

ಹೈದರಾಬಾದ್: ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರನ್ನೂ ಕಾಡುತ್ತಿದೆ. ಆದಾಗ್ಯೂ, ತೆಲಗು ಚಿತ್ರರಂಗದ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ್ (Nagarjuna Akkineni) ಅವರು ತಮ್ಮ ಮೊಬೈಲ್ ಫೋನ್ ಭದ್ರತೆ ಮತ್ತು ಸೈಬರ್ ವಂಚನೆಗಳ ಬಗ್ಗೆ ತಮಗಿರುವ ಆತಂಕವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.