ರಾಜಮೌಳಿ 'ಗ್ಲೋಬ್‌ಟ್ರಾಟರ್' ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಟೈಟಲ್ ಅನ್ನು ಅಧಿಕೃತವಾಗಿ ಘೋಷಿಸಿದರು. ಆದರೀಗ, ಅದೇ ಶೀರ್ಷಿಕೆ ರಾಜಮೌಳಿ ಅವರನ್ನು ಸಂಕಷ್ಟಕ್ಕೆ ತಂದೊಡ್ಡಿದೆ. ಅಸಲಿಗೆ ಆಗಿದ್ದೇನು? ಎಂದು ನೋಡುವುದಾದರೆ, ಸಾಯಿ ಕುಮಾರ್ ಮತ್ತು ರಾಕುಲ್ ಪ್ರೀತ್ ಸಿಂಗ್ ನಟಿಸಿದ 'ರಫ್' ಚಿತ್ರವನ್ನು ನಿರ್ದೇಶಿಸಿದ್ದ ಸಿಎಚ್ ಸುಬ್ಬಾ ರೆಡ್ಡಿ ಬಹಳ ಸಮಯದ ನಂತರ ಮತ್ತೊಂದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆದಾಗ್ಯೂ, ಈ ಚಿತ್ರಕ್ಕೂ 'ವಾರಣಾಸಿ' ಎಂಬ ಶೀರ್ಷಿಕೆಯನ್ನೇ ಇಡಲಾಗಿದೆ. ಇದೇ ಈಗ ಸಮಸ್ಯೆಗೆ ಕಾರಣವಾಗಿರುವುದು.