ಮೈಕೋ ಕೇವಲ ಸದ್ದು ಮಾಡುತ್ತೆ: ಕುಂದವೈ ಮನೆಯಲ್ಲಿದ್ದರೆ ಉತ್ತಮ; ಪಾರ್ಥಿಬನ್ ಹೇಳಿಕೆಗೆ ತಿರುಗೇಟು ಕೊಟ್ಟ ತ್ರಿಷಾ!Trisha Krishnan

ಮೈಕೋ ಕೇವಲ ಸದ್ದು ಮಾಡುತ್ತೆ ಎಂದು ತಿರುಗೇಟು ಕೊಟ್ಟ ತ್ರಿಷಾ
ಮೈಕೋ ಕೇವಲ ಸದ್ದು ಮಾಡುತ್ತೆ ಎಂದು ತಿರುಗೇಟು ಕೊಟ್ಟ ತ್ರಿಷಾ
Published on

ಪ್ರಮುಖ ಮುಖ್ಯಾಂಶಗಳು

  • ತ್ರಿಷಾ ಕುರಿತು ನಾಲಿಗೆ ಹರಿಬಿಟ್ಟ ನಟ ಪಾರ್ಥಿಬನ್
  • ಮೈಕೋ ಕೇವಲ ಸದ್ದು ಮಾಡುತ್ತೆ ಎಂದು ತಿರುಗೇಟು ಕೊಟ್ಟ ತ್ರಿಷಾ
  • ವಿಜಯ್​ ಪತ್ನಿ ಸಂಗೀತಾ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ ನಂತರ ಶುರುವಾದ ಈ ಬೆಳವಣಿಗೆ
ತಮಿಳನಾಡು: ನಟಿ ತ್ರಿಷಾ ಬಗ್ಗೆ ತಮಿಳು ನಟ ಹಾಗೂ ನಿರ್ದೇಶಕ ಪಾರ್ಥಿಬನ್, ಈ ಕುಂದವೈ (ತ್ರಿಷಾ ನಟಿಸಿದ್ದ ಪಾತ್ರ) ಯನ್ನು ಕೆಲದಿನಗಳ ವರೆಗೆ ಮನೆಯಲ್ಲಿ ಇಡಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟಿ, ಮೈಕೋ ಕೇವಲ ದೊಡ್ಡದಾಗಿ ಶಬ್ದವನ್ನಷ್ಟೇ ಮಾಡುತ್ತದೆ ಅದರಿಂದ ನಾನು ಬುದ್ಧಿವಂತಿಕೆಯ ಅಥವಾ ಹಾಸ್ಯಯುಳ್ಳ ಮಾತನ್ನು ಅಪೇಕ್ಷಿಸುವಂತಿಲ್ಲ ಎಂದು ತ್ರಿಷಾ (Trisha Krishnan) ತಿರುಗೇಟು ನೀಡಿದ್ದಾರೆ.

ತ್ರಿಷಾ ತಿರುಗೇಟು

ತಮಿಳು ನಟ ಹಾಗೂ ನಿರ್ದೇಶಕ ಪಾರ್ಥಿಬನ್ ಅವರ ಹೇಳಿಕೆಯನ್ನು ತಳ್ಳಿ ಹಾಕಿರುವ ತ್ರಿಷಾ, ತಮ್ಮ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ, ಮೈಕ್ರೊಫೋನ್ ಮಾಡುವ ಕಮೆಂಟ್​ ಬುದ್ಧಿವಂತಿಕೆ ಅಥವಾ ಹಾಸ್ಯಮಯವಾಗಿರುವುದಿಲ್ಲ, ಬದಲಿಗೆ ಅದು ಮೂರ್ಖತನದಿಂದ ಜೋರಾಗಿ ಸಪ್ಪಳ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಹಾಗೆಯೇ ಮಾ.5 ರಂದು ವಿಜಯ್​ ಜೊತೆ ಕಾಣಿಸಿಕೊಂಡ ಕಾರ್ಯಕ್ರಮದ ಬಗ್ಗೆ ತ್ರಿಷಾ, ಇತ್ತೀಚೆಗೆ ನಾನು ಭಾಗವಹಿಸಿದ್ದ ಕಾರ್ಯಕ್ರಮದ ಸುದ್ದಿ ಸದ್ದು ಮಾಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಆದರೆ ಆ ಕಾರ್ಯಕ್ರಮದ ಆಯೋಜಕರು ಕೊನೆ ಕ್ಷಣದಲ್ಲಿ ನನಗೆ ಬರುವಂತೆ ಆಹ್ವಾನ ಬಂದ ಕಾರಣ ನಾನು ಭಾಗವಹಿಸ ಬೇಕಾಯಿತು ಎಂದು ಸ್ಪಷ್ಟಣೆ ನೀಡಿದ್ದಾರೆ.
ಪಾರ್ಥಿಬನ್​ ಹೇಳಿದ್ದೇನು?
ಇತ್ತೀಚೆಗೆ ನಡೆದಿದ್ದ ಗಲಾಟಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಾರ್ಥಿಬನ್​ ಅವರಿಗೆ, ಅವರೊಟ್ಟಿಗರ ನಟಿಸಿದ್ದ ತ್ರಿಷಾ ಬಗ್ಗೆ ಕೇಳಿದ್ದಾರೆ. ನೇರವಾಗಿ ತ್ರಿಷಾಳ ಹೆಸರನ್ನು ಹೇಳದ ನಟ, ಈ ಕುಂಡವೈಳನ್ನು ಕೆಲ ದಿನದ ಮಟ್ಟಿಗೆ ಮನೆಯಿಂದ ಆಚೆ ಬರದಂತೆ ನೋಡಿಕೊಳ್ಳಬೇಕು, ಆಗ ಎಲ್ಲ ಸರಿ ಹೋಗುತ್ತದೆ ಎಂದು ಹೇಳಿಕೆ ನೀಡಿದ್ದರು.
ಅದರೆ ತಮ್ಮ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾದ ನಂತರ ಪಾರ್ಥಿಬನ್​ ಮಾ.8 ರಂದು ಸಾಮಾಜಿಕ ಜಾಲತಾಣಗಳದಲ್ಲಿ ಏನೇ ಆಗಿದ್ದರೂ ಅದು ತಪ್ಪು, ವಿಷಾಧಿಸುವ ಹೊರತು ಇನ್ನೇನು ಮಾಡಲು ಸಾಧ್ಯವಿಲ್ಲ ಎಂದು ಕ್ಷಮೆ ಕೇಳಿದ್ದರು.

ಉರಿಯುವ ಬೆಂಕಿಗೆ ತುಪ್ಪ!

ತಮಿಳು ನಟ ಹಾಗೂ ತಮಿಳಿಗ ವೆಟ್ರಿ ಕಳಗಂ ಪಕ್ಷದ ನಾಯಕ ಧಳಪತಿ ವಿಜಯ್​ ಅವರ ಪತ್ನಿ ಸಂಗೀತಾ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ ನಂತರ, ವಿಜಯ್​ ಮತ್ತು ನಟಿ ತ್ರಿಷಾ ಅವರ ಸಂಬಂಧದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಅದರಲ್ಲೂ ಮಾ.5 ರಂದು ಚೆನ್ನೈನಲ್ಲಿ ನಡೆದ ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಮಗನ ವಿವಾಹ ಆರತಕ್ಷತೆಯಲ್ಲಿ ತ್ರಿಷಾ ಮತ್ತು ವಿಜಯ್ ಒಂದೇ ಕಾರಿನಲ್ಲಿ ಬಂದು ಜಂಟಿಯಾಗಿ ಕಾಣಿಸಿಕೊಂಡಿದ್ದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಮೌನ ಮುರಿದ ಧಳಪತಿ

ಚೆನ್ನೈನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ(ಮಾ. 07) ಮಾತನಾಡಿ ವಿಜಯ್​, ಇತ್ತೀಚೆಗೆ ನನಗೆ ಹಲವಾರು ಸಮಸ್ಯೆಗಳು ಹೆಗಲಿಗೇರಿವೆ. ಇದು ನನ್ನ ಬೆಂಬಲಿಗರಲ್ಲಿ ಕಳವಳವನ್ನುಂಟುಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವಾಗ ಯಾರನ್ನು ನೋಯಿಸದಂತೆ ಮತ್ತು ಆತ್ಮವಿಶ್ವಾಸದಿಂದ ಇರಲು ತಮ್ಮ ಅಭಿಮಾನಿಗಳನ್ನು ಅವರು ಕೇಳಿಕೊಂಡಿದ್ದಾರೆ.
ನನ್ನ ವೈಯಕ್ತಿಕ ವಿಚಾರವು ಪಕ್ಷದ ಬೆಂಬಲಿಗರನ್ನು ಮತ್ತು ಅಭಿಮಾನಿಗಳನ್ನು ಚಿಂತೆಗೀಡು ಮಾಡಬಾರದು. ಇದನ್ನು ನಾನೇ ನಿಭಾಯಿಸುತ್ತೇನೆ. ನೀವು ನನಗಾಗಿ ಹೋರಾಡುತ್ತಿದ್ದೀರಿ ಮತ್ತು ನೋಯಿಸಿಕೊಳ್ಳುತ್ತಿದ್ದೀರಿ. ಅದನ್ನು ನೋಡಿದಾಗ ನನಗೆ ನೋವಾಗುತ್ತದೆ, ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ. ನೀವು ಈ ಬಗ್ಗೆ ದುಃಖಿಸಬೇಡಿ ಅಥವಾ ಚಿಂತಿಸಬೇಡಿ. ನನಗೆ ಈ ಕುರಿತು ಯಾವುದೇ ದುಃಖವಿಲ್ಲ, ನನಗೆ ಖಂಡಿತವಾಗಿ ಒಳ್ಳೆಯದೇ ಆಗುತ್ತದೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net