ಮದುವೆ ಬಿಡಿ, ಡೇಟಿಂಗ್ ಮಾಡಲೂ ಸಮಯವಿಲ್ಲ! ವದಂತಿಗಳ ವಿರುದ್ಧ ಮೃಣಾಲ್ ಠಾಕೂರ್​ ಗರಂ..Mrunal Thakur

Mrunal Thakur (ಚಿತ್ರ Instagram)
Mrunal Thakur (ಚಿತ್ರ Instagram)
Published on
Mrunal Thakur: ಸಿನಿಮಾ ತಾರೆಯರ ವೈಯಕ್ತಿಕ ಜೀವನದ ಬಗ್ಗೆ ಗಾಸಿಪ್‌ಗಳು ಹರಡುವುದು ಸಹಜ. ಆದರೆ, ಈ ವದಂತಿಗಳು ನಟಿಯರ ವೃತ್ತಿಪರ ಕೆಲಸವನ್ನು ಮರೆಮಾಚಿದಾಗ ಅದು ಎಷ್ಟು ಕಿರಿಕಿರಿ ಉಂಟುಮಾಡುತ್ತದೆ ಎಂಬುದರ ಕುರಿತು ನಟಿ ಮೃಣಾಲ್​ ಠಾಕೂರ್​ ವಿವರಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ನಾನು ಒಬ್ಬ ನಟಿಯಾಗಿ ನನ್ನ ಚಿತ್ರಗಳಿಗಾಗಿ ಶ್ರಮಿಸುತ್ತೇನೆ. ಆದರೆ, ಚಿತ್ರಗಳು ಬಿಡುಗಡೆಯಾಗುವ ಸಮಯದಲ್ಲೇ ಮದುವೆಯಂತಹ ವದಂತಿಗಳು ಹರಡಿ ನನ್ನ ವೃತ್ತಿಜೀವನವನ್ನು ಮರೆಮಾಚಲು ನಾನು ಇಷ್ಟಪಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಾನು ಪ್ರೀತಿಯಲ್ಲಿ ಬಿದ್ದಾಗ, ಎಲ್ಲರಿಗೂ ಹೇಳುತ್ತೇನೆ

ನನ್ನ ಆರೋಗ್ಯವನ್ನು ನೋಡಿಕೊಳ್ಳಲು ಸಹ ನನಗೆ ಸಮಯ ಸಿಗುತ್ತಿಲ್ಲ. ಇನ್ನೆಲ್ಲಿ ಡೇಟಿಂಗ್​ ಮಾಡಲಿ. ನಾನು ತುಂಬಾ ಮುಕ್ತ ವ್ಯಕ್ತಿ, ನನ್ನ ಸ್ನೇಹಿತರಿಂದ ಒಂದು ಹೂವನ್ನು ಪಡೆದರೂ ಕೂಡಾ ಅದನ್ನು ಪೋಸ್ಟ್​ ಮಾಡುತ್ತೇನೆ. ಆಕಸ್ಮಾತ್​ ನಾನೇನಾರೂ ಪ್ರೀತಿಯಲ್ಲಿ ಬಿದ್ದರೆ ಖಂಡಿತವಾಗಿಯೂ ಆ ವಿಚಾರವನ್ನು ನಿಮ್ಮ ಬಳಿ ಹಂಚಿಕೊಳ್ಳುತ್ತೇನೆ ಎಂದು ಹೇಳಿದರು.
ನಾನು 1990ರ ದಶಕದಲ್ಲಿ ಬೆಳೆದವಳು. ಆ ಕಾಲದಲ್ಲಿ ಪ್ರೀತಿ ಎಂದರೆ ನಮಗೆ ನೆನಪಾಗುತ್ತಿದ್ದದ್ದೇ ಶಾರುಖ್ ಖಾನ್. ಅವರ ತೆರೆಯ ಮೇಲಿನ ವ್ಯಕ್ತಿತ್ವವು ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದೆ. ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಮತ್ತು 'ಕುಚ್ ಕುಚ್ ಹೋತಾ ಹೈ' ನಂತಹ ಸಿನಿಮಾಗಳಲ್ಲಿ ಶಾರುಖ್ ಖಾನ್ ಅವರ ರೋಮ್ಯಾಂಟಿಕ್ ಪಾತ್ರಗಳನ್ನು ನೋಡಿಯೇ ನಾನು ಪ್ರೀತಿಯ ಕಲ್ಪನೆಯನ್ನು ಬೆಳೆಸಿಕೊಂಡೆ ಎಂದು ಅವರು ವಿವರಿಸಿದ್ದಾರೆ.
ವದಂತಿಗಳಿಗೆ ತೆರೆ ಎಳೆದ ಮೃಣಾಲ್​
ಕಳೆದ ಕೆಲವು ದಿನಗಳಿಂದ ತಮಿಳು ನಟ ಧನುಷ್ ಮತ್ತು ಮೃಣಾಲ್ ಠಾಕೂರ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ವಿಚಾರವು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಆದರೆ, ಈ ಬಗ್ಗೆ ನಟರು ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ.
ಎಲ್ಲಾ ಊಹಾಪೋಹಗಳ ನಡುವೆ ನಟಿ ಮೃಣಾಲ್​​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಾವು ತಮ್ಮದೇ ಆದ ಲೋಕದಲ್ಲಿ ಬ್ಯುಸಿಯಾಗಿದ್ದೇನೆ ಎಂದು ಸಂದೇಶ ಸಾರಿದ್ದರು.
ವೀಡಿಯೊದಲ್ಲಿ, ಮೃಣಾಲ್​ ಅವರು ದೋಣಿಯಲ್ಲಿ ಕುಳಿತು ಸ್ವಲ್ಪ ಸಮಯ ಆನಂದಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಅವರು ವಿಹಾರವನ್ನು ಆನಂದಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ನೆಲದ ಮೇಲೆ ಇರುವವಳು, ಹೊಳೆಯುವವಳು ಮತ್ತು ಅಲುಗಾಡದವಳು ಎಂಬ ಅರ್ಥಪೂರ್ಣ ಸಾಲುಗಳನ್ನು ಬರೆದುಕೊಂಡು ಪೊಸ್ಟ್ ಮಾಡಿದ್ದಾರೆ. ಇದು ಹೊರಗಿನ ವದಂತಿಗಳು ತನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net