ಪ್ರಸ್ತುತ, ದುಲ್ಕರ್ ಸಲ್ಮಾನ್ ಅವರ '41' ಚಿತ್ರಕ್ಕೆ ಪೂಜಾ 3 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಅಸಲಿಗೆ, ದಳಪತಿ ವಿಜಯ್ ಅವರ ಜನನಾಯಗನ್ ಮತ್ತು ರೆಟ್ರೋ ಚಿತ್ರಗಳಿಗೆ ಹೋಲಿಸಿದರೆ, ಈ ಸಂಭಾವನೆ ಕಡಿಮೆಯೇ. 'ರೆಟ್ರೋ' ಚಿತ್ರಕ್ಕೆ ಪೂಜಾ 4 ಕೋಟಿ ರೂ. ತೆಗೆದುಕೊಂಡಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿರುವ ಜನನಾಯಗನ್ ಚಿತ್ರಕ್ಕೆ 6 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಕೂಲಿಯಲ್ಲಿ ಮೋನಿಕಾ ಹಾಡಿಗೆ 3 ಕೋಟಿ ರೂ. ಪಡೆದ ಪೂಜಾ, ಈಗ ದುಲ್ಕರ್ ಚಿತ್ರಕ್ಕೆ ಅಷ್ಟೇ ಹಣವನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).