ಸಾವಿನ ಜೊತೆ ಆಟವೇ... ಭಾರತೀಯ ಚಿತ್ರರಂಗದಲ್ಲಿ ಯಾರೂ ಮಾಡದ ಸಾಹಸಕ್ಕೆ ಕೈಹಾಕಿದ ರಾಜಮೌಳಿ | Varanasi Film

'ವಾರಣಾಸಿ' ಸಿನಿಮಾ ಪೋಸ್ಟರ್​
'ವಾರಣಾಸಿ' ಸಿನಿಮಾ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • 1,100 ಕೋಟಿ ರೂ. ಬಜೆಟ್​ ಚಿತ್ರದ ರಿಲೀಸ್​ ದಿನಾಂಕ ಘೋಷಣೆ
  • ಮಹೇಶ್​ ಬಾಬು ಅಭಿನಯದ ಬಹುನಿರೀಕ್ಷಿತ ಸಿನಿಮಾ ದಾಖಲೆಗೆ ಸಜ್ಜು
  • ಇಲ್ಲಿಯವರೆಗೆ ಭಾರತೀಯ ಚಿತ್ರೋದ್ಯಮದಲ್ಲಿ ಯಾರೂ ಮಾಡದ ಸಾಹಸಕ್ಕೆ ಕೈಹಾಕಿದ ರಾಜಮೌಳಿ
  • ಏ.07, 2027ಕ್ಕೆ ಸಿನಿಮಾ ತೆರೆಗೆ ಬರಲು ಸಿದ್ಧ
ಬೆಂಗಳೂರು: ಪ್ರಸ್ತುತ, ಭಾರತೀಯ ಚಲನಚಿತ್ರೋದ್ಯಮದಲ್ಲಿ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್​ ಆಗಲು ಎದುರುನೋಡುತ್ತಿದ್ದು, ಟೈಟಲ್​, ಟೀಸರ್​ ಮತ್ತು ಟ್ರೇಲರ್​ನಿಂದಲೇ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಕೆರಳಿಸಿವೆ. ಈ ಪೈಕಿ ಟಾಲಿವುಡ್​ ಪ್ರಿನ್ಸ್​, ಮಹೇಶ್​ ಬಾಬು ಅಭಿನಯಿಸುತ್ತಿರುವ ಹಾಗೂ ಸ್ಟಾರ್​ ನಿರ್ದೇಶಕ ಎಸ್​.ಎಸ್​. ರಾಜಮೌಳಿ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್​ ಚಿತ್ರ 'ವಾರಣಾಸಿ' ಇದೀಗ ಭಾರತೀಯ ಚಿತ್ರೋದ್ಯಮದಲ್ಲಿ ಯಾರೂ ಮಾಡದ ಸಾಹಸಕ್ಕೆ ಕೈಹಾಕಿರುವುದು ಹಲವರ ಹುಬ್ಬೇರಿಸಿದೆ.

1,100 ಕೋಟಿ ರೂ.ಬಜೆಟ್​

ಸದಾ ಹೊಸತನ, ಉನ್ನತ ಮಟ್ಟದ ಗ್ರಾಫಿಕ್ಸ್​, ವಿಎಫ್​ಎಕ್ಸ್​ ವಿಶ್ಯೂವಲ್ಸ್​ ಹಾಗೂ ಸಿನಿಮ್ಯಾಟಿಕ್​ ಅನುಭವವನ್ನು ತಮ್ಮ ಚಿತ್ರಗಳಲ್ಲಿ ತುಂಬಿಸುವ ರಾಜಮೌಳಿ, 'ವಾರಣಾಸಿ' ಚಿತ್ರವನ್ನು ಸುಮಾರು 1,100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ವರದಿಗಳ ಪ್ರಕಾರ, ಪ್ರಸ್ತುತ ಭಾರತದ ಎರಡನೇ ಅತಿದೊಡ್ಡ ಬಜೆಟ್ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು, ಪೃಥ್ವಿರಾಜ್ ಸುಕುಮಾರನ್ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ನಿನ್ನೆಯಷ್ಟೇ (ಜ.31) ಚಿತ್ರದ ಅಧಿಕೃತ ರಿಲೀಸ್​ ದಿನಾಂಕವನ್ನು ಘೋಷಿಸಿರುವ ಚಿತ್ರತಂಡ, ಜಾಗತಿಕ ಮಟ್ಟದಲ್ಲಿ ತಮ್ಮ ಸಿನಿಮಾದ ಟೈಟಲ್ ಮೂಲಕ ಸದ್ದು ಮಾಡುತ್ತಿರುವುದು ವಿಶೇಷ. ದೊಡ್ಡ ತಾರಾಬಳಗ ಮತ್ತು ದಾಖಲೆಯ ಬಜೆಟ್​ನಲ್ಲಿ ಚಿತ್ರವನ್ನು ತೆರೆಗೆ ತರಲು ಮುಂದಾಗಿರುವ ರಾಜಮೌಳಿ, ಭಾರತೀಯ ಚಿತ್ರೋದ್ಯಮದ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾರೊಬ್ಬರು ಮಾಡದ ಪ್ರಯತ್ನದತ್ತ ತಮ್ಮ ಚಿತ್ತ ಹರಿಸಿರುವುದು ನಿಜಕ್ಕೂ ಸಿನಿಪ್ರಿಯರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಅಷ್ಟಕ್ಕೂ ಅದೇನೆಂದರೆ, ಮೊದಲ ಬಾರಿಗೆ ಭಾರತೀಯ ಚಿತ್ರವೊಂದು ಅಂಟಾರ್ಕ್ಟಿಕಾದಲ್ಲಿ ಚಿತ್ರೀಕರಣಗೊಳ್ಳುತ್ತಿದೆ.

ವಿಶ್ವದ ಐದನೇ ಸಿನಿಮಾ

ಅಂತಾರಾಷ್ಟ್ರೀಯ ಚಿತ್ರಗಳ ಪಟ್ಟಿಯಲ್ಲಿ ಮೊದಲ ಭಾರತೀಯ ಸಿನಿಮಾ
ರಾಜಮೌಳಿ ನಿರ್ದೇಶಿಸಲಿರುವ ಈ ಚಿತ್ರವು, ಅಂಟಾರ್ಕ್ಟಿಕಾ ಪ್ರದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಸಿನಿಮಾ ಮತ್ತು ವಿಶ್ವದ ಐದನೇ ಸಿನಿಮಾ ಎಂಬ ಪಟ್ಟಿಗೆ ಸೇರಲಿದೆ. ಹವಾಮಾನ ವೈಪರೀತ್ಯ ಮತ್ತು ಕಟ್ಟುನಿಟ್ಟಿನ ಕ್ರಮ, ನಿಯಮಗಳಿರುವ ಕಾರಣ ಕೆಲವೇ ಕೆಲವು ಸಿನಿಮಾಗಳು ಮಾತ್ರ ಈ ಪ್ರದೇಶದಲ್ಲಿ ಶೂಟಿಂಗ್​ ಮಾಡುವಲ್ಲಿ ಯಶಸ್ವಿಯಾಗಿವೆ. ಫೆಬ್ರವರಿ ಕೊನೆಯ ವಾರದಲ್ಲಿ ಚಿತ್ರತಂಡ ಅಂಟಾರ್ಕ್ಟಿಕಾಗೆ ಪ್ರಯಾಣಿಸಲಿದೆ ಎಂದು ವರದಿಗಳು ಉಲ್ಲೇಖಿಸಿವೆ. ಇದು ಭಾರತೀಯ ಸಿನಿಮಾಗೆ ಐತಿಹಾಸಿಕ ಮೈಲಿಗಲ್ಲು ಎಂದೇ ಹೇಳಬಹುದು.

ಇಲ್ಲಿಯವರೆಗೆ ಅಂಟಾರ್ಕ್ಟಿಕಾದಲ್ಲಿ ಶೂಟ್​ ಆದ ಸಿನಿಮಾಗಳಿವು

1. ದಿ ಥಿಂಗ್
2. 8​ ಬಿಲೋ
3. ಎನ್​ಕೌಂಟರ್ಸ್​ ಅಟ್​ ದಿ ಎಂಡ್​ ಆಫ್​ ದಿ ವರ್ಲ್ಡ್​
4. ಅಂಟಾರ್ಕ್ಟಿಕಾ: ಎ ಇಯರ್ ಆನ್​ ಒನ್ಸ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net