'ನನ್ನ ಪಾಸ್ಟ್​ಗೂ ಶೋಭಿತಾಗೂ ಸಂಬಂಧವೇ ಇಲ್ಲ, ಆರೋಪಗಳಿಗೆ ಆಕೆ ಅರ್ಹಳಲ್ಲ'​; ಡಿವೋರ್ಸ್​ ನಂತರದ ಜೀವನದ ಬಗ್ಗೆ Naga Chaitanya ಹೇಳಿದ್ದಿಷ್ಟು

Naga Chaitanya
Naga Chaitanya
Published on

ಪ್ರಮುಖ ಮುಖ್ಯಾಂಶಗಳು

  • ನನ್ನ ಹಳೆಯ ಸಂಬಂಧಕ್ಕೂ ಶೋಭಿತಾ ಧೂಳಿಪಾಲಗೂ ಯಾವುದೇ ಸಂಬಂಧವಿಲ್ಲ
  • ಆಕೆಯ ಮೇಲೆ ಕೇಳಿಬಂದ ಆರೋಪಗಳಿಗೆ ಆಕೆ ನಿಜಕ್ಕೂ ಅರ್ಹಳಲ್ಲ: ನಾಗ ಚೈತನ್ಯ
  • ಒಂಟಿಯಾಗಿದ್ದ ನನ್ನ ಬದುಕಿಗೆ ಬಂದ ಆಕೆಗೆ ನಿಜವಾಗಿಯೂ ತ್ಯಾಂಕ್ಯು ಹೇಳಲು ಬಯಸುತ್ತೇನೆ
 Naga Chaitanya: ನನ್ನ ಹಳೆಯ ಸಂಬಂಧದಲ್ಲಿ ಬಿರುಕು ಮೂಡಲು ಶೋಭಿತಾ ಪಾತ್ರ ಕಿಂಚಿತ್ತು ಇಲ್ಲ. ಆಕೆಯನ್ನು ದೂರುವುದು ಸರಿಯಲ್ಲ.  ಯಾವ ಆರೋಪಕ್ಕೂ ಆಕೆ ಅರ್ಹಳಲ್ಲ. ನಾವು ಸೋಶಿಯಲ್​ ಮೀಡಿಯಾ ಮೂಲಕ ಪರಿಚಯ ಮಾಡಿಕೊಂಡೆವು.ಇನ್​ಸ್ಟಾಗ್ರಾಮ್​ ಅಲ್ಲಿ ಚಾಟ್​ ಮಾಡ್ತಾ ನಮ್ಮ ಸಂಬಂಧ ಬೆಳೆಯಿತು. ನಾನೊಬ್ಬನೇ ಇರುವಾಗ ಆಕೆ ನನ್ನ ಬಾಳಿನಲ್ಲಿ ಬಂದಳು. ಆಕೆಯ ಮೇಲೆ ಟೀಕೆ ವ್ಯಕ್ತವಾಗುತ್ತಿದ್ದರೂ ಅದನ್ನೆಲ್ಲ ಆಕೆ ಸಹಿಸಿಕೊಂಡ ಬಗ್ಗೆ ನಿಜಕ್ಕೂ ಶ್ಲಾಘನೀಯ ಎಂದು  ನಾಗಚೈತನ್ಯ ಮಾತನಾಡಿದ್ದಾರೆ.
ನಾಗ ಚೈತನ್ಯ ಅವರು ತಮ್ಮ ಮತ್ತು ಶೋಭಿತಾರ ಸಂಬಂಧದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಶೋಭಿತಾರೊಂದಿಗೆ ಪರಿಚಯ ಮತ್ತು ಭೇಟಿಯಾಗಿದ್ದು, ಮದುವೆ ಬಗ್ಗೆ ಆಕೆ ಎದರಿಸಿದ್ದ ಟೀಕೆಗಳ ಬಗ್ಗೆ ಮಾತನಾಡಿ, ಇದ್ಯಾವುದಕ್ಕು ಆಕೆ ಅರ್ಹಳಲ್ಲ. ತಪ್ಪೇ ಇಲ್ಲದಿದ್ದರು ಜನರ ದೂಷಿಸುವುದನ್ನು ಪ್ರಬುದ್ಧವಾಗಿ ನಿಭಾಯಿಸಿದ್ದಾರೆ ಎಂದು ಮಾತನಾಡಿದ್ದಾರೆ,.

2017ರಲ್ಲಿ ಸಮಂತಾ ಜೊತೆ ಮದುವೆ

ಯೇ ಮಾಯಂ ಚೇಸಾವೇ ಸಿನಿಮಾ ಮೂಲಕ ಒಟ್ಟಾಗಿ ಕಾಣಿಸಿಕೊಳ್ಳಲು ಆರಂಭಿಸಿದ ಸಮಂತಾ ಮತ್ತು ನಾಗಚೈತನ್ಉ 2017ರಲ್ಲಿ ಅದ್ದೂರಿಯಾ ಮದುವೆಯಾದರು. ಇಬ್ಬರ ಮಧ್ಯೆ ಬಿರುಕುಂಟಾಗಿದೆ ಎನ್ನುವ ಊಹಾಪೋಹ ಹೆಚ್ಚಾಗುತ್ತಲೇ 2021ರ ಕೋವಿಡ್​ ಕಾಲದಲ್ಲಿ ಇಬ್ಬರು ಡಿವೋರ್ಸ್​ ಪಡೆದುಕೊಂಡು ಅಧಿಕೃತವಾಗಿ ಬೇರೆಯಾಗಿದ್ದರು. 
2024ರಲ್ಲಿ ಶೋಭಿತಾ ಜೊತೆ ಮದುವೆ
ಅದಾದ ಬಳಿಕ ನಾಗ ಚೈತನ್ಯ ಅವರ ಹೆಸರು ಮಾಡೆಲ್​ ಶೋಭಿತಾ ಧೂಳಿಪಾಲ  ಜೊತೆಗೆ ಕೇಳಿಬಂದಿತ್ತು ಅವರಿಬ್ಬರು, 2024 ಡಿಸೆಂಬರ್ 4ರಂದು  ಇಬ್ಬರು ಮದುವೆ ಮಾಡಿಕೊಂಡರು. ವಿವಾಹದ ಬಳಿಕ ಹಲವರು ಇಬ್ಬರ ವಿಚ್ಛೇದನಕ್ಕೆ ಶ್ವೇತ ಅವರೇ ಕಾರಣ ಎಂದು ದೂಷಿಸಲಾಗಿತ್ತು. ಹಲವು ಟೀಕೆಗಳನ್ನು ಎದುರಿಸಿದ್ದರು. ಈ ಬಗ್ಗೆ ನಾಗ ಚೈತನ್ಯ ಎರಡನೇ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ.

ಶೋಭಿತಾ ವಿರುದ್ಧ ಆರೋಪ

ನಾನು ಡಿವೋರ್ಸ್​ ಆದ ಬಳಿಕ ಒಬ್ಬಂಟಿಯಾಗಿದ್ದೆ. ಆ ಒಂಟಿತನ ದೂರ ಮಾಡಿದ್ದು ಶೋಭಿತಾ ಅವರು. ಸಾಕಷ್ಟು ಸಮಯ ಒಟ್ಟಾಗಿ ಸುತ್ತಾಡಿದ್ದೆವು. ಚಾಟ್ ಮಾಡಿದ್ದೆವು ಕೊನೆಗೆ ಮದುವೆಯಾಗಲು ನಿರ್ಧರಿಸಿದೆವು. ಆಗ ಆಕೆಗೆ ಸಾಕಷ್ಟು ಹೇಟ್​ ಕಾಮೆಂಟ್​ಗಳು ಬರತೊಡಗಿದವು. ಸಮಂತಾರಿಂದ ದೂರ ಆಗಲು ನೀವೆ ಕಾರಣ ಎಂದು ಹಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು ಎಂದಿದ್ದಾರೆ.
ಮುಂದುವರೆದು, ನನಗೆ ಆಕೆಯ ಪರಿಸ್ಥಿತಿ ನೋಡಿ ಸಂಕಟವಾಗುತ್ತದೆ. ಇದರಲ್ಲಿ ಆಕೆಯ ತಪ್ಪೇನು ಇಲ್ಲ. ನಮ್ಮ ಮಧ್ಯೆ ಸಂಬಂಧ ಸೋಶಿಯಲ್​ ಮೀಡಿಯಾದಿಂದ ಚಿಗುರಿದ್ದು, ನನ್ನ ಪಾಸ್ಟ್​ಗೂ ಶೋಭಿತಾಗೂ ಯಾವುದೇ ಸಂಬಂಧ ಇಲ್ಲ. ಆಕೆ ನನ್ನ ಜೀವನಕ್ಕೆ ಬಂದಿದ್ದಕ್ಕೆ ನಿಜಕ್ಕೂ ಧನ್ಯವಾದ ಹೇಳಬೇಕು. ಆಕೆ ಪ್ರಬುದ್ಧವಾಗಿ ವರ್ತಿಸಿದ್ದಾಳೆ. ಆಕೆ ನಿಜವಾದ ಹೀರೋ ಎಂದರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net