ಅಭಿಮಾನಿಗಳ ಪ್ರೀತಿಯ ಹೆಸರೇ ಮದುವೆಯ ಮಂತ್ರ: ವಿರೋಶ್ ವಿವಾಹಕ್ಕೆ ಕ್ಷಣಗಣನೆ!Rashmika mandanna

Rashmika mandanna (ಚಿತ್ರ Instagram)
Rashmika mandanna (ಚಿತ್ರ Instagram)
Published on
Rashmika mandanna: ಟಾಲಿವುಡ್​ ಸೂಪರ್​ ಜೋಡಿ ವಿಜಯ್​ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ವಿವಾಹದ ಸುತ್ತ ಇರುವ ವದಂತಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತೆರೆ ಎಳೆದಿದ್ದಾರೆ. ಆದಾಗ್ಯೂ, ಹಲವಾರು ದಿನಗಳಿಂದ ಇವರಿಬ್ಬರ ಮದುವೆ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿತ್ತು. ಆದರೆ, ಅಧೀಕೃತವಾಗಿ ಘೋಷಿಸುವ ಮೂಲಕ ಜೋಡಿ ಮದುವೆಯಾಗುವುದಾಗಿ ಖಚಿತ ಪಡಿಸಿದ್ದಾರೆ.
"ವಿರೋಶ್"​ ಎಂಬ ಪದವನ್ನು ಅಭಿಮಾನಿಗಳು ಅವರಿಬ್ಬರ ಹೆಸರನ್ನು ಮಿಶ್ರಣ ಮಾಡುವ ಮೂಲಕ ಸೃಷ್ಟಿಸಿದ್ದರು. ಅದಕ್ಕಾಗಿ ದಂಪತಿ ಮದುವೆಗೆ ಈ ಹೆಸರನ್ನೇ ಇಡಲಾಗಿದೆ ಎಂದು ವೈಯಕ್ತಿಕ ಟಿಪ್ಪಣಿಯಲ್ಲಿ ಬರೆದುಕೊಂಡಿದ್ದಾರೆ.

ಪೋಸ್ಟ್​ನಲ್ಲೇನಿದೆ?

ನಮ್ಮ ಪ್ರೀತಿಯ ಪಾತ್ರರೇ, ನೀವು ತುಂಬಾ ಪ್ರೀತಿಯಿಂದ, ವಿರೋಶ್​ ಎಂಬ ಹೆಸರನ್ನು ನೀಡಿದ್ದೀರಿ. ಅದರ ಗೌರವಾರ್ಥವಾಗಿ ನಮ್ಮ ಮದುವೆಗೆ ನಾವು "ದ ವೆಡ್ಡಿಂಗ್​ ಆಫ್​ ವಿರೋಶ" ಎಂದು ಹೆಸರಿಟ್ಟಿದ್ದೇವೆ. ಇದು ಕೇವಲ ಒಂದು ಮದುವೆಯಲ್ಲ. ಬದಲಾಗಿ ನಮ್ಮೆಲ್ಲರ ಪ್ರೀತಿಯ ಆಚರಣೆ. ನಾವು ಯಾವಾಗಲೂ ನಿಮ್ಮ ಭಾಗವಾಗಿದ್ದೇವೆ, ನೀವು ನಮ್ಮ ಭಾಗವಾಗಿದ್ದೀರಿ. ನಮ್ಮನ್ನು ತುಂಬಾ ಪ್ರೀತಿಯಿಂದ ನೋಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಎಂದು ಬರೆದು ಪೋಸ್ಟ್​ ಮಾಡಿದ್ದರು.

ಮದುವೆ ದಿನಾಂಕ ಮತ್ತು ಸ್ಥಳದ ವಿವರಗಳು

ನಟ ವಿಜಯ್​ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.
ವಿವಾಹಕ್ಕೆ ಸಂಬಂಧಪಟ್ಟ ಪೂರ್ವ ತಯಾರಿ ಫೆಬ್ರವರಿ 24 ರಿಂದ ಪ್ರಾರಂಭವಾಗಲಿದ್ದು, ಈ ಸಮಾರಂಭಕ್ಕೆ ತೀರಾ ಆಪ್ತರಿಗಷ್ಟೆ ಆಮಂತ್ರಣ ನೀಡಲಾಗಿದೆ ಎಂದು ತಿಳಿದುಬಂದಿದೆ. ಮದುವೆಯ ಫೋಟೊಗ್ರಾಫಿ ಆರ್ಡರ್ ಪಡೆದಿರುವವರು ಫೋಟೋಗಳನ್ನು ಬಹಿರಂಗಪಡಿಸಬಾರದೆಂದು ಸಹಿ ಹಾಕಿಸಿಕೊಂಡಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿತ್ತು.

ವಿಶೇಷ ವೈಶಿಷ್ಟ್ಯಗಳಿಂದ ಕೂಡಿದ ಮದುವೆ

ಚಿತ್ರರಂಗದ ಸಹೋದ್ಯೋಗಿಗಳು ಅಥವಾ ಇತರ ನಟರನ್ನು ಮದುವೆಗೆ ಆಹ್ವಾನಿಸಲಾಗಿಲ್ಲ ಎಂಬುದು ಗಮನಾರ್ಹವಾಗಿದೆ. ಆದಾಗ್ಯೂ, ಈಗಾಗಲೇ ಎರಡು ಪೂರ್ವ ವಿವಾಹ ಸಮಾರಂಭಗಳು ಪ್ರತ್ಯೇಕವಾಗಿ ನಡೆಸಲಾಗಿದ್ದು, ವಿಜಯ್ ಮತ್ತು ರಶ್ಮಿಕಾ ತಮ್ಮ ಸ್ನೇಹಿತರಿಗೆ ಕೈಬರಹದ ಟಿಪ್ಪಣಿಗಳನ್ನು ಕಳುಹಿಸಿದ್ದಾರೆ. ಅದರಲ್ಲಿ ಯಾವುದೇ ಉಡುಗೊರೆಗಳ ಅಗತ್ಯವಿಲ್ಲ, ಬದಲಾಗಿ ಎಲ್ಲರ ಆಶೀರ್ವಾದ ಸಾಕು ಎಂದು ಉಲ್ಲೇಖಿಸಿದ್ದಾರೆ.
ಸತತ ಚಿತ್ರೀಕರಣ ಮತ್ತು ಬಿಡುವಿಲ್ಲದ ವೇಳಾಪಟ್ಟಿಯಿಂದ ದಣಿದಿರುವ ಈ ಜೋಡಿ, ಮದುವೆಯ ನಂತರ ಪೂರ್ತಿ ಒಂದು ತಿಂಗಳು ಕೆಲಸದಿಂದ ದೂರವಿರಲು ನಿರ್ಧರಿಸಿದ್ದಾರೆ. ಇದು ಅವರಿಬ್ಬರು ಸ್ವಲ್ಪ ಸಮಯ ಒಟ್ಟಿಗೆ ಕಳೆಯಲು ಬಯಸಿದ್ದಾರೆ ಎಂಬುದನ್ನು ತಿಳಿಸಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net