‘ಮನುಷ್ಯ ಪರಿಸರ ಕಾಳಜಿಯನ್ನು ಮರೆಯುತ್ತಿದ್ದಾನೆ. ಕೆಲಸದ ನಿಮಿತ್ತ ಒಮ್ಮೆ ದೊಡ್ಡಬಳ್ಳಾಪುರಕ್ಕೆ ಹೋಗಿದ್ದಾಗ, ಅಲ್ಲಿ ವಿದ್ಯಾವಂತರೊಬ್ಬರು ಪ್ಲಾಸ್ಟಿಕ್ ಬಾಟಲಿ ಎಸೆದರು. ಅದನ್ನು ಚಿಂದಿ ಆಯುವ ಹುಡುಗನೊಬ್ಬ ಎತ್ತಿಕೊಂಡ. ಆ ಘಟನೆ ನನಗೆ ಚಿಂತಿಸುವಂತೆ ಮಾಡಿತು. ಬಳಿಕ ಕೆಲ ಗೆಳೆಯರ ಸಹಾಯ ಪಡೆದು, ಕಿರುಚಿತ್ರ ನಿರ್ದೇಶಿಸಿದೆ. ಈಗಾಗಲೇ ಅಂತಾರಾಷ್ಟ್ರೀಯ ಲಂಡನ್ ಫಿಲಂ ಫೆಸ್ಟಿವಲ್, ಸ್ಪಾನಿಷ್ ಸನ್ ಸಿನಿ ಫೆಸ್ಟಿವಲ್, ಬೇ ಆಫ್ ಬೆಂಗಾಲ್ ಮತ್ತು ತೆಲಂಗಾಣ ಅಂತಾರಾಷ್ಟ್ರೀಯ ಚಿತ್ರೋತ್ಸವ, ದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ಕಿರುಚಿತ್ರ ಎಂಬ ಪ್ರಮಾಣ ಪತ್ರ ಪಡೆದಿದೆ. ಹಾಗೆಯೇ ಸಂಸದ, ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ನಮ್ಮ ಕಿರುಚಿತ್ರ ನೋಡಿ, ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಕಿರುಚಿತ್ರದ ಬಳಿಕ ಚಿಂದಿ ಆಯುವ ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ದೇವೇಗೌಡ ಮಾಹಿತಿ ಹಂಚಿಕೊಂಡರು. ಬಾಲ ಕಲಾವಿದ ಹೃದಯ್, ಪವಿತ್ರ ಕಲಾಬಳಗದಲ್ಲಿದ್ದಾರೆ. ಸಂದೀಪ್ ಛಾಯಾಗ್ರಹಣ ಕಿರುಚಿತ್ರಕ್ಕಿದೆ.