Swayambhu-175 ದಿನಗಳ ಚಿತ್ರೀಕರಣ, 2500ಕ್ಕೂ ಹೆಚ್ಚು ವಿಎಫ್​​ಎಕ್ಸ್​ ಶಾಟ್ಸ್​

Swayambhu
Swayambhu
Published on
Swayambhu -
ಎಲ್ಲ ಚಿತ್ರರಂಗಗಳಲ್ಲೂ ನಟರು, ಆಯಾ ಭಾಷೆ ಅಥವಾ ರಾಜ್ಯಕ್ಕೆ ಸೀಮಿತವಾಗದೇ ಪ್ಯಾನ್​ ಇಂಡಿಯಾ, ಪ್ಯಾನ್​ ವರ್ಲ್ಡ್​ ಸವಾರಿ ಹೊರಟಿದ್ದಾರೆ. "ಹ್ಯಾಪಿ ಡೇಸ್​' ಖ್ಯಾತಿಯ ತೆಲುಗು ನಟ ನಿಖಿಲ್​ ಸಿದ್ಧಾರ್ಥ್​ ಕೂಡ "ಕಾರ್ತಿಕೇಯ 2' (2022) ಮತ್ತು "18 ಪೇಜಸ್​' ಯಶಸ್ಸಿನ ಬಳಿಕ ಪ್ಯಾನ್​ ಇಂಡಿಯಾ ಹೊರಟಿದ್ದಾರೆ. 2022ರಲ್ಲಿ ಒಂದೇ ವರ್ಷ ಬ್ಯಾಕ್​ ಟು ಬ್ಯಾಕ್​ ಎರಡು ಹಿಟ್​ಗಳನ್ನು ನೀಡಿದ ಅವರು, "ಸ್ಪೈ' (2023) ಮತ್ತು "ಅಪ್ಪುಡೊ ಇಪ್ಪುಡೊ ಎಪ್ಪುಡೊ' (2024) ಚಿತ್ರಗಳಲ್ಲಿ ಯಶಸ್ಸು ಕಾಣಲಿಲ್ಲ. ಇದೀಗ "ಸ್ವಯಂಭೂ' ಮತ್ತು 'ದ ಇಂಡಿಯಾ ಹೌಸ್​' ಮೂಲಕ ಪ್ಯಾನ್​ ಇಂಡಿಯಾ ಹೊರಟಿರುವ ಅವರು, ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಅದರಲ್ಲಂತೂ ಪೀರಿಯಾಡಿಕಲ್​ "ಸ್ವಯಂಭೂ' ಮೇಲೆ ನಿಖಿಲ್​, ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಬಗ್ಗೆ ಇತ್ತೀಚೆಗಷ್ಟೆ ಮಾಹಿತಿ ನೀಡಿರುವ ಅವರು, ""ಸ್ವಯಂಭೂ' ಬಹುಭಾಷೆಗಳ ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಒಳ್ಳೆ ಸಿನಿಮಾಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಒಂದೇ ಚಿತ್ರಕ್ಕಾಗಿ 175 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ, ಅದರಲ್ಲಿ ಬರೋಬ್ಬರಿ 2500 ವಿಎಫ್​ಎಕ್ಸ್​ ಶಾಟ್ಸ್​ ಇರಲಿವೆ ಅಂತ ಖುದ್ದು ನಾನೂ ಅಂದುಕೊಂಡಿರಲಿಲ್ಲ. ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಲಿದ್ದೇವೆ' ಎಂದು ಹೇಳಿಕೊಂಡಿದ್ದಾರೆ. ಇದಲ್ಲದೇ ಮತ್ತೊಂದು ಸ್ವಾತಂತ್ರ$್ಯಪೂರ್ವ ಐತಿಹಾಸಿಕ ಸಿನಿಮಾ "ದ ಇಂಡಿಯಾ ಹೌಸ್​'ನಲ್ಲೂ ನಿಖಿಲ್​ ನಟಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net