ಹುಷಾರ್ ಹಾಡಿಗೆ ಉಪ್ಪಿ ಧ್ವನಿ

Uppi
Published on

ಬೆಂಗಳೂರು: ನಟನೆ, ನಿರ್ದೇಶನದ ಜತೆಗೆ ಗಾಯನದಲ್ಲಿಯೂ ಜನಪ್ರಿಯತೆ ಪಡೆದವರು ರಿಯಲ್ ಸ್ಟಾರ್ ಉಪೇಂದ್ರ. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಯಾವುದೇ ಹಾಡುಗಳಿಗೆ ಅವರು ಧ್ವನಿ ನೀಡಿರಲಿಲ್ಲ. ಇದೀಗ ‘ಹುಷಾರ್’ ಸಿನಿಮಾ ಮೂಲಕ ಮತ್ತೆ ಮೈಕ್ ಹಿಡಿದಿದ್ದಾರೆ. ಸತೀಶ್ ರಾಜ್ ಸಾಹಿತ್ಯ ಒದಗಿಸಿರುವ ‘ನೀ ನೋಡೋಕೆ ಸಿಕ್ಸ್​ಟೀನ್ ಸ್ವೀಟಿ..’ ಹಾಡಿಗೆ ಸಾಧುಕೋಕಿಲ ಅವರ ಸ್ಟುಡಿಯೋದಲ್ಲಿ ಉಪೇಂದ್ರ ರೆಕಾರ್ಡಿಂಗ್ ಸಹ ಮುಗಿಸಿದ್ದಾರೆ.

ಚಿತ್ರ ನಿರ್ಮಾಣದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ ಸತೀಶ್ ರಾಜ್. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಸತೀಶ್​ಗಿದು ಮೊದಲ ಸಿನಿಮಾ. ನಾಯಕನಾಗಿ ಸಿದ್ದೇಶ್ ನಟಿಸಿದರೆ, ಪ್ರಿಯದರ್ಶನಿ ನಾಯಕಿಯಾಗಿದ್ದಾರೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಮತ್ತು ನಾಗು ಸಂಗೀತ ನೀಡಿದ್ದಾರೆ. ಬಹುತೇಕ ಮಾತಿನ ಭಾಗದ ಶೂಟಿಂಗ್ ಮುಗಿಸಿಕೊಂಡಿರುವ ತಂಡ, ಏಪ್ರಿಲ್​ನಲ್ಲಿ ಚಿತ್ರವನ್ನು ತೆರೆಗೆ ತರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net