ವದಂತಿಗಳಿಗೆ ಮೃಣಾಲ್ ಠಾಕೂರ್ ಬ್ರೇಕ್? ಧನುಷ್ ಜೊತೆಗಿನ ಮದುವೆ ಬಗ್ಗೆ ನಟಿ ಕೊಟ್ಟ ಕ್ಲಾರಿಟಿ ಏನು? Mrunal Thakur
ನಟಿ ಮೃಣಾಲ್ ಠಾಕೂರ್, ನಟ ಧನುಷ್ (ಚಿತ್ರ Instagram)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಟಿ ಮೃಣಾಲ್ ಠಾಕೂರ್ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿಯೇ ಸುದ್ದಿಯಲ್ಲಿದ್ದಾರೆ
ತಮಿಳು ಸೂಪರ್ ಸ್ಟಾರ್ ನಟ ಧನುಷ್ ಅವರೊಂದಿಗೆ ಮೃಣಾಲ್ ಮದುವೆಯಾಗಲಿದ್ದಾರೆ ಎಂಬ ವದಂತಿ ಆಗ್ಗಾಗ ಕೇಳಿ ಬರುತ್ತಿದೆ
ನನ್ನ ಕೆಲಸವು ನನ್ನನ್ನು ಪರಿಚಯಿಸಬೇಕೇ ಹೊರತು ಗಾಸಿಪ್ನಿಂದ ಅಲ್ಲ ಎಂದು ನಾನು ಯಾವಾಗಲು ನಂಬಿದ್ದೇನೆ
ಧನುಷ್ ಯಾವಾಗಲು ನನಗೆ ಸಹೋದರನಿದ್ದಂತೆ. ನಾವಿಬ್ಬರೂ ಹಂಚಿಕೊಳ್ಳುವುದು ಪರಸ್ಪರ ಗೌರವ ಅಷ್ಟೇ
Mrunal Thakur: ಬಹುಭಾಷಾ ನಟಿ ಮೃಣಾಲ್ ಠಾಕೂರ್ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿಯೇ ಸುದ್ದಿಯಲ್ಲಿದ್ದಾರೆ. ಅದರಲ್ಲೂ ತಮಿಳು ಸೂಪರ್ ಸ್ಟಾರ್ ನಟ ಧನುಷ್ ಅವರೊಂದಿಗೆ ಮೃಣಾಲ್ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುರತ್ತಿದ್ದಂತೆಯೇ ನಟಿ ತಮ್ಮ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಚರ್ಚೆಗೆ ನಾಂದಿಹಾಡಿದ್ದಾರೆ.
ವದಂತಿಗಳಿಗೆ ತೆರೆ ಎಳೆದ ಮೃಣಾಲ್!
ನನ್ನ ಕೆಲಸವು ನನ್ನನ್ನು ಪರಿಚಯಿಸಬೇಕೇ ಹೊರತು ಗಾಸಿಪ್ನಿಂದ ಅಲ್ಲ ಎಂದು ನಾನು ಯಾವಾಗಲು ನಂಬಿದ್ದೇನೆ. ಆದರೆ, ಇಂದು ನಾನು ಎಂದಿಗೂ ಬರೆಯದ ಕಥೆಗಳು, ಎಂದಿಗೂ ಮಾತನಾಡದ ಸಂಭಾಷಣೆಗಳು ಮತ್ತು ಎಂದಿಗೂ ತೆಗೆದುಕೊಳ್ಳದ ನಿರ್ಧಾರಗಳೊಂದಿಗೆ ನನ್ನ ಹೆಸರು ಬರುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮದುವೆ ವಿವಾದ ಎಂದು ಕರೆಯಲ್ಪಡುವ ಒಂದು ವಿಷಯ ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಆದರೆ, ಧನುಷ್ ಯಾವಾಗಲು ನನಗೆ ಸಹೋದರನಿದ್ದಂತೆ. ನಾವಿಬ್ಬರೂ ಹಂಚಿಕೊಳ್ಳುವುದು ಪರಸ್ಪರ ಗೌರವ ಮತ್ತು ವೃತ್ತಿಪರತೆ, ಅದಕ್ಕಿಂತ ಬೇರೇನೂ ಇಲ್ಲ. ಆದರೆ, ಜನರು ಮಹಿಳೆಯ ಪ್ರಯಾಣವನ್ನು ಒಪ್ಪಿಕೊಳ್ಳುವ ಬದಲು ಆಕೆಯ ವೈಯಕ್ತಿಕ ಜೀವನದ ಬಗ್ಗೆ ಕಥೆಗಳನ್ನು ರಚಿಸಲು ಏಕೆ ಉತ್ಸುಕರಾಗಿದ್ದಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ ಎಂದರು.
ನಾನು ಮೌನವಾಗಿರಲು ಕಾರಣ ಎಲ್ಲವನ್ನೂ ಮರೆಮಾಡುವ ಸಲುವಾಗಿ ಅಲ್ಲ. ಬದಲಾಗಿ ನನ್ನ ವೈಯಕ್ತಿಕ ಜೀವನಕ್ಕೆ ಸಾರ್ವಜನಿಕ ಸಮ್ಮತಿ ಅಗತ್ಯವಿಲ್ಲ ಎಂದು ನಾನು ನಂಬಿದ್ದೇನೆ. ಆದಾಗ್ಯೂ, ಆಡಿಷನ್ಗಳು, ನಿರಾಕರಣೆಗಳು, ದೀರ್ಘ ರಾತ್ರಿಗಳ ಹೋರಾಟ, ನಿರಂತರ ಆತ್ಮವಿಶ್ವಾಸದ ಮೂಲಕ ನಾನು ಇಂದು ಈ ಹಂತವನ್ನು ತಲುಪಿದ್ದೇನೆ.
ಆದರೆ, ನನ್ನ ಈ ಪ್ರಯಾಣವನ್ನು ವದಂತಿಯಾಗಿ ಕಡಿಮೆ ಮಾಡುವುದು ಅನ್ಯಾಯ. ಸಾಮಾಜಿಕ ಮಾಧ್ಯಮವು ಎಲ್ಲರಿಗೂ ಧ್ವನಿ ನೀಡುತ್ತದೆ. ಅದು ಜವಾಬ್ದಾರಿಯನ್ನು ಸಹ ಬಯಸುತ್ತದೆ. ಕೆಲವು ಕ್ಲಿಕ್ಗಳು, ಲೈಕ್ಗಳು ಮತ್ತು ಹಂಚಿಕೆಗಳು ಮನಸ್ಸಿಗೆ ಘಾಸಿ ಮಾಡುತ್ತಿವೆ. ಆದರೆ, ಅವು ಕೆಲವೊಂದು ಜನರ ಮೇಲೆ ಪರಿಣಾಮ ಬೀರುತ್ತವೆ. ನಾನು ಸ್ಪಷ್ಟವಾಗಿ ತಿಳಿಸುತ್ತಿದ್ದೇನೆ ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದರು.
ಮೃಣಾಲ್ ಠಾಕೂರ್ ಅವರ ಕೆಲಸದ ಮುನ್ನೋಟ
ಕೆಲಸದಲ್ಲಿ, ಮೃಣಾಲ್ ಕೊನೆಯ ಬಾರಿಗೆ ಅಜಯ್ ದೇವಗನ್ ಜೊತೆಗೆ ಸನ್ ಆಫ್ ಸರ್ದಾರ್ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂಬರುವ ದಿನಗಳಲ್ಲಿ ಶನಿಲ್ ಡಿಯೋ ಅವರ ಚಿತ್ರ ಡಕೋಯಿಟ್: ಎ ಲವ್ ಸ್ಟೋರಿಯಲ್ಲಿ ಆದಿವಿ ಶೇಷ್ ಮತ್ತು ಅನುರಾಗ್ ಕಶ್ಯಪ್ ಜೊತೆಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಕ್ಷನ್ ಥ್ರಿಲ್ಲರ್ ಮಾರ್ಚ್ 19, 2026 ರಂದು ಈದ್ ಹಬ್ಬದಂದು ತೆರೆ ಮೇಲೆ ಬರಲಿದೆ (ಏಜೆನ್ಸೀಸ್).