2ನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವಾತಿ ರೆಡ್ಡಿ; ಮಂತ್​ ಆಫ್​ ಮಧು ಸಿನಿಮಾ ನಿರ್ದೇಶಕ ಶ್ರೀಕಾಂತ್ ನಾಗೋಟಿ ಜೊತೆ ಸರಳ ವಿವಾಹ!

Swati Reddy second marriage
Swati Reddy second marriage
Published on

ಪ್ರಮುಖ ಮುಖ್ಯಾಂಶಗಳು

  • ನಿರ್ದೇಶಕ ಶ್ರೀಕಾಂತ್ ನಾಗೋಟಿ ಜೊತೆ ಎರಡನೇ ಮದುವೆಯಾದ ನಟಿ ಸ್ವಾತಿ ರೆಡ್ಡಿ.
  • ಕೇವಲ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ಸರಳ ವಿವಾಹ ಮಹೋತ್ಸವ.
  • ಈ ಹಿಂದೆ ಪೈಲಟ್ ವಿಕಾಸ್ ವಾಸು ಅವರಿಂದ ವಿಚ್ಛೇದನ ಪಡೆದಿದ್ದ 'ಕಲರ್ಸ್' ಸ್ವಾತಿ.
Swati Reddy second marriage: ಕಲರ್ಸ್ ಎನ್ನುವ ಟಿವಿ ಕಾರ್ಯಕ್ರಮದಿಂದ​​ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಸ್ವಾತಿ ರೆಡ್ಡಿಯವರು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ತಮ್ಮ ಸಹಜ ನಟನೆಯಿಂದಾಗಿ ಚಿರಪರಿಚಿತರು. ಆಡಿವಾರಿ ಮಾಟಲಕು ಅರ್ಥಾಲೆ ವೇರುಲೆ, ಸುಬ್ರಮಣ್ಯ ಪುರಂ ಸೇರಿದಂತೆ ಟಾಲಿವುಡ್​​ ಹಾಗೂ ಕಾಲಿವುಡ್​​ನಲ್ಲಿ ಹಾಗೂ ನಿರೂಪಕಿಯಾಗಿ ಮಿಂಚಿದ್ದ ಇವರು ಈಗಲೂ ಕಲರ್ಸ್​ ಸ್ವಾತಿ ಎಂತಲೇ ಫೇಮಸ್​. ಸದ್ಯ ನಟಿ ನಿರ್ದೇಶಕ ಶ್ರೀಕಾಂತ್​ ನಾಗೋಟಿ ಜೊತೆಗೆ ಹಸೆಮಣೆ ಏರಿದ್ದಾರೆ.
ಸ್ವಾತಿ ರೆಡ್ಡಿ ತಮ್ಮ 39ನೇ ವಯಸ್ಸಿನಲ್ಲಿ 2ನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ದರಲ್ಲಿ ಬಿಳಿ ಸೀರೆ ಹಸಿರು ಅಂಚಿನ ಬಾರ್ಡರ್​​ವುಳ್ಳ ಸೀರೆ ತೊಟ್ಟು ಹೆಣೆದ ಜಡೆಗೆ ಮಲ್ಲಿಗೆ ಹೂ ಮುಡಿದಿದ್ದಾರೆ. ಇನ್ನೂ ಅವರ ಪತಿ ಶ್ರೀಕಾಂತ್​ ಸಾಂಪ್ರದಾಯಿಕವಾಗಿ ವರನಂತೆ ಪಂಚೆ ಶಲ್ಯ ಹಾಗೂ ಶರ್ಟ್​ ಧರಿಸುವಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಟೋದಲ್ಲಿ ಹಿಂಭಾಗ ಮಾತ್ರ ಕಾಣುತ್ತಿದೆ. ಇಬ್ಬರು ಮದುವೆ ಶಾಸ್ತ್ರದ ಪೂಜೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇದಕ್ಕೆ ಹಿಚ್ಡ್​​​ ಅಂದರೆ ಭೌತಿಕ ಹಾಗೂ ಮಾನಸಿಕವಾಗಿ ಹೊಂದಿಕೊಳ್ಳುವಿಕೆ ಎನ್ನುವ ಅರ್ಥದಲ್ಲಿ ಶೀರ್ಷಿಕೆ ಕೊಟ್ಟಿದ್ದಾರೆ.

ಸಿಂಪಲ್​ ಮದುವೆ

ಸ್ವಾತಿ ರೆಡ್ಡಿ ಮತ್ತು ಶ್ರೀಕಾಂತ್​ ನಾಗೋಟಿ ಅವರ ಈ ವಿವಾಹ ಮಹೋತ್ಸವವು ಯಾವುದೇ ಅದ್ದೂರಿತನವಿಲ್ಲದೆ, ಕೇವಲ ಹತ್ತಿರದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಹೈದರಾಬಾದ್‌ನಲ್ಲಿ ನಡೆದಿದೆ ಎನ್ನಲಾಗಿದೆ.

ವಿಕಾಸ್​ ವಾಸುಗೆ ಡಿವೋರ್ಸ್​​

ಸ್ವಾತಿ ರೆಡ್ಡಿ ಅವರು 2018ರಲ್ಲಿ ಕೇರಳ ಮೂಲದ ಪೈಲಟ್​ ವಿಕಾಸ್​ ವಾಸು ಅವರೊಂದಿಗೆ ಮದುವೆ ಮಾಡಿಕೊಂಡಿದ್ದರು. ಆದರೆ ಇಬ್ಬರಲ್ಲಿ ಮೂಡಿಬಂದ ಭಿನ್ನಭಿಪ್ರಾಯ, ವೈಯಕ್ತಿಕ ಕಾರಣದಿಂದಾಗಿ 2022ರಲ್ಲಿ ಡಿವೋರ್ಸ್​ ಪಡೆದುಕೊಂಡು ದೂರಾಗಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಪತಿ ಜೊತೆಗಿದ್ದ ಆತ್ಮೀಯ ಫೋಟೋಗಳನ್ನು ಅಳಿಸಿ ಹಾಕಿದ್ದರಿಂದ ಇಬ್ಬರು ಅಧಿಕೃತವಾಗಿ ದೂರಾಗಗಿರುವ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಸದ್ಯ ಕಹಿ ನೆನಪುಗಳನ್ನು ಮರೆತು, ನಿರ್ದೇಶಕ ಶ್ರೀಕಾಂತ್ ನಗೋತಿ ಅವರ ಕೈಹಿಡಿಯುವ ಮೂಲಕ ನಟಿ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ.

'ಮಂತ್ ಆಫ್ ಮಧು' ಮೂಲಕ ಪರಿಚಯ

ಸ್ವಾತಿ ಹಾಗೂ ಶ್ರೀಕಾಂತ್​ ಅವರು ಸಿನಿಮಾ ಮೂಲಕ ಪರಿಚಯ ಮಾಡಿಕೊಂಡರು. ಶ್ರೀಕಾಂತ್ ನಗೋತಿ ನಿರ್ದೇಶನದ 'ಮಂತ್ ಆಫ್ ಮಧು' ಸಿನಿಮಾದಲ್ಲಿ ಸ್ವಾತಿ ರೆಡ್ಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ ಸದ್ಯ ಇದು ವಿವಾಹ ಬಂಧನಕ್ಕೆ ಮುನ್ನಡೆಸಿದೆ.


ಸ್ವಾತಿ ನಟಿಸಿದ ಸಿನಿಮಾಗಳಿವು

ಮಂತ್​ ಆಫ್​ ಮಧು, ಸುಬ್ರಮಣ್ಯಪುರಂ, ಕಾರ್ತಿಕೇಯ, ಪಂಚತಂತ್ರಂ, ತ್ರಿಪುರ, ತ್ರಿಶುರ ಪುರಂ, ಕಲವರಮಯೆ ಮಡಿಲೋ ಹಂಡ್​ರೆಡ್​ ಪರ್ಸೆಂಟ್​ ಲವ್, ಅಭಯಂ, ಬಂಗಾರಿ ಕೋಡಿಪೆಟ್ಟ​​ ಸೇರಿದಂತೆ ನಾನಾ ಸಿನಿಮಾದಲ್ಲಿ ನಟಿಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net