ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು! 'ಸಿಕಂದರ್' ಚಿತ್ರದ​ ಸೋಲಿನ ಕುರಿತು ನಟಿ ರಶ್ಮಿಕಾ ಹೇಳಿಕೆ ವೈರಲ್

ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ಫ್ಲಾಪ್​ ಸಾಲಿಗೆ ಸೇರಿದ ಬಾಲಿವುಡ್​ನ 'ಸಿಕಂದರ್' ಚಿತ್ರ
  • ನನಗೆ ಮೊದಲು ಹೇಳಿದ್ದು ಬೇರೆ, ಆ ನಂತರ ಆಗಿದ್ದು ಬೇರೆ ಎಂದ ನಟಿ
  • ಇದೇ ಕಾರಣಕ್ಕೆ ಚಿತ್ರ ಸೋಲು ಅನುಭವಿಸಿತು ಎಂದ ರಶ್ಮಿಕಾ
ಹೈದರಾಬಾದ್​: ಪ್ಯಾನ್ ಇಂಡಿಯಾ ನಟಿ, 'ನ್ಯಾಷನಲ್​ ಕ್ರಶ್'​​ ರಶ್ಮಿಕಾ ಮಂದಣ್ಣ, ಪ್ರಸ್ತುತ ಭಾರತೀಯ ಚಿತ್ರೋದ್ಯಮದ ಹಲವು ಭಾಷೆಯ ಚಿತ್ರಗಳಲ್ಲಿ ಸಖತ್ ಬಿಜಿಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಬಾಲಿವುಡ್​ ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ರಶ್ಮಿಕಾ, ಕಳೆದ ವರ್ಷ ತೆರೆಕಂಡ 'ಸಿಕಂದರ್'​ ಸಿನಿಮಾದಲ್ಲಿ ಸೋಲು ಕಂಡರು. ಈ ಬಗ್ಗೆ ಇದುವರೆಗೆ ಎಲ್ಲಿಯೂ ಮಾತನಾಡದ ನಟಿ, ಕಡೆಗೂ ಚಿತ್ರದ ಸೋಲಿನ ಹೊಣೆ ಹೊರಲು ನಿರಾಕರಿಸಿದ್ದಾರೆ.

ಹಿಂದಿ, ತಮಿಳು, ತೆಲುಗು....

ತೆಲುಗು ಮತ್ತು ತಮಿಳು ಸೇರಿದಂತೆ ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ, ಬ್ಲಾಕ್‌ಬಸ್ಟರ್ ಹಿಟ್‌ಗಳನ್ನೇ ನೋಡುತ್ತಿರುವುದು ಗಮನಾರ್ಹ. ಕಳೆದ ವರ್ಷ, 'ಕುಬೇರ', 'ಸಿಕಂದರ್', 'ಚಾವಾ' ಮತ್ತು 'ದಿ ಗರ್ಲ್‌ಫ್ರೆಂಡ್‌' ಚಿತ್ರಗಳಲ್ಲಿ ಅಭಿನಯಿಸಿದ ರಶ್ಮಿಕಾ, 'ಪುಷ್ಪ 2', 'ಅನಿಮಲ್' ಸಿನಿಮಾಗಳ ಹಿಟ್​ನಿಂದ ತಮ್ಮ ವೃತ್ತಿಜೀವನದಲ್ಲಿ ಅತಿದೊಡ್ಡ ಯಶಸ್ಸು ಕಂಡರು. ಆದರೆ, ಒಂದಷ್ಟು ಚಿತ್ರಗಳ ಫ್ಲಾಪ್​ ಸಾಲಿಗೆ ಸೇರಿದ್ದು, ಅದರಲ್ಲಿ ಸಿಕಂದರ್​ ಬಾಕ್ಸ್ ಆಫೀಸ್​ನಲ್ಲಿ ಮಕಾಡೆ ಮಲಗಿತು. ಇದು ಚಿತ್ರತಂಡಕ್ಕೆ ದೊಡ್ಡ ಮಟ್ಟದ ನಷ್ಟ ತಂದೊಡ್ಡಿತು.

ಬದಲಾವಣೆಯಿಂದಲೇ ಸೋಲಾಯಿತು...

ಎ.ಆರ್. ಮುರುಗದಾಸ್ ನಿರ್ದೇಶಿಸಿದ ಮತ್ತು ಸಲ್ಮಾನ್ ಖಾನ್ ನಟಿಸಿದ ಈ ಆ್ಯಕ್ಷನ್ ಚಿತ್ರದ ಸೋಲಿನ ಬಗ್ಗೆ ತುಟಿಬಿಚ್ಚಿದ ರಶ್ಮಿಕಾ, "ಸಿಕಂದರ್ ನಾನು ತುಂಬಾ ಆತ್ಮವಿಶ್ವಾಸದಿಂದ ಮಾಡಿದ ಚಿತ್ರ. ಸಲ್ಮಾನ್ ಖಾನ್ ಮತ್ತು ಎ.ಆರ್. ಮುರುಗದಾಸ್ ಅವರೊಂದಿಗೆ ಕೆಲಸ ಮಾಡಿದ ಅನುಭವ ನನಗೆ ತುಂಬಾ ಸಂತೋಷ ತಂದಿತು. ಆದರೆ, ಚಿತ್ರಕ್ಕೂ ಮೊದಲು ನನಗೆ ಹೇಳಲಾದ ಕಥೆ ಬೇರೆಯಿತ್ತು ಮತ್ತು ನಂತರದಲ್ಲಿ ಬೇರೆಯೇ ಇತ್ತು" ಎಂದಿದ್ದಾರೆ.
"ನಾನು ಮೊದಲು ಕೇಳಿದ ಬಳಿಕ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಇದು ಚಿತ್ರೋದ್ಯಮದಲ್ಲಿ ಸರ್ವೆ ಸಾಮಾನ್ಯ. ಸಿಕಂದರ್ ವಿಷಯದಲ್ಲೂ ಅದೇ ಆಯಿತು" ಎಂದು ರಶ್ಮಿಕಾ ಬೇಸರ ಹೊರಹಾಕಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net