ಮುಂಬೈ: ಬಾಲಿವುಡ್ ನಟರಿಗೂ ಹಾಗೂ ಕ್ರಿಕೆಟ್ ಲೋಕಕ್ಕೂ ಇರುವ ನಂಟು ಇಂದಿನದ್ದು ಅಲ್ಲ. ಈಗಾಗಲೇ, ಹಲವು ಕ್ರಿಕೆಟಿಗರು ಬಾಲಿವುಡ್ ನಟಿಯರ ಜತೆ ಡೇಟಿಂಗ್ ಮಾಡಿದ್ದು, ಕೆಲವರು ಡೇಟ್ ಮಾಡಿದ ಆ ನಟಿಯರನ್ನು ಮದುವೆ ಸಹ ಆಗಿದ್ದಾರೆ. ಇನ್ನೂ, ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಊರ್ವಶಿ ರೌಟೇಲಾ ಅವರನ್ನು ಕುರಿತು ಒಂದು ಹೊಸ ಕಥೆ ಕೇಳಿಬರುತ್ತಿದೆ. ಹೌದು, ನಟಿ ಊರ್ವಶಿ ಅವರ ಭೇಟಿಗಾಗಿ ಭಾರತ ದೇಶ ತಂಡದ ಖ್ಯಾತ ಕ್ರಿಕೆಟಿಗ ಒಬ್ಬರು ಬರೋಬ್ಬರಿ 17 ಗಂಟೆ ಕಾದು ಕುಳಿತ್ತಿದ್ದರಂತೆ. ಅಂದಹಾಗೆ , ಆ ಕ್ರಿಕೆಟಿಗ ಯಾರು ಅಂತೀರಾ...? ಅವರೇ ರಿಷಭ್ ಪಂತ್. ನಟಿ ಊರ್ವಶಿಗಾಗಿ ಬರೋಬ್ಬರಿ 17 ಗಂಟೆ ಕಾದಿದ್ದರಂತೆ ರಿಷಭ್. ಇನ್ನು, ಆ ಬಳಿಕ ಈ ಇಬ್ಬರೂ ರಿಲೇಶನ್ಶಿಪ್ನಲ್ಲಿದ್ದರು ಎನ್ನುವ ವಿಚಾರ ಕೂಡಾ ಕೇಳಿಬಂದಿತ್ತು. ಕೆಲವರು ಇದು ನಿಜ ಎಂದರೆ, ಇನ್ನೂ ಕೆಲವರು ವದಂತಿ ಎಂದು ಹೇಳುತ್ತಿದ್ದರು.