ಮತ್ತೆ ಬಂದ ವಿಜಯ್​ ದೇವರಕೊಂಡ ಮಾಜಿ ಪ್ರೇಯಸಿ: ಯಾರು ಈ ವರ್ಜಿನಿ? ಏನಿದು ಪ್ರೇಮಕತೆ? Vijay Deverakonda

ವಿಜಯ್​ ದೇವರಕೊಂಡ ( Vijay Deverakonda  ) ಮಾಜಿ ಪ್ರೇಯಸಿಯ ಫೋಟೋ ವೈರಲ್​
ವಿಜಯ್​ ದೇವರಕೊಂಡ ( Vijay Deverakonda ) ಮಾಜಿ ಪ್ರೇಯಸಿಯ ಫೋಟೋ ವೈರಲ್​
Published on

ಪ್ರಮುಖ ಮುಖ್ಯಾಂಶಗಳು

  • ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ
  • ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ವಿಜಯ್​-ರಶ್ಮಿಕಾ ವಿವಾಹ ನಡೆಯಲಿದೆಯಂತೆ
  • ವಿಜಯ್​ ದೇವರಕೊಂಡರ ಮಾಜಿ ಪ್ರೇಯಸಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ
Vijay Deverakonda : ಟಾಲಿವುಡ್ ಸ್ಟಾರ್ ಹೀರೋ ವಿಜಯ್ ದೇವರಕೊಂಡ ಮತ್ತು ಪ್ಯಾನ್​ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಈಗಾಗಲೇ ಅವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಫೆಬ್ರವರಿ 26 ರಂದು ಇಬ್ಬರು ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಎರಡೂ ಕುಟುಂಬದಲ್ಲಿ ಮದುವೆ ಸಿದ್ಧತೆ ನಡೆಯುತ್ತಿದ್ದು, ಇದರ ನಡುವೆ ವಿಜಯ್​ ದೇವರಕೊಂಡರ ಮಾಜಿ ಪ್ರೇಯಸಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ.
ಬೆಲ್ಜಿಯಂ ಮಾಡೆಲ್ ವರ್ಜಿನಿ ಎಂದು ಗುರುತಿಸಲಾದ ಮಹಿಳೆಯ ಜತೆ ವಿಜಯ್​ ದೇವರಕೊಂಡು ತುಂಬಾ ಕ್ಲೋಸ್​ ಆಗಿ ಇರುವ ಫೋಟೋಗಳು ವೈರಲ್​ ಆಗುತ್ತಿವೆ. ವಿಜಯ್​ ಜತೆ ಹಾಸಿಗೆ ಮೇಲಿರುವ ಮತ್ತು ಕಿಸ್​ ಮಾಡುತ್ತಿರುವ ಫೋಟೋಗಳು ಭಾರಿ ಸದ್ದು ಮಾಡುತ್ತಿವೆ. ಇದರೊಂದಿಗೆ ಮಾಡೆಲ್​ ವರ್ಜಿನಿ ಕುಟುಂಬ, ವಿಜಯ್​ ಕುಟುಂಬದ ಜತೆಗಿರುವ ಫೋಟೋಗಳು ಕೂಡ ವೈರಲ್​ ಆಗುತ್ತಿವೆ. ಮದುವೆಗೂ ಮುನ್ನವೇ ಈ ಫೋಟೋಗಳು ಆನ್​ಲೈನ್​ನಲ್ಲಿ ಕಾಣಿಸಿಕೊಂಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಿನಿಮಾದಲ್ಲಿ ನಟನೆ

ಅಂದಹಾಗೆ, ಈ ಫೋಟೋಗಳು 2016 ರಲ್ಲಿ ಪೆಲ್ಲಿ ಚೂಪುಲು ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ತೆಗೆದಂತಹ ಫೋಟೋಗಳಾಗಿವೆ. ಈ ಚಿತ್ರವು ವಿಜಯ್ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು. ಮಾಡೆಲ್​ ವರ್ಜಿನಿ, ಈ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಯೂಟ್ಯೂಬ್ ಕಚೇರಿಯ ಉದ್ಯೋಗಿಯಾಗಿ ವರ್ಜಿನಿ ನಟಿಸಿದ್ದಾರೆ.

ಕೋವಿಡ್​ ಭೇಟಿ

2016ರಲ್ಲೇ ವಿಜಯ್ ಹಾಗೂ ವರ್ಜಿನಿ​ ಕುರಿತು ಅನೇಕ ವರದಿಗಳು ಪ್ರಕಟವಾದವು. ಇಬ್ಬರ ನಡುವಿನ ಸ್ನೇಹ, ಸಂಬಂಧವಾಗಿ ಬೆಳೆದಿದೆ ಎಂದು ಆ ಸಮಯದಲ್ಲಿ ಬರೆಯಲಾಗಿತ್ತು. ಅಲ್ಲದೆ, ಈ ಹಿಂದೆ ಅಂದರೆ, ಕೋವಿಡ್ ಅವಧಿಯಲ್ಲಿ ವರ್ಜಿನಿಯನ್ನು ಭೇಟಿಯಾಗಲು ವಿಜಯ್​, ಯುರೋಪ್‌ಗೆ ಪ್ರಯಾಣ ಬೆಳೆಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಇಷ್ಟೆಲ್ಲ ವರದಿಗಳು ಇದ್ದರು ಕೂಡ ವಿಜಯ್ ಆಗಲಿ ಅಥವಾ ವರ್ಜಿನಿಯಾಗಲಿ ತಮ್ಮ ಸಂಬಂಧದ ಸ್ವರೂಪವನ್ನು ಎಂದಿಗೂ ಸಾರ್ವಜನಿಕವಾಗಿ ದೃಢಪಡಿಸಲಿಲ್ಲ.
2018ರಲ್ಲಿ 'ನೋಟಾ' ಸಿನಿಮಾ ಬಿಡುಗಡೆಯಾಗುವ ಮೊದಲೇ ಇಬ್ಬರೂ ಬೇರೆಯಾದರು ಎಂಬುದು ಟಾಲಿವುಡ್​ ಗಲ್ಲಿಯಲ್ಲಿ ಕೇಳಿಬಂದ ಮಾತು. ಅಂದಿನಿಂದ, ವಿಜಯ್ ತಮ್ಮ ವೈಯಕ್ತಿಕ ಜೀವನವನ್ನು ಹೆಚ್ಚಾಗಿ ಖಾಸಗಿಯಾಗಿಯೇ ಇಟ್ಟುಕೊಂಡಿದ್ದಾರೆ.

ರಶ್ಮಿಕಾ ಜತೆ ಮದುವೆ

ಅಂದಹಾಗೆ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಳೆದ ವರ್ಷ ದೀಪಾವಳಿಯಂದು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಅನೇಕ ವರದಿಗಳು ಇವೆ. ಆದರೆ, ಅವರಿಬ್ಬರು ಈ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ. ಇಬ್ಬರ ವಿವಾಹ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದ್ದು, ಮಾರ್ಚ್​ 4ರಂದು ಹೈದರಾಬಾದ್​ನಲ್ಲಿ ರಿಸೆಪ್ಶನ್​ ನಡೆಯಲಿದೆ ಎಂಬ ವರದಿಗಳಿವೆ. ಈ ಸಂಭ್ರಮದ ಹೊರತಾಗಿಯೂ, ಮದುವೆ ಅಥವಾ ಆರತಕ್ಷತೆಯ ಬಗ್ಗೆ ವಿಜಯ್ ಅಥವಾ ರಶ್ಮಿಕಾ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಇದೆಲ್ಲದರ ನಡುವೆ ಮತ್ತೆ ಕಾಣಿಸಿಕೊಂಡಿರುವ ಫೋಟೋಗಳು ಆನ್‌ಲೈನ್‌ನಲ್ಲಿ ಅಭಿಮಾನಿಗಳನ್ನು ಚರ್ಚೆಗೆ ದೂಡಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net