ರಶ್ಮಿಕಾ-ವಿಜಯ್ ಎರಡನೇ ಸಿನಿಮಾಗೆ ತಂದೆ-ತಾಯಿ ವಿರೋಧ ವ್ಯಕ್ತಪಡಿಸಿದ್ದೇಕೆ? ಬಹಿರಂಗವಾಯ್ತು ಶಾಕಿಂಗ್ ವಿಚಾರ! Rashmika Mandanna
ಚಿತ್ರ Instagram
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಾನು ನನ್ನ ಪೋಷಕರು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಜಗಳವಾಡಿದ ನಂತರ ಚಿತ್ರರಂಗಕ್ಕೆ ಕಾಲಿಟ್ಟೆ
ಸಿನಿಮಾ ಕುಟುಂಬದ ಹಿನ್ನಲೆ ಇಲ್ಲದಿದ್ದರೂ ನಾನು ತೆರೆ ಮೇಲೆ ಬರಲು ಬಹಳ ಶ್ರಮ ಪಟ್ಟಿದ್ದೇನೆ
ನನ್ನ ಹೆತ್ತವರು ವಿಜಯ್ ಜೊತೆ ಎರಡನೇ ಚಿತ್ರ ಮಾಡಬೇಡ ಎಂದು ಒತ್ತಡ ಹೇರಲು ಪ್ರಾರಂಭಿಸಿದರು
Rashmika Mandanna: ಟಾಲಿವುಡ್ನ ಸೂಪರ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ವಿವಾಹ ಪೂರ್ವ ಸಂಭ್ರಮದ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾ ಸದ್ಯ ಸುದ್ದಿಯಲ್ಲಿದ್ದಾರೆ. ಈ ಮಧ್ಯೆ ಗೀತ ಗೋವಿಂದಂ ನಂತರ, ಡಿಯರ್ ಕಾಮ್ರೇಡ್ ಚಿತ್ರದಲ್ಲಿ ವಿಜಯ್ ಜೊತೆ ತೆರೆ ಹಂಚಿಕೊಳ್ಳಲು ರಶ್ಮಿಕಾ ಹೆತ್ತವರನ್ನು ಒಪ್ಪಿಸಲು ಎಷ್ಟು ಕಷ್ಟಪಡಬೇಕಾಯಿತು ಎಂಬುದರ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ.
ಈ ವಿಚಾರದ ಬಗ್ಗೆ ಸಂಭಾಷಣೆಯೊಂದರಲ್ಲಿ ಮಾತನಾಡಿದ ರಶ್ಮಿಕಾ, ನಾನು ನನ್ನ ಪೋಷಕರು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಜಗಳವಾಡಿದ ನಂತರ ಚಿತ್ರರಂಗಕ್ಕೆ ಕಾಲಿಟ್ಟೆ. ಕುಟುಂಬಕ್ಕೆ ಹುಡುಗಿಯರಿಗೆ ಇದು ಸುರಕ್ಷಿತವಲ್ಲ ಎಂಬ ಅಭಿಪ್ರಾಯವಿತ್ತು. ಸಿನಿಮಾ ಕುಟುಂಬದ ಹಿನ್ನಲೆ ಇಲ್ಲದಿದ್ದರೂ ನಾನು ತೆರೆ ಮೇಲೆ ಬರಲು ಬಹಳ ಶ್ರಮ ಪಟ್ಟಿದ್ದೇನೆ ಎಂದರು.
ಆದಾಗ್ಯೂ, ಭರತ್ ಸರ್ ನನಗೆ ಸ್ಕ್ರಿಪ್ಟ್ ಕಳುಹಿಸಿದಾಗ, ನಿಜವಾಗಿಯೂ ಸಿನಿಮಾ ಮಾಡಲು ನಾನು ಒಪ್ಪಿಕೊಂಡಿದ್ದೆ. ಆದರೆ, ಕುಟುಂಬವನ್ನು ಮನವೊಲಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬೇಕಾಯಿತು. ಇದರಿಂದ ಹಲವು ಬಾರಿ ಜಗಳ ಕೂಡಾ ಸಂಭವಿಸಿದೆ ಎಂದರು.
ಈ ವೇಳೆ ನನ್ನ ಹೆತ್ತವರು ವಿಜಯ್ ಜೊತೆ ಎರಡನೇ ಚಿತ್ರ ಮಾಡಬೇಡ ಎಂದು ಒತ್ತಡ ಹೇರಲು ಪ್ರಾರಂಭಿಸಿದರು. ಆದಗ ನಾನು ಯಾರ ಜೊತೆ ಮಾಡುತ್ತಿದ್ದೇನೆ ಎಂಬುದು ಮುಖ್ಯವಲ್ಲ ಎಂದು ಹೇಳಿದೆ ಎಂದು ಹೇಳಿದರು.
ಈ ಚಿತ್ರದಲ್ಲಿ ನಟಿಸಲು ರಶ್ಮಿಕಾ ಒಪ್ಪಿಕೊಂಡ ನಂತರ, ಅದು ಅವಳಿಗೆ ಎಷ್ಟು ಕಷ್ಟವಾಗಿತ್ತು ಎಂದು ನನಗೆ ತಿಳಿದಿದೆ. ಈ ನಿರ್ಧಾರ ಆಕೆಯ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೂ, ಚಿತ್ರದಿಂದ ಹಿಂದೆ ಸರಿಯಲಿಲ್ಲ. ರಶ್ಮಿಕಾ ನಿನಗೆ ಧನ್ಯವಾದಗಳು ಎಂದು ವಿಜಯ್ ದೇವರಕೊಂಡ ಅಭಿಪ್ರಾಯ ಸೂಚಿಸಿದರು.
ಹಿನ್ನೆಲೆ
ಇತ್ತೀಚಿಗೆ ಮದುವೆಯಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಕನಸಿನ ವಿವಾಹ ಆಚರಣೆಗಳನ್ನು ಅಭಿಮಾನಿಗಳಿಗೆ ತೋರಿಸುತ್ತಲೇ ಇದ್ದರು. ಆದಾಗ್ಯೂ, ತಮ್ಮ ಅರಿಶಿಣ ಶಾಸ್ತ್ರದ ಕೆಲವೊಂದು ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾವನಾತ್ಮಕ ಸಾಲುಗಳನ್ನು ಬರೆದಿದ್ದರು.
ಆಚರಣೆಯ ಪೋಟೋಗಳನ್ನು ಹಂಚಿಕೊಂಡಿದ್ದ ರಶ್ಮಿಕಾ, ಅದು ಕೇವಲ ಹಳದಿ ಶಾಸ್ತ್ರವಾಗಿರಲಿಲ್ಲ, ಬದಲಿಗೆ 'ಹಳದಿ + ಹೋಳಿ' ಹಬ್ಬದಂತಿತ್ತು ಎಂದು ಬರೆದಿದ್ದಾರೆ.
ಆ ದಿನ ನಾವೆಲ್ಲರೂ ಬಣ್ಣದಲ್ಲಿ ಎಷ್ಟೊಂದು ಮುಳುಗಿ ಹೋಗಿದ್ದೆವು ಎಂದರೆ, ಇಂದಿಗೂ ನನ್ನ ಕೂದಲಿನ ಎಳೆಗಳಲ್ಲಿ ಆ ಕೆಂಪು ಬಣ್ಣದ ತುಸು ಛಾಯೆ ಹಾಗೆಯೇ ಉಳಿದುಕೊಂಡಿದೆ. ಅವತ್ತಿನ ಎಲ್ಲ ಆಟಗಳಲ್ಲೂ ನನ್ನ ಅದ್ಭುತ 'ಟೀಮ್ ಬ್ರೈಡ್' ಸಹಾಯದಿಂದ ನಾನೇ ಗೆದ್ದೆ ಎಂದು ಹೇಳಿದರು (ಏಜೆನ್ಸೀಸ್).