ಬೆಂಗಳೂರು: ನಗರದ ಅರ್ನಾ ಸೇವಾ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ಬೆಂಗಳೂರಿನ 3000 ಶ್ರೀನಿವಾಸ ದೇವಸ್ಥಾನಗಳಿಗೆ 2 ಲಕ್ಷ ಲಾಡು ವಿತರಿಸುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ದೊರೆಯಿತು.
ಲಾಡುಗಳನ್ನು ವಿತರಿಸುವ ಮಹತ್ವದ ಕಾರ್ಯಕ್ರಮಕ್ಕೆ ಅರ್ನಾ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಕೇಶವ ರಾಜಣ್ಣರವರು ಮತ್ತು ಚಿತ್ರನಟಿ ಸುಧಾರಾಣಿಯವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ನಟಿ ಸುಧಾರಾಣಿ, ಹಿಂದು ಜನಗಳಿಗೆ ವೈಕುಂಠ ಏಕಾದಶಿ ಪ್ರಮುಖ ದಿನವಾಗಿದ್ದು, ಸತತ 27ನೇ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಯಲಹಂಕ ಉಪನಗರದಲ್ಲಿ ನಡೆಯುವ ದಕ್ಷಿಣ ಕನ್ನಡ ವಿಶ್ವ ಬ್ರಾಹ್ಮಣ ಸಂಘದ ಮೈದಾನ ಆವರಣದಿಂದ ದೇವಸ್ಥಾನಗಳಿಗೆ ಲಾಡುಗಳನ್ನು ರವಾನಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ವೈಕುಂಠ ಏಕಾದಶಿ ಇಡೀ ಭಾರತದಲ್ಲೇ ಪರಮಾತ್ಮ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಸಿಗುವ ಪ್ರಮುಖ ಪ್ರಸಾದ ಎಂದು ಜನರು ನಂಬಿಕೆ ಇಟ್ಟಿದ್ದಾರೆ. ಅತಿ ಹೆಚ್ಚು ಪ್ರಮಾಣದಲ್ಲಿ ಸರ್ವರಿಗೂ ಸಿಗುವಂತೆ ಹಳ್ಳಿ-ಹಳ್ಳಿಗೂ ವೈಕುಂಠ ಏಕಾದಶಿಯ ಪ್ರಸಾದ ರವಾನಿಸುವ ಕಾರ್ಯಕ್ರಮವನ್ನು ಆಯೋಜಿಸುವುದು ತುಂಬಾ ಸಂತೋಷಕರ ವಿಷಯ ಎಂದು ತಿಳಿಸಿದರು.
ಇದೇ ವೇಳೆ ಕೇಶವ ರಾಜಣ್ಣ ಮಾತನಾಡಿ, ವೈಕುಂಠ ಏಕಾದಶಿಯ ಶುಭ ದಿನದಲ್ಲಿ 2 ಲಕ್ಷ ಲಾಡುಗಳು ಎಲ್ಲಾ ಭಕ್ತಾದಿಗಳಿಗೆ ದೇವಸ್ಥಾನಗಳಲ್ಲಿ ಪ್ರಸಾದವಾಗಿ ದೊರೆಯಲಿದೆ. ಮತ್ತು ಇದರ ತಯಾರಿ ಒಂದು ವಾರದಿಂದ 100 ಜನ ಬಾಣಸಿಗರು ತಂಡ ಸಿದ್ದಪಡಿಸಿದ್ದಾರೆ. ಎಲ್ಲರಿಗೂ ತಿರುಪತಿ ಹೋಗಿ ತಿಮ್ಮಪ್ಪನ ದರ್ಶನ ಮಾಡುವ ಸಾಧ್ಯವಿಲ್ಲ. ಹೀಗಾಗಿ ನಗರ ಪ್ರದೇಶ ಮತ್ತು ನೂರಕ್ಕು ಹೆಚ್ಚು ಹಳ್ಳಿಗಳಿಗೆ ವೈಕುಂಠ ಏಕಾದಶಿ ಪ್ರಯುಕ್ತವಾಗಿ ಶ್ರೀನಿವಾಸ ಪ್ರಿಯವಾದ ಲಾಡುವನ್ನು ದೇವಸ್ಥಾನಗಳಿಗೆ ವಿತರಿಸಾಗುವುದು ಎಂದು ತಿಳಿಸಿದರು.