ಲವ್ಸ್ಟೋರಿ, ಕ್ರೈಂ, ಆ್ಯಕ್ಷನ್, ಬಯೋಪಿಕ್, ನೈಜಘಟನೆ ಆಧರಿತ ಸೇರಿ ವಿವಿಧ ಜಾನರ್ನ ಸಿನಿಮಾಗಳು ಅಪಾರ ಭರವಸೆಯೊಂದಿಗೆ ಚಿತ್ರಮಂದಿರಗಳಿಗೆ ಲಗ್ಗೆಯಿಡುತ್ತಿವೆ. ಆದರೆ, ಪೈರಸಿ ಕಾಟದಿಂದ ಹಾಗೂ ಪ್ರೇಕ್ಷಕರು ಥಿಯೇಟರ್ಗೆ ಬಾರದ ಹಿನ್ನೆಲೆ ಒಳ್ಳೊಳ್ಳೆ ಚಿತ್ರಗಳೂ ಕೂಡ ಸೋಲಿಗೆ ಶರಣಾಗುತ್ತಿವೆ. ಇದು ಕಲಾವಿದರಿಗೆ ಮತ್ತು ಆ ಇಡೀ ಚಿತ್ರತಂಡಕ್ಕೆ ನಷ್ಟ ಹಾಗೂ ಅನ್ಯಾಯ ಆಗುತ್ತಿದೆ. ಈ ನಿಟ್ಟಿನಲ್ಲಿ, ಆಯಾ ಚಿತ್ರರಂಗಗಳು ಹೊಸ ಹೊಸ ಮತ್ತು ವಿಭಿನ್ನ ಪ್ರಯತ್ನದಲ್ಲಿ ದಾಪುಗಾಲಿಟ್ಟಿವೆ.