ಸಮಂತಾ-ರಾಜ್​ ಎರಡನೇ ಮದುವೆ: ಏನಿದು 'ಭೂತ ಶುದ್ಧಿ ವಿವಾಹ' ಸಂಪ್ರದಾಯ? ಏನಿದರ ವಿಶೇಷತೆ? | Actress Samantha

Samantha Second Marriage
Samantha Second Marriage
Published on

ಪ್ರಮುಖ ಮುಖ್ಯಾಂಶಗಳು

  • ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಸರಳ ವಿವಾಹ
  • 'ಭೂತ ಶುದ್ದಿ ವಿವಾಹ' ಸಂಪ್ರದಾಯ ಅನುಸುರಣೆ
  • ಅಷ್ಟಕ್ಕೂ ಏನಿದು 'ಭೂತ ಶುದ್ದಿ ವಿವಾಹ'?
ತಮಿಳುನಾಡು: ಎರಡು ವರ್ಷಗಳ ಕಾಲ ಪ್ರೀತಿಸಿ, ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ, ಅಂತಿಮವಾಗಿ ನಾಗಚೈತನ್ಯಗೆ ವಿಚ್ಛೇದನ ನೀಡುವ ಮೂಲಕ ಆ ದಾಂಪತ್ಯ ಸಂಬಂಧಕ್ಕೆ ತೆರೆ ಎಳೆದ ಟಾಲಿವುಡ್​ ನಟಿ ಸಮಂತಾ ರುತು ಪ್ರಭು, ಇದೀಗ 'ದಿ ಫ್ಯಾಮಿಲಿ ಮ್ಯಾನ್'​ ವೆಬ್​ ಸರಣಿಯ ನಿರ್ಮಾಪಕ ರಾಜ್​ ನಿಡಿಮೋರು ಅವರೊಂದಿಗೆ ಎರಡನೇ ಮದುವೆಯಾಗುವ ಮೂಲಕ ಹಲವರ ಅಚ್ಚರಿ, ಸಂತಸಕ್ಕೆ ಕಾರಣವಾಗಿದ್ದಾರೆ.
ಇಂದು (ಡಿ.01) ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ವಿವಾಹವಾದ ಈ ಜೋಡಿ, ಬಹಳ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವರದಿಗಳ ಪ್ರಕಾರ, ಸಮಂತಾ-ರಾಜ್​ ಇಬ್ಬರಿಗೂ ಇದು ಎರಡನೇ ಮದುವೆ. ವಿಶೇಷವಾಗಿ ಈ ಶುಭಕಾರ್ಯ 'ಭೂತ ಶುದ್ಧಿ ವಿವಾಹ' ರೀತಿಯಲ್ಲಿ ನಡೆಯಿತು. ಈ ವಿಷಯ ಅನೇಕರಿಗೆ ಹೊಸತು ಎನ್ನಿಸಿದ್ದಂತು ಖಂಡಿತ. ಭೂತ ಶುದ್ಧಿ ಮದುವೆ ಎಂಬ ಪದ ಹೊರಬಂದಾಗಿನಿಂದ, ಅನೇಕರು ಇದರ ಬಗ್ಗೆ ತಿಳಿಯಲು ತೀವ್ರ ಕೌತುಕ ವ್ಯಕ್ತಪಡಿಸಿದ್ದಾರೆ.

ಏನಿದು 'ಭೂತ ಶುದ್ದಿ ವಿವಾಹ'?

ಭೂತ ಶುದ್ಧಿ ವಿವಾಹ ಅಂದರೇನು? ವಿಶೇಷತೆ ಏನು? ಯಾವ ಕಾರಣಕ್ಕೆ ದಂಪತಿಗಳು ಈ ಪದ್ಧತಿ ಅನುಸರಿಸುತ್ತಾರೆ ಎಂಬುದರ ವಿವರ ಹೀಗಿದೆ ಗಮನಿಸಿ. ಇದು ಪ್ರಾಚೀನ ಯೋಗ ಸಂಪ್ರದಾಯವಾಗಿದೆ. ಈ ಸಂಪ್ರದಾಯದ ಪ್ರಕಾರ, 'ಭೂತ ಶುದ್ಧಿ ವಿವಾಹ'ವನ್ನು ನಡೆಸಿದರೆ, ದಂಪತಿಗಳ ನಡುವೆ ಆಲೋಚನೆಗಳು, ಭಾವನೆಗಳು ಮತ್ತು ದೈಹಿಕತೆಯನ್ನು ಮೀರಿ ಆಳವಾದ ಬಂಧವು ರೂಪುಗೊಳ್ಳುತ್ತದೆ ಎಂಬುದು ಆಳವಾದ ನಂಬಿಕೆ.
ಈ ವಿವಾಹ ಸಮಾರಂಭವನ್ನು ಲಿಂಗ ಭೈರವಿ ದೇವಾಲಯಗಳಲ್ಲಿ ಮತ್ತು ಕೆಲವು ಆಯ್ದ ಸ್ಥಳಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಈ ಪ್ರಕ್ರಿಯೆಯು ದಂಪತಿ ದೇಹದಲ್ಲಿರುವ ಐದು ಅಂಶಗಳನ್ನು ಶುದ್ಧೀಕರಿಸುತ್ತದೆ. ಇದು ದಾಂಪತ್ಯ ಪ್ರಯಾಣಕ್ಕೆ ಸಾಮರಸ್ಯ, ಸಮೃದ್ಧಿ ಮತ್ತು ಆಧ್ಯಾತ್ಮಿಕತೆಯನ್ನು ತರುತ್ತದೆ. ತಮ್ಮ ಮೊದಲ ದಾಂಪತ್ಯ ಜೀವನದಲ್ಲಿ ಒಂದಷ್ಟು ತೊಡಕುಗಳನ್ನು ಎದುರಿಸಿದ ಬಳಿಕ ಸಮಂತಾ-ರಾಜ್ ಜೋಡಿ ತಮ್ಮ ಈ ಬಂಧವನ್ನು ಬಲವಾಗಿಡಲು 'ಭೂತ ಶುದ್ಧಿ ವಿವಾಹ'ಕ್ಕೆ ಮುಂದಾದರು ಎಂಬುದು ಇಲ್ಲಿ ಸ್ಪಷ್ಟ ಎನ್ನಬಹುದು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net