ಇನ್ನೊಂದು ತಾಜ್​ಮಹಲ್; ನೈಜ ಘಟನೆ ಆಧಾರಿತ ಸಿನಿಮಾ

Taj mahal
Published on

ಬೆಂಗಳೂರು: ನೈಜ ಘಟನೆ ಆಧರಿಸಿ ಸಾಕಷ್ಟು ಸಿನಿಮಾಗಳು ಚಂದನವನದಲ್ಲಿ ತಯಾರಾಗಿವೆ. ಇದೀಗ ಅದೇ ಸಾಲಿಗೆ ಸೇರ್ಪಡೆಯಾಗುತ್ತಿದೆ ‘ತಾಜ್​ ಮಹಲ್-2’. ಹಾಗಂತ ಈ ಹಿಂದೆ ಆರ್.ಚಂದ್ರು ನಿರ್ದೇಶನದ ತಾಜ್​ಮಹಲ್ ಚಿತ್ರದ ಮುಂದುವರಿದ ಭಾಗವೇ ಎಂದುಕೊಳ್ಳಬೇಡಿ. ಅದೇ ಬೇರೆ, ಇದೇ ಬೇರೆ!

‘ಡೇಂಜರ್ ಝೋನ್’, ‘ನಿಶ್ಯಬ್ಧ-2’, ‘ಅನುಷ್ಕ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ದೇವರಾಜ್ ಕುಮಾರ್, ಇದೀಗ ‘ತಾಜ್​ಮಹಲ್ -2’ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ‘ಈ ಸಿನಿಮಾದ ಕಥೆಯೇ ರೋಚಕವಾಗಿದೆ. ಪ್ರೀತಿ, ಪ್ರೇಮದ ವಿಷಯವಾಗಿದ್ದರಿಂದ ತಾಜ್​ವುಹಲ್ ಶೀರ್ಷಿಕೆ ಇಟ್ಟಿದ್ದೇವೆ. ನಿರ್ದೇಶನದ ಜತೆಗೆ ನಾಯಕನಾಗಿಯೂ ನಟಿಸಿದ್ದೇನೆ. ಶೂಟಿಂಗ್ ಮುಕ್ತಾಯವಾಗಿದೆ’ ಎಂದರು. ಇನ್ನು ಮುಂಬೈ ಮೂಲದ ಸಮೃದ್ಧಿ ಶುಕ್ಲಾ ಈ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿದ್ದು, ಮೊದಲ ಸಿನಿಮಾ ಮೇಲೆ ತುಂಬ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಇನ್ನುಳಿದಂತೆ ಸುಧಿ, ವಿಕ್ಟರಿ ವಾಸು ಸೇರಿ ಹಲವರಿದ್ದಾರೆ.

ವೀನಸ್ ಮೂರ್ತಿ ಛಾಯಾಗ್ರಹಣ ಮಾಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡು ಗಳಿವೆ. ಶ್ರೀ ಗಂಗಾಂಬಿಕಾ ಫಿಲಂಸ್ ಬ್ಯಾನರ್​ನಲ್ಲಿ ಚಿತ್ರ ನಿರ್ವಣವಾಗಿದೆ. ಸೆಪ್ಟೆಂಬರ್​ನಲ್ಲಿ ಚಿತ್ರ ಬಿಡುಗಡೆ ಮಾಡುವುದು ತಂಡದ ಪ್ಲಾನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net