ಬೇರೆ ಅರ್ಥ ಕಲ್ಪಿಸಿ ಚರ್ಚೆ ಬೇಡ ... ‘ರಿಯಲ್ ಸ್ಟಾರ್’ ಹೀಗೆ ಹೇಳಿದ್ದು ಯಾಕೆ ಗೊತ್ತಾ?

Upendra Final
Published on

ಭಾನುವಾರ ರಾತ್ರಿ ಒಂಬತ್ತಕ್ಕೆ ಒಂಬತ್ತು ನಿಮಿಷಗಳ ಕಾಲ ದೀಪ ಹಚ್ಚುವ ಮೂಲಕ ಒಗ್ಗಟ್ಟಿನಿಂದ ಹೋರಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದಕ್ಕೆ ಎಲ್ಲೆಡೆಯಿಂದ ಟೀಕೆಗಳು ಎದುರಾಗುವುದರ ಜತೆಗೆ, ಈ ವಿಷಯದ ಕುರಿತಾಗಿ ಸಾಕಷ್ಟು ಚರ್ಚೆಯೂ ಆಗುತ್ತಿದೆ. ಆದರೆ, ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ‘ರಿಯಲ್ ಸ್ಟಾರ್’ ಉಪೇಂದ್ರ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಪ್ರಜಾಕೀಯದಲ್ಲಿ ದೀಪ ಹಚ್ಚಬೇಕೇ ಬೇಡವೇ ಎಂಬ ಚರ್ಚೆ ಬೇಡ. ಮಾನ್ಯ ಪ್ರಧಾನ ಮಂತ್ರಿಗಳು ಹೇಳಿರುವುದು ದೀಪ ಹಚ್ಚಿ ಎಂದು. ಕರೊನಾ ಮಹಾಮಾರಿ ವಿರುದ್ಧ ನಾವು ಒಗ್ಗಟ್ಟಾಗಿ ಇದ್ದೇವೆ ಎಂದು ಸಾರೋಣ. ಅದಕ್ಕೆ ಬೇರೆ ಅರ್ಥ ಕಲ್ಪಿಸಿ ಚರ್ಚೆ ಬೇಡ’ ಎಂದು ಉಪೇಂದ್ರ ಹೇಳಿದ್ದಾರೆ.

ಪ್ರಧಾನಿಗೆ ಗೌರವ ಕೊಡಬೇಕು ಎಂದು ಇನ್ನೊಂದು ಟ್ವೀಟ್‌ನಲ್ಲಿ ಹೇಳಿರುವ ಅವರು, ‘ಪ್ರಜೆಗಳ ನಿರ್ಧಾರಕ್ಕೆ ಗೌರವ ಕೊಡಬೇಕು ಎನ್ನುವ ಪ್ರಜಾಕೀಯದ ಸಿದ್ಧಾಂತದಲ್ಲಿ ಪ್ರಜೆಗಳಿಂದ ಆಯ್ಕೆಯಾದ ನಮ್ಮ ಪ್ರಧಾನಿಗೆ ಗೌರವ ಕೊಡಬೇಕಲ್ಲವೇ?’ ಎಂದು ಅವರು ಕೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net