'ಲಗಾನ್​' ನ ದೇವಾ ಇನ್ನಿಲ್ಲ! ಬ್ಲಡ್​ ಕ್ಯಾನ್ಸರ್​ಗೆ ಬಲಿಯಾದ ಪ್ರದೀಪ್​ ರಾವತ್​! Pradeep Rawat

Pradeep Rawat
Pradeep Rawat
Published on
ಮುಂಬೈ: ಕನ್ನಡದಲ್ಲಿ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಜೊತೆ 'ಗಜ' ಹಿಂದಿಯಲ್ಲಿ ಆಮೀರ್​ ಖಾನ್​ ಜೊತೆ 'ಗಜಿನಿ', 'ಲಗಾನ್​' ಮೊದಲಾದ ಹಿಟ್​ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ, ಹಾಗೂ ತಮ್ಮ ಅದ್ಭುತ ಖಳ ಪಾತ್ರಗಳಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಖ್ಯಾತ ನಟ ಪ್ರದೀಪ್​ ರಾವತ್​ ಇಂದು (ಮಂಗಳವಾರ, ಆ.4) ತಮ್ಮ 74 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.
ಕಳೆದ ಹಲವು ತಿಂಗಳಿನಿಂದ ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದ ರಾವತ್​, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಆರಂಭದಲ್ಲಿ ಮುಂಬೈನ ಕೋಕಿಲಾಬೇನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಂತರ ಬೆರೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತೆಂದು ಹೇಳಲಾಗುತ್ತಿದೆ.
ಕುಟುಂಬ ವರ್ಗ ನೀಡಿರುವ ಮಾಹಿತಿ ಪ್ರಕಾರ ಪ್ರದೀಪ್​ ರಾವತ್​ ಕಳೆದ 5 ವರ್ಷಗಳಿಂದ ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಭೀವಂಡಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಗೆಳೆಯನ ಸಾವನ್ನು ನೆನೆದ ಯಶ್​ಪಾಲ್​ ಶರ್ಮಾ!
ಪ್ರದೀಪ್​ ರಾವತ್​ ನಿಧನರಾದ ಮಾಹಿತಿಯನ್ನು ಹಿಂದಿ ಚಿತ್ರರಂಗದ ಹಿರಿಯ ನಟ ಹಾಗೂ ಪ್ರದೀಪ್​ ರಾವತ್​ ಅವರ ಆತ್ಮೀಯರಾದ ಯಶ್​ಪಾಲ್​ ಶರ್ಮಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಜೊತೆ ಲಗಾನ್​, ಗಜಿನಿ ನಲ್ಲಿ ನಟಸಿ ಲಗಾನ್​ನ ದೇವಾ ಎಂದೇ ಖ್ಯಾತರಾದ ಪ್ರದೀಪ್​ ರಾವತ್​ ಇಂದು ನಮ್ಮನ್ನು ಅಗಲಿದ್ದಾರೆ. ಅವರ ಅತ್ಮಕ್ಕೆ ಶಾಂತಿ ದೊರೆಯಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದು ಅವರು ಬರೆದುಕೊಂಡಿದ್ದಾರೆ, (ಏಜನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net