ಮದುವೆ ಆದಾಗಿನಿಂದ ಅತ್ತೆ ಮನೆಯಲ್ಲಿ ಆ ಒಂದು ಪ್ರಯೋಗ ಮಾತ್ರ ಇನ್ನೂ ಮಾಡಿಲ್ಲ: ಶೋಭಿತಾ ಅಚ್ಚರಿ ಹೇಳಿಕೆ! Sobhita Dhulipala

ನಟಿ ಶೋಭಿತಾ ಧೂಳಿಪಾಲ
ನಟಿ ಶೋಭಿತಾ ಧೂಳಿಪಾಲ
Published on

ಪ್ರಮುಖ ಮುಖ್ಯಾಂಶಗಳು

  • ನಟಿ ಶೋಭಿತಾ ಧೂಳಿಪಾಲರನ್ನು ನಟ ನಾಗಚೈತನ್ಯ ಪ್ರೀತಿಸಿ ಮದುವೆ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ
  • ಶೋಭಿತಾ ಧೂಳಿಪಾಲರ ಮದುವೆ ನಂತರದ ಮೊದಲ ಚಿತ್ರ 'ಚೀಕಟಿಲೋ' ಬಿಡುಗಡೆಯಾಗಿದೆ
  • ಜವವರಿ 23ರಂದು ಅಮೆಜಾನ್​ ಪ್ರೇಮ್​ನಲ್ಲಿ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ
ಹೈದರಾಬಾದ್​: ನಟಿ ಸಮಂತಾರಿಂದ ವಿಚ್ಛೇದನಾ ಪಡೆದ ಬಳಿಕ ನಟಿ ಶೋಭಿತಾ ಧೂಳಿಪಾಲರನ್ನು ( Sobhita Dhulipala ) ನಟ ನಾಗಚೈತನ್ಯ ಪ್ರೀತಿಸಿ, ಮದುವೆ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇನ್ನೊಂದೆಡೆ ಸಮಂತಾ ಕೂಡ ಬಾಲಿವುಡ್​ ನಿರ್ದೇಶಕ ರಾಜ್​ ನಿಧಿಮೋರು ಅವರನ್ನು ವರಿಸಿದರು. ಸದ್ಯ ಸ್ಟಾರ್​ ದಂಪತಿಗಳು ವೈವಾಹಿಕ ಜೀವನದ ಖುಷಿಯ ಕ್ಷಣಗಳನ್ನು ಸವಿಯುತ್ತಿದ್ದಾರೆ.
ಮದುವೆಯಾದ ಬಳಿಕವೂ ಎಲ್ಲರೂ ಸಿನಿಮಾದಲ್ಲಿ ಮುಂದುವರಿದಿದ್ದಾರೆ. ಅದೇ ರೀತಿ ಶೋಭಿತಾ ಧೂಳಿಪಾಲರ ಮದುವೆ ನಂತರದ ಮೊದಲ ಚಿತ್ರ 'ಚೀಕಟಿಲೋ' ಇದೇ ಜವವರಿ 23ರಂದು ಅಮೆಜಾನ್​ ಪ್ರೇಮ್​ ವಿಡಿಯೋದಲ್ಲಿ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಶೋಭಿತಾ ಅವರು ಸಾಕಷ್ಟು ಶ್ರಮಿಸಿದರು. ಹಲವಾರು ಸಂದರ್ಶನಗಳಲ್ಲಿ ಭಾಗವಹಿಸಿದ್ದರು.
ಹೀಗೆ, ಸಂದರ್ಶನವೊಂದಲ್ಲಿ ತಮ್ಮ ಬಗ್ಗೆಯೇ ಶೋಭಿತಾ ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದರು. ಮದುವೆಯಾದಾಗಿನಿಂದ, ನಾನು ಒಮ್ಮೆಯೂ ಮನೆಯಲ್ಲಿ ಅಡುಗೆ ಮಾಡಿಲ್ಲ ಎಂದರು. ಮನೆಯಲ್ಲಿ ಅಡುವೆ ಮಾಡುವ ಪ್ರಯೋಗಕ್ಕೆ ನಾನು ಈವರೆಗೂ ಕೈಹಾಕಿಲ್ಲ ಎಂದರು. ನಾನು ಯಾವಾಗಲೂ ಫೋನ್‌ನಲ್ಲೇ ಫುಡ್​ ಆರ್ಡರ್​ ಮಾಡುತ್ತೇನೆ ಎಂದು ಶೋಭಿತಾ ಅವರು ಹೇಳಿದ್ದಾರೆ.
ನಾನು ಮತ್ತು ಚೈತನ್ಯ ಯಾವಾಗಲೂ ರೆಸ್ಟೋರೆಂಟ್‌ನಿಂದ ಮಾತ್ರವಲ್ಲದೆ ಇತರ ಹೋಟೆಲ್‌ಗಳಿಂದಲೂ ಫುಡ್​ ಆರ್ಡರ್ ಮಾಡುತ್ತೇವೆ. ನಾನು ಪ್ರತಿದಿನ ಏನನ್ನಾದರೂ ಆರ್ಡರ್ ಮಾಡುತ್ತಲೇ ಇರುತ್ತೇನೆ. ಅಲ್ಲದೆ, ನಾನು ನನ್ನ ಸಂಬಂಧಿಕರಿಗೆ ಕರೆ ಮಾಡಿ ಹೈದರಾಬಾದ್‌ನಲ್ಲಿ ರುಚಿಯಾದ ಸಮೋಸಾಗಳು, ಮಿರ್ಚಿ ಬಜ್ಜಿ, ಟಿಫಿನ್‌ಗಳು ಎಲ್ಲಿ ಸಿಗುತ್ತವೆ ಎಂದು ಕೇಳುತ್ತಿರುತ್ತೇನೆ ಎಂದರು.
ಒಳ್ಳೆಯ ಆಹಾರ ಎಲ್ಲಿ ಸಿಗುತ್ತದೆ ಎಂದು ಕೇಳಿ ನಂತರ ಅಲ್ಲಿಗೆ ಹೋಗಿ ತಿನ್ನುತ್ತೇನೆ ಅಥವಾ ಮನೆಗೆ ಆರ್ಡರ್​ ಮಾಡುತ್ತೇನೆ. ನಾನು ಎಷ್ಟೇ ತಿಂದರೂ, ವ್ಯಾಯಾಮ ಮಾತ್ರ ಕಡ್ಡಾಯವಾಗಿ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಶೋಭಿತಾ ಹೇಳಿದರು.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಇತ್ತೀಚೆಗೆ ಬಿಡುಗಡೆಯಾಗಿರುವ ಚೀಕಟಿಲೋ ಚಿತ್ರದಲ್ಲಿ ಕ್ರೈಮ್ ಪಾಡ್‌ಕ್ಯಾಸ್ಟರ್ ಆಗಿ ನಟಿಸಿದ್ದಾರೆ. ಈ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. ಇದನ್ನು ಚಂದ್ರ ಪೆಮ್ಮರಾಜು ಸಹಾಯದಿಂದ ಶರಣ್ ಕೊಪ್ಪಿಸೆಟ್ಟಿ ನಿರ್ದೇಶಿಸಿದ್ದಾರೆ. ಆಮಾನಿ, ಈಶಾ ಚಾವ್ಲಾ ಮತ್ತು ವಿಶ್ವದೇವ್ ರಾಚಕೊಂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶೋಭಿತಾ ಪ್ರಸ್ತುತ ತಮಿಳು ಚಿತ್ರ ವೆಟ್ಟುವಂನಲ್ಲಿ ನಟಿಸುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net