ಇದೇನಾ ಸಭ್ಯತೆ? ನಟಿ ನಿಧಿ ಅಗರ್ವಾಲ್​ ಸುತ್ತುವರಿದ ಅಭಿಮಾನಿಗಳಿಂದ ಅನುಚಿತ ವರ್ತನೆ! ವಿಡಿಯೋ ವೈರಲ್​... Nidhi Agarwal

ನಟಿ ನಿಧಿ ಅಗರ್ವಾಲ್​ ಜತೆ ಅಭಿಮಾನಿಗಳ ಅನುಚಿತ ವರ್ತನೆ
ನಟಿ ನಿಧಿ ಅಗರ್ವಾಲ್​ ಜತೆ ಅಭಿಮಾನಿಗಳ ಅನುಚಿತ ವರ್ತನೆ
Published on

ಪ್ರಮುಖ ಮುಖ್ಯಾಂಶಗಳು

  • ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ದಿ ರಾಜಾ ಸಾಬ್​ ಸಿನಿಮಾ ಬಿಡಗಡೆಗೆ ಸಜ್ಜಾಗಿದೆ
  • ಈ ಸಿನಿಮಾದಲ್ಲಿ ಪ್ರಭಾಸ್​ ಜತೆ ನಟಿ ನಿಧಿ ಅಗರ್ವಾಲ್​, ಮಾಳವಿಕಾ ಮೋಹನನ್ ಮತ್ತು ರಿಧಿ ನಟಿಸಿದ್ದಾರೆ
  • ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ನಿರ್ಮಾಣ ಮಾಡಿದ್ದಾರೆ
  • ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳು ನಾಯಕಿ ನಿಧಿ ಅಗರ್ವಾಲ್ ಜತೆ ಅನುಚಿತವಾಗಿ ವರ್ತಿಸಿದರು
ಹೈದರಾಬಾದ್​: ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ದಿ ರಾಜಾ ಸಾಬ್​ ಸಿನಿಮಾ ಬಿಡಗಡೆಗೆ ಸಜ್ಜಾಗಿದೆ. ಮಾರುತಿ ನಿರ್ದೇಶನದ ಹಾರರ್​, ಹಾಸ್ಯ ಮತ್ತು ಪ್ರೇಮ ಕಥಾಹಂದರವುಳ್ಳ ಈ ಸಿನಿಮಾದಲ್ಲಿ ಪ್ರಭಾಸ್​ ಜತೆ ನಟಿ ನಿಧಿ ಅಗರ್ವಾಲ್ ( Nidhi Agarwal )​, ಮಾಳವಿಕಾ ಮೋಹನನ್ ಮತ್ತು ರಿಧಿ ನಾಯಕಿಯರಾಗಿ ನಟಿಸಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ತಮನ್ ಸಂಗೀತ ನೀಡಿರುವ ಈ ಚಿತ್ರವನ್ನು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ನಿರ್ಮಾಣ ಮಾಡಿದ್ದಾರೆ.
ಈ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ನಡೆಯಿತು. ನಿರ್ಮಾಪಕ ವಿಶ್ವ ಪ್ರಸಾದ್, ನಿರ್ದೇಶಕ ಮಾರುತಿ, ಸಂಗೀತ ನಿರ್ದೇಶಕ ತಮನ್ ಮತ್ತು ನಾಯಕಿಯರಾದ ನಿಧಿ ಅಗರ್ವಾಲ್ ಹಾಗೂ ರಿದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಭಿಮಾನಿಗಳ ಭಾರಿ ಗದ್ದಲದ ನಡುವೆ ಎರಡನೇ ಹಾಡನ್ನು ಬಿಡುಗಡೆ ಮಾಡಲಾಯಿತು.
ಆದಾಗ್ಯೂ, ಈ ಕಾರ್ಯಕ್ರಮ ಜನರಿಂದ ಭಾರಿ ಟೀಕೆಗೆ ಗುರಿಯಾಯಿತು. ಇದು ಸಾರ್ವಜನಿಕ ಕಾರ್ಯಕ್ರಮವಾಗಿದ್ದರಿಂದ ಅಭಿಮಾನಿಗಳು ಘರ್ಷಣೆ ನಡೆಸಿ ಜಗಳವಾಡಿ, ಗದ್ದಲ ಎಬ್ಬಸಿದರು. ಇದರ ಪರಿಣಾಮವಾಗಿ, ಈ ಕಾರ್ಯಕ್ರಮವನ್ನು ನಿರೀಕ್ಷೆಗಿಂತ ಸ್ವಲ್ಪ ಮುಂಚಿತವಾಗಿಯೇ ಮುಗಿಸಲಾಯಿತು.
ಇನ್ನು ಈ ಕಾರ್ಯಕ್ರಮದಿಂದ ಹಿಂತಿರುಗುವ ಸಂದರ್ಭದಲ್ಲಿ ಅಭಿಮಾನಿಗಳು ನಾಯಕಿ ನಿಧಿ ಅಗರ್ವಾಲ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದರು. ನಿಧಿಯ ಸುತ್ತ ಸುತ್ತಿಕೊಂಡ ಅಭಿಮಾನಿಗಳು ನೂಕು ನುಗ್ಗಾಟ ನಡೆಸಿದರು. ಈ ವೇಳೆ ನಿಧಿ ಅವರನ್ನು ಮುಟ್ಟಲು ಅಭಿಮಾನಿಗಳು ಪ್ರಯತ್ನಿಸಿದರು. ಸ್ಥಳದಲ್ಲಿ ಭಾರಿ ಬಿಗುವಿನ ವಾತಾವರಣ ಉಂಟಾಯಿತು. ಈ ವೇಳೆ ನಿಧಿ ಅವರನ್ನು ರಕ್ಷಣೆ ಮಾಡಲು ಬೌನ್ಸರ್​ಗಳು ಪ್ರಯತ್ನಿಸಿದರು. ಆದರೂ, ಭಾರಿ ನೂಕು ನುಗ್ಗಲಿನ ನಡುವೆ ಭಾರಿ ಮುಜುಗರಕ್ಕೆ ಒಳಗಾಗ ನಿಧಿ ಅಂತಿಮವಾಗಿ ಹೇಗೋ ಕಾರು ಏರುವಲ್ಲಿ ಯಶಸ್ವಿಯಾದರು.
ಅಂದಹಾಗೆ, ನೂಕು ನುಗ್ಗಾಟದ ಸಮಯದಲ್ಲಿ ಕೆಲವರು ದುರುದ್ದೇಶದಿಂದ ನಿಧಿ ಅಗರ್ವಾಲ್ ಅನ್ನು ಮುಟ್ಟಲು ಪ್ರಯತ್ನಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ಇದು ಅಭಿಮಾನವೇ ಅಲ್ಲ, ಇದೊಂದು ದುರಾಭಿಮಾನ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಅಭಿಮಾನದ ಹೆಸರಲ್ಲಿ ನಟಿಯನ್ನು ಈ ರೀತಿ ನಡೆಸುವುದು ನಮ್ಮ ನಾಗರಿಕ ಸಮಾಜದ ಲಕ್ಷಣವಲ್ಲ ಎಂದು ಇನ್ನು ಕೆಲವರು ಆಕ್ರೋಶದ ಮಾತುಗಳನ್ನಾಡಿದ್ದಾರೆ. ವೈರಲ್​ ಆಗಿರುವ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net