ತ್ರಿಷಾ ನಿಷ್ಕಲ್ಮಶ ಜೀವ: ಅವಳಿಗೇಕೆ ಕಾಟ ಕೊಡುತ್ತೀರಿ? ಪಾಪಾರಾಜಿಗಳ ವರ್ತನೆಗೆ ಖುಷ್ಬೂ ಗರಂ! Kushboo Sundar

ನಟ ವಿಜಯ್​ ಮತ್ತು ನಟಿ ತ್ರಿಷಾ, ನಟಿ ಖುಷ್ಬೂ
ನಟ ವಿಜಯ್​ ಮತ್ತು ನಟಿ ತ್ರಿಷಾ, ನಟಿ ಖುಷ್ಬೂ
Published on

ಪ್ರಮುಖ ಮುಖ್ಯಾಂಶಗಳು

  • ದಳಪತಿ ವಿಜಯ್​ ವಿಚ್ಛೇದನ ವಿಚಾರ
  • ವಿಜಯ್ ಜೊತೆ ತಿರುಗಾಡಿದ್ದಕ್ಕೆ ನಟಿ ತ್ರಿಷಾಗೆ ಟ್ರೋಲಿಂಗ್​
  • ನಟಿ ತ್ರಿಷಾ ಬೆಂಬಲಕ್ಕೆ ನಿಂತ ನಟಿ ಖುಷ್ಬೂ
ಚೆನ್ನೈ: ಸದ್ಯ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಿಗಧಿಯಾಗಿದೆ,  ಆದರೂ ಸಹ ನಟ, ರಾಜಕಾರಣಿ ದಳಪತಿ ವಿಜಯ್​ ವಿಚ್ಛೇದನದ ಕುರಿತಾದ ವದಂತಿಗಳ ಕ್ರೇಜ್​ ಬೇರೆ ಲೆವೆಲ್​ನಲ್ಲಿದೆ.
ವಿಚ್ಛೇದನದ ಸುದ್ದಿ ನಂತರ ನಟ ವಿಜಯ್​ ನಟಿ ತ್ರಿಷಾ ಕೃಷ್ಣನ್​ ಜೊತೆಗೆ ಮದುವೆಯೊಂದಕ್ಕೆ ಭೇಟಿ ನೀಡಿದ್ದು, ಭಾರಿ ಸಂಚಲನಕ್ಕೆ ಕಾರಣವಾಗಿದೆ. ಈ ಘಟನೆ ನಡೆದ ಬಳಿಕ ಟ್ರೋಲರ್​ಗಳು ಹಾಗೂ ಪಾಪಾರಾಜಿಗಳು ನಟ ವಿಜಯ್​ ಮತ್ತು ನಟಿ ತ್ರಿಷಾರಳನ್ನು ಬೆಂಬಿಡದೆ ಕಾಡುತ್ತಿದ್ದಾರೆ.
ಈ ವಿಚಾರದ ಬಗ್ಗೆ ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ (Kushboo Sundar)​ ಮೌನ ಮುರಿದಿದ್ದು, ನಟಿ ತ್ರಿಷಾಳ ಜೊತೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪಾಪಾರಾಜಿಗಳು ನಡೆದುಕೊಂಡ ರೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.

ತ್ರಿಷಾ ಬೆನ್ನಿಗೆ ನಿಂತ ನಟಿ

ನಟ ವಿಜಯ್​ ಬದುಕಿನಲ್ಲಿ ಏನೋ ನಡೆಯುತ್ತಿದೆ ಎಂದರೆ ಅದಕ್ಕೆ ತ್ರಿಷಾ ಕಾರಣ ಎನ್ನುವುದು ಸರಿಯಲ್ಲ. ವಿಜಯ್​ ಹಾಗೂ ತ್ರಿಷಾ ಉತ್ತಮ ಸ್ನೇಹಿತರಿರಬಹುದು. ತ್ರಿಷಾ ನಾನು ನೋಡಿರುವ ಒಂದು ನಿಷ್ಕಲ್ಮಶ ಜೀವ ಎಂದು ಖುಷ್ಬೂ ಹೇಳಿದ್ದಾರೆ.
ನಾವು ಪ್ರಸ್ತುತ ಯಾವ ಕಾಲದಲ್ಲಿದ್ದೇವೆ ಎಂದರೆ, ನಾವೇ ಜೋರಾಗಿ ಸೀನಿದರೂ ಸಹ ಬೇರೆಯವರ ಮೇಲೆ ಆಪಾದನೆ ಹಾಕುವ ಕಾಲದಮಾನಲ್ಲಿ ಬದುಕುತ್ತಿದ್ದೆವೆ. ಅವರ ವೈಯಕ್ತಿಕ ಬದುಕನ್ನು ಅವರಿಗೆ ಬದುಕಲು ಬಿಡಿ ಎಂದು ಅವರು ಹೇಳಿದ್ದಾರೆ.

ಪಾಪಾರಾಜಿ ಸಂಸ್ಕೃತಿ ಒಳ್ಳೆಯದಲ್ಲ

ಇನ್ನು ಪಾಪಾರಾಜಿಗಳ ಬಗ್ಗೆ ಮಾತನಾಡಿದ ನಟಿ, ಇದೊಂದು ವಿಚಿತ್ರ ಕಾಯಿಲೆಯಾಗಿದೆ. ಈ ಪಾಪಾರಾಜಿ ಸಂಸ್ಕೃತಿಯಿಂದಾಗಿ ಸೆಲೆಬ್ರಿಟಿಗಳಿಗೆ ವೈಯಕ್ತಿಕ ಬದುಕೇ ಇಲ್ಲದ ಪರಿಸ್ಥಿತಿ ಎದುರಾಗಿದೆ. ಆದರೆ ಇದು ಮುಂಬೈನಲ್ಲಿ ಹೆಚ್ಚಿದೆ, ಆದರೆ ಈಗ ಇಲ್ಲಿ ಸಹ ಬೆಳೆಯುತ್ತಿರುವುದು ಕಳವಳಕಾರಿ ಸಂಗರಿಯಾಗಿದೆ ಎಂದು ಖುಷ್ಬೂ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

25 ವರ್ಷಗಳ ದಾಂಪತ್ಯದಲ್ಲಿ ಬಿರುಕು

ವಿಜಯ್ ಮತ್ತು ಸಂಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಮಾರು 25 ವರ್ಷ ಕಳೆದಿದೆ. ಜುಲೈ 1998ರಲ್ಲಿ ರಿಜಿಸ್ಟರ್ ಆಗಿ, 1999ರಲ್ಲಿ ಚೆನ್ನೈನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. 
ಆದರೆ, ಈಗ ಸಂಗೀತಾ ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ಗಂಭೀರ ಆರೋಪಗಳಿವೆ. 2021 ರಿಂದ ವಿಜಯ್ ಭಾವನಾತ್ಮಕವಾಗಿ ದೂರವಾಗಿದ್ದಾರೆ ಮತ್ತು ವೈವಾಹಿಕ ಜೀವನದಲ್ಲಿ ಅಗೌರವ ತೋರಿಸುತ್ತಿದ್ದಾರೆ ಎಂಬುದು ಸಂಗೀತಾ ಅವರ ಆರೋಪ. ಏಪ್ರಿಲ್ 20, 2026 ಕ್ಕೆ ಈ ಪ್ರಕರಣದ ವಿಚಾರಣೆ ನಡೆಯಲಿದೆ.

ಕಾರಿನಲ್ಲಿ ಒಟ್ಟಿಗೆ ಬಂದಿದ್ದೇ ವಿವಾದ

ಇತ್ತೀಚೆಗೆ ನಿರ್ಮಾಪಕ ಕಲ್ಪತಿ ಸುರೇಶ್ ಅವರ ಮಗನ ವಿವಾಹ ಆರತಕ್ಷತೆಯಲ್ಲಿ ವಿಜಯ್ ಮತ್ತು ತ್ರಿಷಾ ಒಂದೇ ಕಾರಿನಲ್ಲಿ ಬಂದು, ವೇದಿಕೆಯ ಮೇಲೆ ಒಟ್ಟಿಗೆ ಪೋಸ್ ನೀಡಿದ್ದು, ಇವರಿಬ್ಬರ ಸಂಬಂಧಕ್ಕೆ ಪುಷ್ಟಿ ನೀಡಿದಂತಾಗಿದೆ. ಇದು ಸಂಗೀತಾ ಅವರ ಕೋಪಕ್ಕೆ ಕಾರಣವಾಗಿದ್ದು, ಈ ಸಂಬಂಧ ತಮ್ಮ ಮಕ್ಕಳಿಗೆ ಮುಜುಗರ ತರುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಒಟ್ಟಿನಲ್ಲಿ, ವಿಜಯ್ ಅವರ ವೈಯಕ್ತಿಕ ಜೀವನ ಇದೀಗ ಕವಲು ದಾರಿಯಲ್ಲಿದೆ. ಕೋರ್ಟ್ ವಿಚಾರಣೆ ಏಪ್ರಿಲ್‌ಗೆ ಮುಂದೂಡಲ್ಪಟ್ಟಿದ್ದರೂ, ಸಾರ್ವಜನಿಕವಾಗಿ ಈ ಚರ್ಚೆ ಮಾತ್ರ ತಣ್ಣಗಾಗುವ ಲಕ್ಷಣಗಳೇ ಇಲ್ಲ. ತಾರಾ ಜೋಡಿಯ ಈ ವೈಯಕ್ತಿಕ ಸಂಘರ್ಷ ಅಂತಿಮವಾಗಿ ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net