ಆ ಮನೆ ನನ್ನ ಮಗಳಿಗೆ ಅಂತಾನೇ ರೇವಣ್ಣ ಅವರು ಹೇಳಿದ್ದರು. ಆದರೆ, ಕಾವ್ಯಾ ಗೌಡ ಆ ಮನೆಯನ್ನು ನೋಡಿ ಸೋಮಶೇಖರ್ನನ್ನ ಮದುವೆಯಾದಳು. ಅವರಿಬ್ಬರದು ಅಂತರ್ಜಾತಿ ಮದುವೆ. ವಿವಾಹಕ್ಕೂ ಮುನ್ನ ಮನೆ ನೋಡಿದಳು. ಹೀಗಾಗಿಯೇ ಆತನನ್ನು ಮದುವೆ ಆಗಲು ಒಪ್ಪಿಕೊಂಡಳು. ಮದುವೆಯಾದ ಬಳಿಕ ಆರಂಭದಲ್ಲಿ ಅವರಿಬ್ಬರನ್ನು ಮನೆಗೆ ಸೇರಿಸಿರಲಿಲ್ಲ. ಆದರೆ, ನಿಧಾನವಾಗಿ ಆ ಮನೆಯನ್ನು ಪ್ರವೇಶ ಮಾಡಿದಳು. ಮನೆಗೆ ಬಂದ ಮೇಲೆ ಆ ಮನೆ ನಂದು ನಂದು ಅಂತಾ ಹೇಳಿಕೊಳ್ಳಲು ಶುರು ಮಾಡಿದಳು. ರೀಲ್ಸ್, ಶಾರ್ಟ್ಸ್ ಮಾಡುವ ಮೂಲಕ ನನ್ನ ಮನೆ ಅಂತ ಹೇಳೋಕೆ ಆರಂಭಿಸಿದಳು. ಇದನ್ನು ನಾವು ರೇವಣ್ಣ ಅವರ ಗಮನಕ್ಕೆ ತಂದೆವು. ಬಳಿಕ ರೇವಣ್ಣ ಅವರು ಕೂರಿಸಿ, ಬುದ್ಧಿಮಾತು ಹೇಳಿದರು. ಈ ವೇಳೆ ನನ್ನ ಮಗಳೇ ಆ ಮನೆ ಬೇಡ ಅಂತಾ ಹೇಳಿದಳು. ರೀಲ್ಸ್ ಎಲ್ಲ ಮಾಡಿ ಈ ಮನೆ ನಂದು ಅಂತಾ ಹೇಳಿದ್ದಾಳೆ. ನನಗೆ ಈ ಮನೆ ಬೇಡ ಎಂದು ನನ್ನ ಮಗಳೇ ಹೇಳಿದಳು. ಅಲ್ಲದೆ, ಬೇರೆ ಮನೆ ಕಟ್ಟಿಕೊಳ್ಳುವುದಾಗಿ ಹೇಳಿದಳು. ಸದ್ಯ ಮನೆ ನಿರ್ಮಾಣ ಆರಂಭವಾಗಿದೆ. ಅಲ್ಲಿಯವರೆಗೆ ಶೀಟ್ ಮನೆಯಲ್ಲಿ ಇರುತ್ತೇವೆ ಎಂದು ಹೇಳಿದೆವು. ಆದರೆ, ನೂರಾರು ಕೋಟಿಗೆ ಬಾಳಿದವರು, ಶೀಟ್ ಮನೆಯಲ್ಲಿ ಇರೋದು ನನಗೆ ಇಷ್ಟವಿಲ್ಲ ಎಂದು ಹೇಳಿ ರೇವಣ್ಣ ಅವರೇ ನಮ್ಮನ್ನು ತಡೆದರು. ನನ್ನ ಮಗಳನ್ನು ಮತ್ತು ಅಳಿಯನನ್ನು ಅದೇ ಮನೆಯಲ್ಲಿ ಇರಿಸಿದರು. ನಾನು ಕೂಡ ಅವರನ್ನು ಒಪ್ಪಿಸಿ, ಅದೇ ಮನೆಯಲ್ಲಿ ಇರಿಸಿದೆ. ಒಂದು ವರ್ಷದಿಂದ ಮನೆಯಲ್ಲಿ ಇದ್ದರು. ಊಟ ಮಾಡುವಾಗಲೆಲ್ಲ ಕಾವ್ಯಾ ಗೌಡ ಜಗಳ ಮಾಡುತ್ತಾಳೆ ಎಂದರು. ಅಲ್ಲದೆ, ಮಗುವಿಗೆ ಹೊಡೆದಿದ್ದಾರೆ ಎಂಬ ಆರೋಪವೂ ಕೂಡ ಸುಳ್ಳು ಎಂದು ಹೇಳಿದರು.