ಪತಿಗೆ ಮ್ಯಾಚ್​ ಆಗುವಂತೆ ಹೆಸರು ಬದಲಿಸಲಿದ್ದಾರೆ ಸಮಂತಾ: ಇನ್ಮುಂದೆ ಸೌತ್​ ಬ್ಯೂಟಿಯ ಹೆಸರೇನು ಗೊತ್ತಾ? Samantha

ನಟಿ ಸಮಂತಾ ಮತ್ತು ಪತಿ ರಾಜ್​ ನಿಧಿಮೋರು
ನಟಿ ಸಮಂತಾ ಮತ್ತು ಪತಿ ರಾಜ್​ ನಿಧಿಮೋರು
Published on

ಪ್ರಮುಖ ಮುಖ್ಯಾಂಶಗಳು

  • ಸೌತ್​ ಸಿನಿರಂಗದ ಸುಂದರಿ ಸಮಂತಾ ಅವರು ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ
  • ನಟ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಾಕಷ್ಟು ಟೀಕೆಗಳನ್ನು ಎದುರಿಸಿದರು
  • ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಿರ್ದೇಶಕ ರಾಜ್ ನಿಧಿಮೋರು ಅವರನ್ನು ವರಿಸಿದರು
ಹೈದರಾಬಾದ್​: ಸೌತ್​ ಸಿನಿರಂಗದ ಸುಂದರಿ ಸಮಂತಾ ( Samantha ) ಅವರು ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಸದ್ಯ ತಮ್ಮ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ. ನಟ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಾಕಷ್ಟು ಟೀಕೆಗಳಿಂದ ಮಾನಸಿಕವಾಗಿ ಏರಿಳಿತಗಳನ್ನು ಅನುಭವಿಸಿದ್ದರು. ಆದರೀಗ ಎಲ್ಲದರಿಂದ ಹೊರಬಂದಿದ್ದು, ತಮ್ಮ ಜೀವನವನ್ನು ಸಂತೋಷದಿಂದ ನಡೆಸುತ್ತಿದ್ದಾರೆ. ಇತ್ತೀಚೆಗೆ ಅವರು ಎರಡನೇ ಬಾರಿಗೆ ವಿವಾಹವಾದರು. ಬಾಲಿವುಡ್ ಸ್ಟಾರ್ ನಿರ್ದೇಶಕ ರಾಜ್ ನಿಧಿಮೋರು ಅವರನ್ನು ವರಿಸಿದರು. ಸದ್ಯ ಖುಷಿಯಾಗಿ ವೈವಾಹಿಕ ಜೀವನ ನಡೆಸುತ್ತಿದ್ದಾರೆ.
ರಾಜ್​ ನಿಧಿಮೋರು ಮತ್ತು ಸಮಂತಾ, ಕೆಲವೇ ಜನರ ಸಮ್ಮುಖದಲ್ಲಿ ವಿವಾಹವಾದರು. ಇದಾದ ನಂತರ, ಸಮಂತಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಸುದ್ದಿಯನ್ನು ಘೋಷಿಸಿದರು. ಅಂದಿನಿಂದ, ಸಮಂತಾ ತನ್ನ ಪತಿ ರಾಜ್ ಜೊತೆ ಸಂತೋಷವಾಗಿದ್ದಾರೆಂದು ತೋರುತ್ತದೆ. ಸಮಂತಾ ಅವರು ಇತ್ತೀಚೆಗೆ ತನ್ನ ಪತಿಗಾಗಿ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅದೇನೆಂದರೆ, ಸಮಂತಾ ಅವರು ಶೀಘ್ರದಲ್ಲೇ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿದ್ದಾರೆ.
ಇಲ್ಲಿಯವರೆಗೆ ಸಮಂತಾ ಅವರ ಹೆಸರು ಸಮಂತಾ ರುತು ಪ್ರಭು ಎಂದಾಗಿತ್ತು. ಆದರೆ, ಈಗ ಅವರು ತಮ್ಮ ಪತಿಯ ಕುಟುಂಬದ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಳ್ಳಲಿದ್ದಾರೆ. ಇನ್ನು ಮುಂದೆ ತಮ್ಮ ಹೆಸರನ್ನು ಸಮಂತಾ ನಿಧಿಮೋರು ಎಂದು ಬದಲಾಯಿಸಿಕೊಳ್ಳಲಿದ್ದಾರೆ.
ಸಮಂತಾ ಅವರು ಪ್ರಸ್ತುತ ನಾಯಕಿಯಾಗಿ ನಟಿಸಿರುವ ಮಾ ಇಂಟಿ ಬಂಗಾರಂ ಚಿತ್ರದಲ್ಲಿ ಈ ಹೆಸರನ್ನು ಅಧಿಕೃತವಾಗಿ ಸೇರಿಸಲಿದ್ದಾರೆ. ಆ ಬಳಿಕ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿಯೂ ತಮ್ಮ ಹೆಸರನ್ನು ಸಮಂತಾ ನಿಧಿಮೋರು ಎಂದು ಬದಲಾಯಿಸಿಕೊಳ್ಳಲಿದ್ದಾರೆ. ಅದೂ ಕೂಡ ಶೀಘ್ರದಲ್ಲೇ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ಸಮಂತಾ ಪ್ರಸ್ತುತ 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಮಹಿಳಾ ನಿರ್ದೇಶಕಿ ನಂದಿನಿ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ಇಲ್ಲಿ ಇನ್ನೊಂದು ವಿಶೇಷವೆಂದರೆ ಸಮಂತಾ ಅವರ ಪತಿ ರಾಜ್ ನಿಧಿಮೋರು ಕೂಡ ಈ ಚಿತ್ರದ ನಿರ್ಮಾಪಕರು. ಇತ್ತೀಚೆಗೆ ಈ ಚಿತ್ರದ ಟೀಸರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರವು ಶೀಘ್ರದಲ್ಲೇ ಚಿತ್ರಮಂದಿರಗಳಿಗೆ ಬರಲಿದೆ. ಬಹಳ ದಿನಗಳ ನಂತರ, ಅದು ಕೂಡ ಅವರ ಎರಡನೇ ಮದುವೆಯ ನಂತರ ಸಮಂತಾ ಮಾಡುತ್ತಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net