ತಕ್ಷಣವೇ ಆತನ ಕೆನ್ನೆಗೆ ಹೊಡೆದೆ! ಬಿಗ್ ಬಜೆಟ್​ ಚಿತ್ರದ ಶೂಟಿಂಗ್​ನಲ್ಲಿ ಸ್ಟಾರ್ ನಟನ ಎಡವಟ್ಟು; ಕಹಿ ಘಟನೆ ಬಿಚ್ಚಿಟ್ಟ 'ಮೋನಿಕಾ'

ಸೌತ್ ಬ್ಯೂಟಿ ಪೂಜಾ ಹೆಗ್ಡೆ
ಸೌತ್ ಬ್ಯೂಟಿ ಪೂಜಾ ಹೆಗ್ಡೆ
Published on

ಪ್ರಮುಖ ಮುಖ್ಯಾಂಶಗಳು

  • ಸ್ಟಾರ್​ ನಟನ ಕೆನ್ನೆಗೆ ಬಾರಿಸಿದ್ದರಂತೆ ನಟಿ ಪೂಜಾ ಹೆಗ್ಡೆ
  • ಬಿಗ್ ಬಿಜೆಟ್​ ಚಿತ್ರದ ಚಿತ್ರೀಕರಣದ ವೇಳೆ ಕಹಿ ಘಟನೆ
  • ಸಂದರ್ಶನವೊಂದರಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ ಸೌತ್ ಬ್ಯೂಟಿ
  • ಅಸಲಿಗೆ ಇದೊಂದು ಸುಳ್ಳು ಸುದ್ದಿ ಎಂದು ಹೇಳಲಾಗುತ್ತಿದೆ
Pooja Hegde: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕೂಲಿ’ ಚಿತ್ರದ 'ಮೋನಿಕಾ' ಹಾಡಿನಲ್ಲಿ ಮಿಂಚಿದ ಸೌತ್​ ಬ್ಯೂಟಿ ಪೂಜಾ ಹೆಗ್ಡೆ, ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ 'ಜನನಾಯಗನ್'​ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ತೆರೆ ಕಾಣುವುದಷ್ಟೇ ಬಾಕಿ ಇದೆ. ಸದ್ಯ ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಸಖತ್ ಬಿಜಿಯಾಗಿರುವ ಪೂಜಾ, ತಮ್ಮ ಕರಿಯರ್​ನಲ್ಲಿಯೂ ಕಹಿ ಘಟನೆಯೊಂದು ನಡೆದಿದೆ ಎಂಬುದನ್ನು ಇದೀಗ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾಗಿ ತೆಲುಗು ಸಿನಿ ವರದಿಗಳು ತಿಳಿಸಿವೆ. ಆದರೆ, ಇದು ಎಷ್ಟು ಸತ್ಯ ಎಂಬುದು ಮಾತ್ರ ಅಸ್ಪಷ್ಟ.  
ಟಾಲಿವುಡ್​ನಲ್ಲಿ ಕರಿಯರ್​ ಆರಂಭಿಸಿದ ಪೂಜಾ, ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್​ ಜತೆಗೆ ‘ಅಲಾ ವೈಕುಂಠಪುರಮುಲೋ’, ‘ಡಿಜೆ ದುವ್ವಾಡ ಜಗನ್ನಾಥಂ’ ಸೇರಿದಂತೆ ಇತ್ತೀಚೆಗೆ ತೆರೆಕಂಡ ತಮಿಳಿನ ರೆಟ್ರೋ ಚಿತ್ರಗಳಲ್ಲಿ ನಟಿಸಿ, ಅಭಿಮಾನಿಗಳಿಂದ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ, ಕಾಲಿವುಡ್​ ಮತ್ತು ಬಾಲಿವುಡ್​ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿರುವ ಕರಾವಳಿ ಬೆಡಗಿ, ಸ್ಟಾರ್​ ನಟನೊಬ್ಬ ತಮ್ಮೊಂದಿಗೆ ನಡೆದುಕೊಂಡ ರೀತಿಗೆ ಆತನಿಗೆ ಕಪಾಳಮೋಕ್ಷ ಮಾಡಿದ್ದರ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಅಸಲಿಗೆ ನಟಿ ಸಂದರ್ಶನದಲ್ಲಿ ಮಾತನಾಡಿದ ವಿಡಿಯೋ ಅಥವಾ ಆ ಚಾನೆಲ್​ ಯಾವುದು ಎಂಬುದರ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ.   

ಕಪಾಳಕ್ಕೆ ಹೊಡೆಯುವ ತಪ್ಪು ಆತ ಮಾಡಿದ್ದೇನು?

"ಇದು ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಒಂದು ಬಿಗ್ ಬಜೆಟ್​ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನಗೆ ತುಂಬ ಸಂತೋಷ ತಂದಿತು. ಒಬ್ಬ ಸ್ಟಾರ್​ ನಟನ ಸಿನಿಮಾದಲ್ಲಿ ಇರುವುದು ನನಲ್ಲಿನ ಆತ್ಮವಿಶ್ವಾಸ ಹೆಚ್ಚಿಸಿತು. ಆ ಹೀರೋ ನಾನಿದ್ದ ಕ್ಯಾರವಾನ್‌ಗೆ ನನ್ನ ಅನುಮತಿಯಿಲ್ಲದೆ ಪ್ರವೇಶಿಸಿ, ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ. ಬಳಿಕ ಮೈಮುಟ್ಟಲು ಯತ್ನಿಸಿದ. ತಕ್ಷಣ ಅವನ ಕಪಾಳಕ್ಕೆ ಹೊಡೆದೆ. ಆ ಘಟನೆಯ ಬಳಿಕ ಇಲ್ಲಿಯವರೆಗೂ ಆತ ಮತ್ತೆ ನನ್ನೊಂದಿಗೆ ಕೆಲಸ ಮಾಡಿಲ್ಲ" ಎಂದು ಪೂಜಾ ಹೇಳಿದ್ದಾರೆ. 

ಅದೊಂದು ಚಿತ್ರದಿಂದ ತೆಲುಗಿನಲ್ಲಿ ಆಫರ್​​ ಕುಸಿತ! 

2024ರಲ್ಲಿ ತೆರೆಕಂಡ ಮಹೇಶ್ ಬಾಬು ಅಭಿನಯದ 'ಗುಂಟೂರು ಕಾರಂ' ಚಿತ್ರದಲ್ಲಿ ನಾಯಕಿಯಾಗಿ ಪೂಜಾ ನಟಿಸಬೇಕಿತ್ತು. ಆದರೆ, ಅದು ಅಂದುಕೊಂಡಂತೆ ನಡೆಯಲಿಲ್ಲ. ಅಲ್ಲಿಂದ ತಮಿಳು, ಬಾಲಿವುಡ್​ ಚಿತ್ರಗಳತ್ತ ಗಮನ ಹರಿಸಿರುವ ಪೂಜಾ ಹೆಗ್ಡೆ, ಹಲವು ಬಹುನಿರೀಕ್ಷಿತ, ಬಿಗ್ ಬಿಜೆಟ್​ ಹಾಗೂ ಸ್ಟಾರ್​ ನಟರ ಚಿತ್ರಗಳಿಗೆ ಸಹಿ ಹಾಕಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net