ವಾಸ್ತವವಾಗಿ, ಇಷ್ಟೊಂದು ದೊಡ್ಡ ಮಟ್ಟದ ಆಫರ್‌ಗಳು ಬಂದರು ಕೂಡ ರಾಜಮೌಳಿ ಸಿನಿಮಾ ತಂಡವು ತಕ್ಷಣ ವ್ಯವಹಾರವನ್ನು ಪ್ರಾರಂಭಿಸಲು ಯಾವುದೇ ಆಸಕ್ತಿ ಹೊಂದಿಲ್ಲ. ಏಕೆಂದರೆ, ಬಾಹುಬಲಿ ಮತ್ತು ಆರ್‌ಆರ್‌ಆರ್‌ನಂತೆಯೇ ವಾರಣಾಸಿ ಚಿತ್ರಕ್ಕೂ ರಾಜಮೌಳಿ ಅವರು ಒಂದು ತಂತ್ರವನ್ನು ಹೊಂದಿರುತ್ತಾರೆಂದು ಟ್ರೇಡ್ ಮೂಲಗಳು ವಿಶ್ಲೇಷಿಸುತ್ತಿವೆ. ಅದಕ್ಕಾಗಿಯೇ, ವಾರಣಾಸಿ ಚಿತ್ರದ ಶೂಟಿಂಗ್ ಮುಗಿದ ಬಳಿಕ ಪೂರ್ಣ ಪ್ರಮಾಣದ ಮಾರುಕಟ್ಟೆ ತಂತ್ರದೊಂದಿಗೆ ವಿತರಣೆ ಮಾಡಲು ರಾಜಮೌಳಿ ತಂಡ ಯೋಜಿಸಿದೆ ಎಂಬ ಸುದ್ದಿ ಟಾಲಿವುಡ್ ಸಿನಿ ಗಲ್ಲಿಯಲ್ಲಿ ಹರಿದಾಡುತ್ತಿದೆ, (ಏಜೆನ್ಸೀಸ್).