ಇನ್ನೇನನ್ನೂ ಕೇಳಲು ಸಾಧ್ಯವಿಲ್ಲ; ಪತ್ನಿಗಾಗಿ ಮಹೇಶ್ ಬಾಬು ಬರೆದ ಪ್ರೇಮ ಪತ್ರ ವೈರಲ್..Mahesh Babu

ಚಿತ್ರ Instagram
ಚಿತ್ರ Instagram
Published on
Mahesh Babu: ಟಾಲಿವುಡ್​ ಸೂಪರ್​ಸ್ಟಾರ್​ ಮಹೇಶ್​ ಬಾಬು ದಾಂಪತ್ಯದ ಬಾಂಧವ್ಯ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇಂದು (ಜನವರಿ 22) ತಮ್ಮ 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅವರ ಪತ್ನಿ ನಮ್ರತಾ ಶಿರೋಡ್ಕರ್ ಕುರಿತಾಗಿ ಮಹೇಶ್ ಬಾಬು ಹಂಚಿಕೊಂಡಿರುವ ಭಾವನಾತ್ಮಕ ಸಂದೇಶ ಲಕ್ಷಾಂತರ ಅಭಿಮಾನಿಗಳ ಮನಮುಟ್ಟಿದೆ.

ಪೋಸ್ಟ್​ನಲ್ಲೇನಿದೆ?

ಮಹೇಶ್ ಬಾಬು ತಮ್ಮ ಇನ್‌ಸ್ಟಾಗ್ರಾಮ್​​ನಲ್ಲಿ ಜನ್ಮದಿನದ ಶುಭಾಶಯಗಳು ನಮ್ರತಾ... ಎಲ್ಲವನ್ನೂ ತುಂಬಾ ಕೃಪೆ ಮತ್ತು ಪ್ರೀತಿಯಿಂದ ಒಟ್ಟಿಗೆ ನೀಡಿದ್ದಕ್ಕಾಗಿ ಧನ್ಯವಾದಗಳು...ಇನ್ನೇನನ್ನೂ ಕೇಳಲು ಸಾಧ್ಯವಿಲ್ಲ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ. ಈ ಸಾಲುಗಳು ಅವರ ಸಂಸಾರ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ನಮ್ರತಾ ಅವರ ಪಾತ್ರ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದೆ.

ಅಭಿಮಾನಿಗಳ ಪ್ರತಿಕ್ರಿಯೆ

ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ, ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಒಬ್ಬ ಬಳಕೆದಾರರು ಸಿನಿಮಾ ರಂಗದ ಬೆಸ್ಟ್ ಕಪಲ್ ಎಂದು ಕಮೆಂಟ್​ ಮಾಡಿದ್ರೆ, "ಪರಿಪೂರ್ಣ ಜೋಡಿ" ಎಂದು ಇನ್ನಿತರ ಬಳಕೆದಾರರು ಕಮೆಂಟ್​ ಮಾಡಿದ್ದಾರೆ.
ಮಹೇಶ್​ ಬಾಬು ಮತ್ತು ನಮ್ರತಾ 'ವಂಶಿ' ಸಿನಿಮಾ ಚಿತ್ರೀಕರಣದ ವೇಳೆ ಪ್ರೀತಿಗೆ ಬಿದ್ದರು. ಈ ಜೋಡಿ 2005ರಲ್ಲಿ ಮದುವೆಯಾದರು. 2006 ರಲ್ಲಿ ಮಗ ಗೌತಮ್ ಜನಿಸಿದರು. ನಂತರ ಅವರ ಮಗಳು ಸಿತಾರಾ 2012 ರಲ್ಲಿ ಜನಿಸಿದರು. ಅಂದಿನಿಂದ ಇಂದಿನವರೆಗೂ ಯಾವುದೇ ವಿವಾದಗಳಿಲ್ಲದೆ ಮಾದರಿ ದಂಪತಿಗಳಾಗಿ ಸುಂದರ ಜೀವನ ನಡೆಸುತ್ತಿದ್ದಾರೆ.
ವೃತ್ತಿಪರ ರಂಗದಲ್ಲಿ, ಮಹೇಶ್ ಬಾಬು ಕೊನೆಯ ಬಾರಿಗೆ ತ್ರಿವಿಕ್ರಮ್ ಶ್ರೀನಿವಾಸ್ ಅವರ 2024 ರಲ್ಲಿ ಬಿಡುಗಡೆಯಾದ ಗುಂಟೂರು ಕಾರಮ್ ಚಿತ್ರದಲ್ಲಿ ಕಾಣಿಸಿಕೊಂಡರು. ನಟ ಈಗ ಸಧ್ಯ ಅತ್ಯಂತ ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಎಸ್.ಎಸ್. ರಾಜಮೌಳಿ ಅವರ ಮುಂಬರುವ ಚಿತ್ರ ವಾರಣಾಸಿಗೆ ಸಜ್ಜಾಗುತ್ತಿದ್ದಾರೆ.
ಈ ಚಿತ್ರದ ಪೋಸ್ಟರ್​ ಬಿಡುಗಡೆಯ ಸಮಯದಲ್ಲಿ ಇದು ಕನಸಿನ ಯೋಜನೆ, ಜೀವನದಲ್ಲಿ ಒಮ್ಮೆ ಮಾತ್ರ ಬರುವ ಯೋಜನೆ ಹಾಗಾಗಿ ನಾನು ಸಾಧ್ಯವಾದಷ್ಟು ಶ್ರಮಿಸುತ್ತೇನೆ. ನಾನು ಎಲ್ಲರನ್ನೂ ಹೆಮ್ಮೆಪಡುವಂತೆ ಮಾಡುತ್ತೇನೆ ಎಂದಿದ್ದರು. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net