ನಾಳೆಯಿಂದ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿ; 'ಖುಷಿ' ಚಿತ್ರಕ್ಕೆ ಟಕ್ಕರ್​ ಕೊಡಲಿವೆ ಈ 2 ಸಿನಿಮಾಗಳು!

Untitled design - 2023-09-06T132627.265
Published on

ಆಂಧ್ರಪ್ರದೇಶ: ಟಾಲಿವುಡ್​ನ ಸ್ಟಾರ್​ ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತ್ ಪ್ರಭು ಅಭಿನಯದ 'ಖುಷಿ' ಚಿತ್ರ ಬಹುತೇಕ ಥಿಯೇಟರ್​ಗಳಲ್ಲಿ ಬಿಡುಗಡೆಗೊಂಡಿದ್ದು, ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಾಣುವ ಮುಖೇನ ಚಿತ್ರತಂಡಕ್ಕೆ ಸಂತಸ ತಂದಿದೆ. ಸದ್ಯ ಈ 'ಖುಷಿ'ಯಲ್ಲಿರುವ ತಂಡಕ್ಕೆ ಇದೀಗ ಇಬ್ಬರು ಸ್ಟಾರ್​ ನಟರ ಚಿತ್ರಗಳಿಂದ ಭರ್ಜರಿ ಪೈಪೋಟಿ ಎದುರಾಗಲಿದೆ.

ಸೆಪ್ಟಂಬರ್ 01 ರಂದು ಬಿಡುಗಡೆಗೊಂಡ 'ಖುಷಿ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯನ್ನು ಕಾಣುತ್ತಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಸದ್ಯ ಈ ರೋಮ್ಯಾಂಟಿಕ್, ಡ್ರಾಮಾ ಚಿತ್ರಕ್ಕೆ ಟಕ್ಕರ್​ ಕೊಡಲು ಬಾಲಿವುಡ್​ ಕಿಂಗ್​ ಖಾನ್​ ಮತ್ತು ಸೌತ್​ ಬ್ಯೂಟಿ ಅನುಷ್ಕಾ ಶೆಟ್ಟಿ ನಟನೆಯ ಚಿತ್ರಗಳು ಗುರುವಾರ (ಸೆ.07) ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದೆ.

ಶಾರೂಖ್ ಖಾನ್ ನಟನೆಯ 'ಜವಾನ್' ಮತ್ತು ಅನುಷ್ಕಾ ಶೆಟ್ಟಿ ಅಭಿನಯದ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾಗಳು ನಾಳೆ ದೊಡ್ಡ ಓಪನಿಂಗ್ ಪಡೆಯಲಿದ್ದು, ಬಾಕ್ಸ್​ ಆಫೀಸ್​ ಕಲೆಕ್ಷನ್​ನಲ್ಲಿ ಭಾರೀ ಪೈಪೋಟಿ ಎದುರಾಗಲಿದೆ. ಈ ಮುಖೇನ ಮೂರು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net