ಸೋಮವಾರದಿಂದ ಜೀ ಕನ್ನಡದಲ್ಲಿ ‘ಕೃಷ್ಣ-ರುಕ್ಕು’ : ಪ್ರತಿ ಸಂಜೆ 6.30ಕ್ಕೆ ಪ್ರಸಾರ

ಕೃಷ್ಣ ರುಕ್ಕು ಧಾರಾವಾಹಿ ತಂಡ
ಕೃಷ್ಣ ರುಕ್ಕು ಧಾರಾವಾಹಿ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ಪ್ರೀತಿ, ಪ್ರತೀಕಾರ ಹಾಗೂ ವಿಧಿಯಾಟ ಸುತ್ತದ ಕಥೆ
  • ಅಕ್ಷಯ್, ಮೌನ ಗುಡ್ಡಮನೆ ಮುಖ್ಯಭೂಮಿಕೆಯಲ್ಲಿ ನಟನೆ
  • ಸೂರ್ಯ ಪ್ರಕಾಶ್ ಪಾತ್ರದಲ್ಲಿ ಮಿಂಚಲಿದ್ದಾರೆ ಎಸ್​.ನಾರಾಯಣ್
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಸದಭಿರುಚಿಯ ಧಾರಾವಾಹಿಗಳಿಂದ ಪ್ರಸಿದ್ಧಿಯಾಗಿರುವ ‘ಜೀ ಕನ್ನಡ’ದಲ್ಲಿ ಮತ್ತೊಂದು ಹೊಸ ಧಾರಾವಾಹಿ ಆರಂಭವಾಗಲು ಸಿದ್ಧವಾಗಿದೆ. ಪ್ರೀತಿ, ಪ್ರತೀಕಾರ ಮತ್ತು ವಿಧಿಯಾಟದ ಸುತ್ತ ನಡೆಯುವ ‘ಕೃಷ್ಣ ರುಕ್ಕು’ ಧಾರಾವಾಹಿ ಇದೇ 9ರಂದು ಪ್ರಾರಂಭವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕುಟುಂಬದ ಒಗ್ಗಟ್ಟು, ಜವಾಬ್ದಾರಿ, ಪ್ರೀತಿ ಜತೆಗೆ ಅನಿರೀಕ್ಷಿತ ತಿರುವುಗಳು ಈ ಧಾರಾವಾಹಿ ಪ್ರಮುಖ ವಿಷಯಗಳು. ಅಣ್ಣನ ಅಕಾಲಿಕ ನಿಧನದ ನಂತರ ತನ್ನ ಇಡೀ ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೇ ಹಾಕಿಕೊಳ್ಳುವ ರುಕ್ಕು ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾಳೆ. ಹಾಗೆಯೇ ಸಮಾಜದಲ್ಲಿ ಹಾದಿ ತಪ್ಪಿರುವ ಕೃಷ್ಣ ಅದು ಹೇಗೆ ರುಕ್ಕುವಿನ ಸಂಪರ್ಕಕ್ಕೆ ಬರುತ್ತಾನೆ ಎಂಬುದೇ ಈ ಧಾರಾವಾಹಿ ಪ್ರಮುಖ ಘಟ್ಟ. ಸೂರ್ಯಪ್ರಕಾಶ್ ಪಾತ್ರದಲ್ಲಿ ಎಸ್.ನಾರಾಯಣ್ ಅಭಿನಯಿಸುತ್ತಿದ್ದಾರೆ. ರುಕ್ಕು ಪಾತ್ರದಲ್ಲಿ ಮೌನ ಗುಡ್ಡೆಮನೆ, ಕೃಷ್ಣನಾಗಿ ಅಕ್ಷಯ್ ನಾಯಕ್ ಮಿಂಚಲಿದ್ದಾರೆ. ಖ್ಯಾತ ನಟಿ ಸುಚಿತ್ರಾ, ಗಾಯಕ ನವೀನ್ ಸಜ್ಜು, ಚಂದನ್, ಸೂರಜ್, ದಿವ್ಯ, ಸ್ನೇಹಾ ಕಲಾಬಳಗದಲ್ಲಿದ್ದಾರೆ. ಧೃತಿ ಕ್ರಿಯೇಷನ್ಸ್ ಬ್ಯಾನರಡಿಯಲ್ಲಿ ದಿಲೀಪ್ ರಾಜ್, ಶ್ರೀ ವಿದ್ಯಾ ನಿರ್ಮಿಸುತ್ತಿದ್ದು, ಶಿವು ನಿರ್ದೇಶಿಸುತ್ತಿದ್ದಾರೆ. ‘ಜೀ ಕನ್ನಡ ವಾಹಿನಿ ಯಾವಾಗಲೂ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ನೈಜ ಭಾವನೆಗಳು ಮತ್ತು ಕೌಟುಂಬಿಕ ಮೌಲ್ಯಗಳನ್ನೊಳಗೊಂಡ ಕಥೆಗಳನ್ನು ಹೇಳುತ್ತದೆ. ಹಾಗೆಯೇ ‘ಕೃಷ್ಣ ರುಕ್ಕು’ ಸುಂದರ ಕಥೆಯಾಗಿದ್ದು, ಇದು ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಲಿದೆ’ ಎಂದು ಜೀ ಕನ್ನಡ ವಾಹಿನಿಯ ಚ್ೀ ಚಾನೆಲ್ ಆಫೀಸರ್ ದೀಪಕ್ ಶ್ರೀರಾಮಲು ಅಭಿಪ್ರಾಯಪಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net