ಸಮಂತಾ ಕಮ್‌ಬ್ಯಾಕ್..ಮಾ ಇಂಟಿ ಬಂಗಾರಂ ಟೀಸರ್ ರಿಲೀಸ್ ಡೇಟ್ ಫಿಕ್ಸ್! Samantha Ruth Prabhu

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Samantha Ruth Prabhu: ಟಾಲಿವುಡ್​ ನಟಿ ಸಮಂತಾ ರುತ್ ಪ್ರಭು ಅವರು ಆರೋಗ್ಯ ಸಮಸ್ಯೆಯಿಂದ ವಿಶ್ರಾಂತಿ ಪಡೆದ ನಂತರ, ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯಗಳನ್ನು ಪ್ರಾರಂಭಿಸಿ ಮತ್ತೆ ನಟನಾ ಲೋಕಕ್ಕೆ ಮರಳಿದ್ದಾರೆ. 
ಬುಧವಾರ (ಜ. 07) ರಂದು, ಅವರು ತಮ್ಮ ಮುಂಬರುವ ಚಿತ್ರ 'ಮಾ ಇಂತಿ ಬಂಗಾರಂ' ನ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದು, ಈ ಸಿನಿಮಾವನ್ನು ಅವರ ಪತಿ ರಾಜ್ ನಿಧಿಮೋರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಸಮಂತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಮಂತಾ ಚಿತ್ರದ ಮೊದಲ ನೋಟವನ್ನು ಹಂಚಿಕೊಂಡಿದ್ದು, ಅವರು ಕಂದು ಬಣ್ಣದ ಸೀರೆಯನ್ನುಟ್ಟು ಬಸ್ಸಿನೊಳಗೆ ನಿಂತಿರುವುದನ್ನು ನೋಡಬಹುದು. ಈ ಚಿತ್ರವು ಶುಕ್ರವಾರ (ಜ.09) ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ. ಆದಾಗ್ಯೂ,  ಈ ಹಿಂದೆ ಅವರು ಕಥಾವಸ್ತುವಿನ ವಿವರಗಳು ಮತ್ತು ಕಥಾಹಂದರವನ್ನು ಗೌಪ್ಯವಾಗಿಟ್ಟಿದ್ದರು. 
ಮಾ ಇಂತಿ ಬಂಗಾರಂ ಚಿತ್ರದ ನಿರ್ಮಾಪಕಿ ಆಗಿರುವ ಸಮಂತಾ, ಮುಂಬೈ ಮಿರರ್​ ಕಾರ್ಯಕ್ರಮದಲ್ಲಿ ಸಂಭಾಷಣೆ ನಡೆಸುವ ಸಮಯದಲ್ಲಿ ಈ ಯೋಜನೆಯಲ್ಲಿ ಏನಾಯಿತು ಎಂಬುದನ್ನು ವಿವರಿಸಿದ್ದಾರೆ.
ನಿಮ್ಮ ಮನಸ್ಸಿಗೆ ತಲುಪುವ ಕಥೆಗಳು ಚಿತ್ರಮಂದಿರದಿಂದ ಹೊರ ಬಂದ ನಂತರವೂ ಆ ಕಥೆ ಮನಸ್ಸಿನಲ್ಲಿಯೇ ಉಳಿಯಬೇಕು. ಅಂದರೆ, ಇದು ಕೇವಲ ಎರಡೂವರೆ ಗಂಟೆಯ ಮನೋರಂಜನೆಯಲ್ಲ, ಬದಲಿಗೆ ಪ್ರೇಕ್ಷಕರ ಮೇಲೆ ದೀರ್ಘಕಾಲ ಪ್ರಭಾವ ಬೀರುವಂತಹ ಗಟ್ಟಿಯಾದ ಕಥೆಯಾಗಬೇಕು ಎಂದು ಸಮಂತಾ ಹೇಳಿದ್ದಾರೆ.
ನಿರ್ಮಾಪಕಿಯಾಗಿ ತಮ್ಮ ಪ್ರಯಾಣದ ಕಥೆಯನ್ನು ನೆನಪಿಸಿಕೊಂಡ ಸಮಂತಾ, ನಟಿಯಿಂದ ನಿರ್ಮಾಪಕಿಯಾಗುವ ನನ್ನ ಪ್ರಯಾಣವು ಕಲಿಕೆ ಮತ್ತು ಕಲಿಯದೆ ಇರುವ ಬೆಳವಣಿಗೆಯ ಬಗ್ಗೆ. ಇದು ಚೌಕಟ್ಟನ್ನು ಮೀರಿದ, ಹೃದಯಕ್ಕೆ ಮುಟ್ಟುವ ನಿರೂಪಣೆಗಳನ್ನು ರೂಪಿಸುವ ಬಯಕೆಯ ಮೇಲೆ ಕೇಂದ್ರೀಕೃತವಾಗಿದೆ ಎಂದರು.

ಸಮಂತಾ ಮದುವೆ ಬಗ್ಗೆ

ಡಿಸೆಂಬರ್​ 01 ರಂದು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಟಿ ಸಮಂತಾ ಮತ್ತು ರಾಜ್ ನಿಧಿಮೋರು ಬಹಳ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದು ಸಮಂತಾ-ರಾಜ್​ ಇಬ್ಬರಿಗೂ ಇದು ಎರಡನೇ ಮದುವೆ. ವಿಶೇಷವಾಗಿ ಈ ಶುಭಕಾರ್ಯ 'ಭೂತ ಶುದ್ಧಿ ವಿವಾಹ' ರೀತಿಯಲ್ಲಿ ನಡೆಯಿತು. ಈ ವಿಷಯ ಅನೇಕರಿಗೆ ಹೊಸತು ಎನ್ನಿಸಿದ್ದಂತು ಖಂಡಿತ. ಭೂತ ಶುದ್ಧಿ ಮದುವೆ ಎಂಬ ಪದ ಹೊರಬಂದಾಗಿನಿಂದ, ಅನೇಕರು ಇದರ ಬಗ್ಗೆ ತಿಳಿಯಲು ತೀವ್ರ ಕೌತುಕ ವ್ಯಕ್ತಪಡಿಸಿದ್ದಾರೆ. 

ಏನಿದು ಭೂತ ಶುದ್ದಿ ವಿವಾಹ?

ಇದು ಪ್ರಾಚೀನ ಯೋಗ ಸಂಪ್ರದಾಯವಾಗಿದೆ. ಈ ಸಂಪ್ರದಾಯದ ಪ್ರಕಾರ, 'ಭೂತ ಶುದ್ಧಿ ವಿವಾಹ'ವನ್ನು ನಡೆಸಿದರೆ, ದಂಪತಿಗಳ ನಡುವೆ ಆಲೋಚನೆಗಳು, ಭಾವನೆಗಳು ಮತ್ತು ದೈಹಿಕತೆಯನ್ನು ಮೀರಿ ಆಳವಾದ ಬಂಧವು ರೂಪುಗೊಳ್ಳುತ್ತದೆ ಎಂಬುದು ಆಳವಾದ ನಂಬಿಕೆ ಎಂದು ತಿಳಿದುಬಂದಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net