ಚಿತ್ರಮಂದಿರದ ಬೆಳ್ಳಿ ಪರದೆಗೆ ಅಡ್ಡಬಿದ್ದು ನಮಸ್ಕರಿಸಿದ ಸ್ಟಾರ್​ ನಟನಿಗೆ ಅಭಿಮಾನಿಗಳ ಜೈಕಾರ! Theatre

ಚಿತ್ರಮಂದಿರದ ಬೆಳ್ಳಿ ಪರದೆಗೆ ಅಡ್ಡಬಿದ್ದು ನಮಸ್ಕರಿಸಿದ ಸ್ಟಾರ್​ ನಟನಿಗೆ ಅಭಿಮಾನಿಗಳ ಜೈಕಾರ! Theatre
ಚಿತ್ರಮಂದಿರದ ಬೆಳ್ಳಿ ಪರದೆಗೆ ಅಡ್ಡಬಿದ್ದು ನಮಸ್ಕರಿಸಿದ ಸ್ಟಾರ್​ ನಟನಿಗೆ ಅಭಿಮಾನಿಗಳ ಜೈಕಾರ! Theatre
Published on

ಪ್ರಮುಖ ಮುಖ್ಯಾಂಶಗಳು

  • ಟಾಲಿವುಡ್ ಹೀರೋ ಶರ್ವಾನಂದ್ ಅಭಿನಯದ ಹೊಸ ಚಿತ್ರ 'ಬೈಕರ್' ಬಿಡುಗಡೆಯಾಗಿದೆ
  • ಶುಕ್ರವಾರ ಬಿಡುಗಡೆಯಾದ ಈ ಚಿತ್ರವು ಜನರ ಮೆಚ್ಚುಗೆ ಗಳಿಸಿ, ಬಾಕ್ಸ್​ ಆಫೀಸ್​ನಲ್ಲಿ ಮುನ್ನುಗ್ಗುತ್ತಿದೆ
  • ಇದೇ ಸಮಯದಲ್ಲಿ ನಟ ಶರ್ವಾನಂದ್ ನಡೆದುಕೊಂಡ ರೀತಿ ಎಲ್ಲರ ಗಮನ ಸೆಳೆದಿದೆ
Theatre : ಟಾಲಿವುಡ್ ಹೀರೋ ಶರ್ವಾನಂದ್ ಅಭಿನಯದ ಹೊಸ ಚಿತ್ರ 'ಬೈಕರ್' ಬಿಡುಗಡೆಯಾಗಿದೆ. ಶುಕ್ರವಾರ ಬಿಡುಗಡೆಯಾದ ಈ ಚಿತ್ರವು ಜನರ ಮೆಚ್ಚುಗೆ ಗಳಿಸಿ, ಬಾಕ್ಸ್​ ಆಫೀಸ್​ನಲ್ಲಿ ಮುನ್ನುಗ್ಗುತ್ತಿದೆ. ಇದೇ ಸಮಯದಲ್ಲಿ ನಟ ಶರ್ವಾನಂದ್ ನಡೆದುಕೊಂಡ ರೀತಿ ಎಲ್ಲರ ಗಮನ ಸೆಳೆದಿದೆ.
ಚಿತ್ರತಂಡದ ಜೊತೆಗೆ, ನಟ ಶರ್ವಾನಂದ್ ಕೂಡ ಚಿತ್ರಮಂದಿರಗಳಲ್ಲಿ ತಮ್ಮ ಅಭಿಮಾನಿಗಳನ್ನು ಭೇಟಿಯಾದರು. ಹೈದರಾಬಾದ್‌ನ ಶ್ರೀರಾಮುಲು ಚಿತ್ರಮಂದಿರದಲ್ಲಿ ತಮ್ಮ ಅಭಿಮಾನಿಗಳನ್ನು ನೋಡಿದ ಶರ್ವಾನಂದ್ ತುಂಬಾ ಭಾವುಕರಾದರು.
ಭಾನುವಾರವಾದ್ದರಿಂದ ಶ್ರೀರಾಮುಲು ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿತ್ತು. ಶರ್ವಾನಂದ್ ಅವರು ಚಿತ್ರಮಂದಿರದೊಳಗೆ ಪ್ರವೇಶಿಸಿದಾಗ ಪ್ರೇಕ್ಷಕರು ಶಿಳ್ಳೆ ಹೊಡೆದು ಹರ್ಷೋದ್ಗಾರ ಮಾಡಿದರು. ಈ ವೇಳೆ ವೇದಿಕೆಗೆ ಬಂದ ಶರ್ವಾನಂದ್, ಮೈಕ್ ಹಿಡಿದು ಮಾತನಾಡದೆ, ತಮ್ಮನ್ನು ಈ ಮಟ್ಟಕ್ಕೆ ತಂದ ಬೆಳ್ಳಿ ಪರದೆಗೆ ಅಡ್ಡಬಿದ್ದು ನಮಸ್ಕರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ನಟನಿಗೆ ಜೈಕಾರ ಹಾಕುತ್ತಿದ್ದಾರೆ.
ಅಂದಹಾಗೆ, ನಿರ್ದೇಶಕ ಅಭಿಲಾಷ್ ರೆಡ್ಡಿ 'ಬೈಕರ್' ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಭಾರತದ ಮೊದಲ ಮೋಟೋಕ್ರಾಸ್ ರೇಸಿಂಗ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಶರ್ವಾನಂದ್, ವಿಕಾಸ್ ನಾರಾಯಣ (ವಿಕ್ಕಿ) ಪಾತ್ರದಲ್ಲಿ ನಟಿಸಿದ್ದು, ತಂದೆ-ಮಗನ ನಡುವಿನ ಭಾವನಾತ್ಮಕ ಸಂಬಂಧ, ಕುಟುಂಬದ ಹೆಮ್ಮೆ ಮತ್ತು ಅಪಾಯಕಾರಿ ಬೈಕ್ ರೇಸಿಂಗ್ ಸ್ಪರ್ಧೆಗಳ ನಡುವಿನ ಆಕರ್ಷಕ ಕಥೆಯನ್ನು ತೋರಿಸುತ್ತದೆ.
ಡಾ. ರಾಜಶೇಖರ್, ಮಾಲ್ವಿಕಾ ನೈರ್, ಅತುಲ್ ಕುಲಕರ್ಣಿ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ರೇಸಿಂಗ್ ಸೀಕ್ವೆನ್ಸ್‌ಗಳ ತಾಂತ್ರಿಕತೆ ಮತ್ತು ಶರ್ವಾನಂದ್ ಅವರ ದೈಹಿಕ ರೂಪಾಂತರ ಹಾಗೂ ಅಮೋಘ ನಟನೆಯಿಂದ ಚಿತ್ರವು ಪ್ರೇಕ್ಷಕರನ್ನು ಆಕರ್ಷಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net