"ಐ ಲವ್ಯೂ ಜಯಮ್ಮ"; ರಶ್ಮಿಕಾ ಮಂದಣ್ಣ ಬರ್ತಡೇಗೆ ವಿಜಯ್ ದೇವರ ಕೊಂಡ ಕ್ಯೂಟ್ ಕ್ಯೂಟ್​ ವಿಷಸ್​ ಹೀಗಿತ್ತು!.. Rashmika Mandanna

Vijay wishes to Rashmika
Vijay wishes to Rashmika
Published on
Vijay Deverakonda wishes wife Rashmika Mandanna: ಮೇಡ್​ ಫಾರ್​ ಈಚ್​ ಅದರ್​ ಎನ್ನುವಂತೆ ದಾಂಪತ್ಯ ಜೀವನ ಕಳೆಯುತ್ತಿರುವ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಮಾದರಿ. ಇವರಿಬ್ಬರ ಪೋಸ್ಟ್​ಗಾಗಿ ಹಲವರು ಕಾಯುತ್ತಿರುತ್ತಾರೆ. ಇಂದು ರಶ್ಮಿಕಾ ಅವರು 30ನೇ ವಂಸತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಪತಿ ದೇವರಕೊಂಡ ಹೇಗೆ ವಿಶ್ ಮಾಡಿರಬಹುದು ಎನ್ನುವ ಕಾತರಕ್ಕೆ ತೆರೆ ಬಿದ್ದಿದೆ.
ರಶ್ಮಿಕಾ ಮಂದಣ್ಣರ ಹುಟ್ಟುಹಬ್ಬವು ವಿಜಯ್​ ದೇವರಕೊಂಡರನ್ನು ಮದುವೆ ಮಾಡಿಕೊಂಡ ನಂತರದ ಮೊದಲ ಬರ್ತಡೇ. ಇದು ಮತ್ತಷ್ಟು ವಿಶೇಷತೆಯನ್ನು ಹೆಚ್ಚಿಸಿದೆ. ಗೀತ ಗೋವಿಂದಂ, ಕಾಮ್ರೇಡ್​ ನಂತರ ಒಟ್ಟಾಗಿ  ತಮ್ಮ ಜೀವನದ ಸಂಗಾತಿಯೊಂದಿಗೆ ನಟಿಸುತ್ತಿರುವುದೇ Ranabaali ಸಿನಿಮಾದಲ್ಲಿ. ಈ ಸಿನಿಮಾದ ಪಾತ್ರಕ್ಕಾಗಿ ರಶ್ಮಿಕಾರವರು ಸಜ್ಜಾಗುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡು ವಿಜಯ್​ ದೇವರಕೊಂಡ 'ಐ ಲವ್​ ಯೂ ಜಯಮ್ಮ' ಎಂದು ಕ್ಯೂಟ್​ ಆಗಿ ವಿಶ್ ಮಾಡಿದ್ದಾರೆ.
ಸೆಪ್ಟೆಂಬರ್​ನಲ್ಲಿ ಸಿನಿಮಾ ರಿಲೀಸ್
ರಣಬಾಲಿ ಪಾತ್ರವೂ ಹಲವು ಶತಮಾನಗಳಷ್ಟು ಹಳೆಯದು. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣರ ಪಾತ್ರದ ಹೆಸರು ಜಯಮ್ಮ ಎಂದು. ರಾಹುಲ್ ಸಂಕೃತ್ಯನ್ ನಿರ್ದೇಶನದ 'ರಣಬಾಲಿ' ಒಂದು ಮಹತ್ವಾಕಾಂಕ್ಷೆಯ ಪೀರಿಯಡ್ ಡ್ರಾಮಾ ಆಗಿದ್ದು, ಸೆಪ್ಟೆಂಬರ್ ಬಿಡುಗಡೆಗೂ ಮುನ್ನವೇ ಸಾಕಷ್ಟು ಸಕಾರಾತ್ಮಕ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ದೇವರಕೊಂಡ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?

ರಣಬಾಲಿ ಸಿನಿಮಾ ಸೆಟ್​ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ನಿರ್ದೇಶಕ ರಾಹುಲ್ ಸಂಕೃತ್ಯನ್  ಪಾತ್ರದ ಬಗ್ಗೆ ವಿವರಿಸುತ್ತಿದ್ದಾರೆ.  'ಜಯಮ್ಮ' ಪಾತ್ರಕ್ಕಾಗಿ ಸಿದ್ಧತೆ ನಡೆಸುತ್ತಿರುವ ಕ್ಷಣಗಳು ಮತ್ತು ಆ ಪಾತ್ರದ ರೂಪ ಹಾಗೂ ಭಾವಕ್ಕೆ ಜೀವ ತುಂಬಲು ಅವರು ತೋರುತ್ತಿರುವ ಆಳವಾದ ಆಸಕ್ತಿಯನ್ನು ಈ ವಿಡಿಯೋ ಒಳಗೊಂಡಿದೆ. ಜೊತೆಗೆ ಬರ್ತಡೇ ವಿಷಸ್​ ಸಹ ಹೇಳಲಾಗಿದೆ. ರಶ್ಮಿಕಾರ ಹುಟ್ಟುಹಬ್ಬಕ್ಕೂ ಮೊದಲು ರಾಯಲ್​ಸೀಮಾದ ಪ್ರಮುಖ ಪ್ರದೇಶ, ಅನಂತಪುರದಲ್ಲಿ  ಈ ಸಿನಿಮಾದ ಕೆಲವು ಭಾಗಗಳ ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ. 

ರಣಬಾಲಿ ಸಿನಿಮಾದ ಕಥಾ ಹಂದರವೇನು?

ರಣಬಾಲಿಯು 1854 ಮತ್ತು 1878 ರ ನಡುವೆ ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ  ಘಟನೆಯನ್ನು ಸ್ಪೂರ್ತಿಯಾಗಿ ಪಡೆದು ಚಿತ್ರೀಕರಿಸಲಾಗಿದೆ. ಈ ಸಿನಿಮಾದಲ್ಲಿ ಯೋಧನ ಪಾತ್ರದಲ್ಲಿ ವಿಜಯ್​ ದೇವರಕೊಂಡ ಅವರು ನಟಿಸಿದ್ದರೆ, ಪತ್ನಿಯಾಗಿ ರಶ್ಮಿಕಾ ಮಂದಣ್ಣ  ಬಣ್ಣ ಹಚ್ಚಿದ್ದಾರೆ. 19 ನೇ ಶತಮಾನದಲ್ಲಿ ಬೇರೂರಿರುವ ಆಕರ್ಷಕ ಕಥೆ ಹೊರತರುವ ಭರವಸೆಯನ್ನು ನೀಡುತ್ತದೆ.
ರಾಹುಲ್ ಸಂಕೃತ್ಯಾನ್ ನಿರ್ದೇಶನದ ಮತ್ತು ಮೈತ್ರಿ ಮೂವಿ ಮೇಕರ್ಸ್ ಬೆಂಬಲದೊಂದಿಗೆ, ಟಿ-ಸೀರೀಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲಾಗಿದೆ. ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ನಿರ್ಮಿಸಿರುವ ರಣಬಾಲಿ, ಪ್ಯಾನ್-ಇಂಡಿಯನ್ ಚಿತ್ರವಾಗಿದೆ. ಸೆಪ್ಟೆಂಬರ್ 11 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಅಭಿಮಾನಿಗಳಿಂದ ಇಂದಿನಿಂದಲೇ ಅತ್ಯುತ್ತಮ ರೆಸ್ಪಾನ್ಸ್ ಸಿಗುತ್ತಿದೆ. (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net