ಲಾಕ್​ ಆದ ಅನ್​ಲಾಕ್​ ರಾಘವ; ಶಿವಮೊಗ್ಗದಲ್ಲಿ ಚಿತ್ರದ ಪೆಪ್ಪಿ ಸಾಂಗ್​ ರಿಲೀಸ್​

zcZXcz
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ದೀಪಕ್​ ಮಧುವನಹಳ್ಳಿ ನಿರ್ದೇಶನದ, ಮಿಲಿಂದ್​ ಮತ್ತು ರೇಚೆಲ್​ ಡೇವಿಡ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ "ಅನ್​ಲಾಕ್​ ರಾಘವ'. ಇತ್ತೀಚೆಗಷ್ಟೆ ಶಿವಮೊಗ್ಗದ ಭಾರತ್​ ಸಿನಿಮಾಸ್​ನಲ್ಲಿ ಚಿತ್ರದ "ಲಾಕ್​ ಲಾಕ್​' ಎಂದು ಸಾಗುವ ಪೆಪ್ಪಿ ಸಾಂಗ್​ ರಿಲೀಸ್​ ಮಾಡಲಾಗಿದೆ. ಪ್ರಮೋದ್​ ಮರವಂತೆ ಸಾಹಿತ್ಯ, ಅನೂಪ್​ ಸೀಳಿನ್​ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡಿಗೆ ವಿಜಯ್​ ಪ್ರಕಾಶ್​ ಧ್ವನಿಯಾಗಿದ್ದಾರೆ.

ನಿರ್ದೇಶಕ ದೀಪಕ್​, "ಈ ಹಾಡಿನಲ್ಲಿರುವ ಎನರ್ಜಿ ಇಡೀ ಸಿನಿಮಾದಲ್ಲಿ ಇರಲಿದೆ. ನಮ್ಮ ಚಿತ್ರದಲ್ಲಿ ಕಂಪೋಸ್​ ಆದ ಮೊದಲ ಸಾಂಗ್​ ಇದು. ಚಿತ್ರದ ಶೀರ್ಷಿಕೆ ಗೀತೆಯೂ ಹೌದು' ಎಂದು ಮಾಹಿತಿ ನೀಡಿದರು. ನಾಯಕ ಮಿಲಿಂದ್​, "ಮೊದಲ ಬಾರಿ ನಿರ್ದೇಶಕರು ಈ ಹಾಡನ್ನು ಕೇಳಿಸಿದಾಗಲೇ ನನಗೆ ತುಂಬ ಖುಷಿಯಾಯಿತು. ಇದು ನಾಯಕನನ್ನು ಪರಿಚಯಿಸುವ ಸಾಂಗ್​. ನಾನು ಮೂಲತಃ ಶಿವಮೊಗ್ಗದವನು. ನಮ್ಮೂರಿನಲ್ಲೇ ಈ ಹಾಡು ರಿಲೀಸ್​ ಆಗಿದ್ದು ಸಂತೋಷವಾಗಿದೆ' ಎಂದು ಸಂತಸ ವ್ಯಕ್ತಪಡಿಸಿದರು.

ನೃತ್ಯನಿರ್ದೇಶಕ ಮುರಳಿ ಮಾಸ್ಟರ್​, "ಕೇವಲ ಮೂರು ದಿನಗಳಲ್ಲಿ ಈ ಹಾಡಿನ ಶೂಟಿಂಗ್​ ನಡೆಸಿದೆವು' ಎಂದರು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಡಿ. ಸತ್ಯಪ್ರಕಾಶ್​ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಲವಿತ್​ ಛಾಯಾಗ್ರಹಣ, ಅಜಯ್​ ಕುಮಾರ್​ ಸಂಕಲನದಲ್ಲಿ ಸಿನಿಮಾ ಮೂಡಿಬಂದಿದೆ. ಇದೇ ಫೆ.7ರಂದು "ಅನ್​ಲಾಕ್​ ರಾವ' ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net