ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಸೀರಿಯಲ್​ ನಟಿ..!

Preethik
Published on

ಮುಂಬೈ: ಕಲಾವಿದರು ಮಾದಕ ದ್ರವ್ಯ ಸೇವನೆ ಮತ್ತು ವಿತರಣೆಯಲ್ಲಿ ಭಾಗಿಯಾಗಿರುವ ಮತ್ತೊಂದು ಡ್ರಗ್ಸ್​ ಪೂರೈಕೆ ಜಾಲವನ್ನು ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ (ಎನ್​ಸಿಬಿ ಭೇದಿಸಿದೆ.

ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಕಿರುತೆರೆ ನಟಿ ಪ್ರೀತಿಕಾ ಚೌಹಾಣ್​ ಡ್ರಗ್ಸ್ ಖರಿದೀಸುವಾಗ ರೆಡ್​ ಹ್ಯಾಂಡ್​ ಆಗಿ ಎನ್​ಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಆಕೆಯನ್ನು ಬಂಧಿಸಲಾಗಿದ್ದು, ಕಿಲಾ ಕೋರ್ಟ್​ ಮುಂದೆ ಹಾಜರುಪಡಿಸಲಾಗುತ್ತದೆ. ಪ್ರೀತಿಕಾ ಸಾವಧಾನ್​ ಇಂಡಿಯಾ ಮತ್ತು ದೇವೊ ಕೆ ದೇವ್​ ಮಹಾದೇವ್​ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಮುಂಬೈನ ವೆರ್ಸೋವಾದ ಎರಡು ಏರಿಯಾಗಳಲ್ಲಿ ಎನ್​ಸಿಬಿ ಅಧಿಕಾರಿಗಳು ಮಫ್ತಿಯಲ್ಲಿದ್ದರು. ಈ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ದಿವಂಗತ ನಟ ಸುಶಾಂತ್​ ಸಿಂಗ್​ ರಜಪೂತ್​ ಸಿಂಗ್​ ಸಾವಿನ ಪ್ರಕರಣದಲ್ಲಿ ಡ್ರಗ್ಸ್​ ನಂಟು ತಳುಕು ಹಾಕಿಕೊಂಡಿದ್ದು, ಇದರ ತನಿಖೆ ನಡೆಸುತ್ತಿರುವ ಎನ್​ಸಿಬಿ ಅಧಿಕಾರಿಗಳು ಡ್ರಗ್ಸ್​ ಜಾಲದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಸುಶಾಂತ್​ ಸಿಂಗ್​ ಮಾಜಿ ಗೆಳತಿ ರಿಯಾ ಚಕ್ರವರ್ತಿ ಡ್ರಗ್ಸ್​ ಜಾಲದ ಆರೋಪದಲ್ಲಿ ಸಿಲುಕಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net