ನಟ ಸಿದ್ಧಾರ್ಥ್ ಪ್ರಭು ಕಾರು ಅಪಘಾತ: ಗಾಯಗೊಂಡಿದ್ದ ವ್ಯಕ್ತಿ ಸಾವು, ನಟನಿಗೆ ಸಂಕಷ್ಟ! Siddharth Prabhu

ನಟ ಸಿದ್ಧಾರ್ಥ್ ಪ್ರಭು (ಚಿತ್ರ Instagram)
ನಟ ಸಿದ್ಧಾರ್ಥ್ ಪ್ರಭು (ಚಿತ್ರ Instagram)
Published on
ತಿರುವನಂತಪುರಂ: ಮಲಯಾಳಂ ದೂರದರ್ಶನ ನಟ ಸಿದ್ದಾರ್ಥ್​ ಪ್ರಭು (Sidharth Prabhu) ಚಲಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ತಮಿಳುನಾಡು ಮೂಲದ ಲಾಟರಿ ಮಾರಾಟಗಾರ ತಂಕರಾಜ್ ಚಿಕಿತ್ಸೆ ಫಲಕಾರಿಯಾಗದೆ (ಜ.01) ರಂದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಘಟನೆ ಏನು?

ಕ್ರಿಸ್​ಮಸ್​ ಹಬ್ಬದ (ಡಿ.25)ದಂದು ನಟ ಸಿದ್ದಾರ್ಥ್​ ಅವರ ಕಾರು ನಿಯಂತ್ರಣ ತಪ್ಪಿ ಲಾಟರಿ ಟಿಕೆಟ್​ ಮಾರುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರಕ್ಕೂ ಹೆಚ್ಚು ಕಾಲ ಚಿಕಿತ್ಸೆ ಪಡೆದ ನಂತರ ಚಿಕಿತ್ಸೆ ಫಲಕಾರಿಯಾಗದೆ (ಜ. 01) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ನಂತರ ಸುತ್ತಮುತ್ತಲಿನ ಜನರು ಗಾಯಾಳುವನ್ನು ರಕ್ಷಿಸಲು ಧಾವಿಸಿದ್ದು, ಈ ವೇಳೆ ಸ್ಥಳೀಯರು ನಟನೊಂದಿಗೆ ತೀವ್ರ ವಾಗ್ವಾದಕ್ಕೆ ಇಳಿದಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಟ ಸಿದ್ದಾರ್ಥ್​ನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ.
ಆರಂಭದಲ್ಲಿ ಸಿದ್ದಾರ್ಥ್​ ಅಜಾಗರೂಕ ಚಾಲನೆ, ಕುಡಿದು ವಾಹನ ಚಲಾಯಿಸಿರುವ ಆರೋಪವನ್ನು ಹೊರಿಸಲಾಗಿತ್ತು. ಆದರೆ ತಂಗರಾಜ್ ನಿಧನದ ನಂತರ ಪ್ರಕರಣವನ್ನು ಇನ್ನಷ್ಟು ಗಂಭೀರವಾಗಿ ತನಿಖೆ ನಡೆಸುತ್ತಿರುವುದಾಗಿ ಚಿಂಗವನಂ ಪೊಲೀಸರು ತಿಳಿಸಿದ್ದಾರೆ.
ಸಿದ್ಧಾರ್ಥ್ ಪ್ರಭು 'ಉಪ್ಪುಂ ಮುಳಕುಂ', 'ತಟ್ಟೀಂ ಮುಟ್ಟೀಂ' ಮುಂತಾದ ಧಾರವಾಹಿಗಳ ಮೂಲಕ ಜನರ ಮನೆ ಮಾತಾಗಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net