ಈ ಭೇಟಿಯ ಕುರಿತು ಮಾತನಾಡಿದ ವಿಜಯ್ ದೇವರಕೊಂಡ, ಎಲ್ಲರಿಗೂ ಬೋನಲು ಹಬ್ಬದ ಶುಭಾಶಯಗಳು. ನಾನು ಮೊದಲನೇ ಸಲ ಈ ದೇವಾಸ್ಥಾನಕ್ಕೆ ಭೇಟಿ ಕೊಟ್ಟು, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ. ನನ್ನ ಹಾಗೂ ಭಕ್ತರ ಆಶಯಗಳನ್ನು ಈಡೇರಿಸಲಿ ಎಂದು ಬೇಡಿಕೆ ಇಟ್ಟಿದ್ದೇನೆ. ನನ್ನೊಂದಿಗೆ ನಿರ್ದೇಶಕ ಸಂದೀಪ್ ಕೂಡ ಬಂದಿದ್ದಾರೆ. ಅವರ ನಿರ್ಮಾಣ ಸಂಸ್ಥೆಯ ಹೆಸರು ಭದ್ರಕಾಳಿ, ಹೀಗಾಗಿ ದೇವಿಯ ಆಶೀರ್ವಾದ ಪಡೆಯಲು ಬಂದಿದ್ದೆವು ಎಂದು ಮಾತನಾಡಿದರು.