಾರಾದರೂ ಹಾಳಾಗಿ ಹೋಗಲಿ ಅಂತ ಸುಮ್ಮನಾಗುತ್ತೇವೆ ಎಂದು ಆ ಇಬ್ಬರು ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ. ಆದರೆ, ಇದರಲ್ಲಿ ಎಷ್ಟು ಸತ್ಯ? ಎಷ್ಟು ಮಿತ್ಯ? ಎಂಬುದೇ ಇದೀಗ ಕಾಡುತ್ತಿರುವ ದೊಡ್ಡ ಪ್ರಶ್ನೆ. ಈ ಬಗ್ಗೆ ವಿದ್ಯಾಭರಣ್​ ಮತ್ತು ವೈಷ್ಣವಿ ಏನೆಂದು ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net