ಅದೊಂದು ಮಾತಿಗೆ... ಕಡೆಗೂ ಮೆಗಾಸ್ಟಾರ್​ ಫ್ಯಾನ್ಸ್​ ಬಳಿ ಕ್ಷಮೆಯಾಚಿಸಿದ 'ಮಹಾನಟಿ'

ಕೀರ್ತಿ ಸುರೇಶ್​
ಕೀರ್ತಿ ಸುರೇಶ್​
Published on

ಪ್ರಮುಖ ಮುಖ್ಯಾಂಶಗಳು

  • ಮೆಗಾಸ್ಟಾರ್​ ಚಿರಂಜೀವಿ ಅಭಿಮಾನಿ ಬಳಗಕ್ಕೆ ಘಾಸಿಯುಂಟು ಮಾಡಿದ ಹೇಳಿಕೆ
  • ನಟನ ಫ್ಯಾನ್ಸ್​ಗೆ ಕಡೆಗೂ ಕ್ಷಮಾಪಣೆ ಕೋರಿದ ಮಹಾನಟಿ
ಚೆನ್ನೈ: ಸೌತ್​​ ಸಿನಿಮಾದ ಹೆಸರಾಂತ ನಾಯಕರ ಜತೆ ನಟಿ ಕೀರ್ತಿ ಸುರೇಶ್ (Keerthy Suresh)​​ ಕೆಲಸ ಮಾಡಿದ್ದಾರೆ. ಶಿಸ್ತಿನ ಜೀವನ ಶೈಲಿ ಪಾಲಿಸುವ ಕೀರ್ತಿ,​ ಯಾವುದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬುತ್ತಾರೆ ಎಂಬುದು ಬಹುತೇಕ ಸಿನಿಪ್ರಿಯರಿಗೆ ಗೊತ್ತಿರುವ ಸಂಗತಿಯೇ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ತಾವು ಮೆಗಾಸ್ಟಾರ್​ ಚಿರಂಜೀವಿ ಅಭಿಮಾನಿ ಬಳಗಕ್ಕೆ ಘಾಸಿಯುಂಟು ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಕೀರ್ತಿ ಪ್ರತಿಕ್ರಿಯಿಸಿದ್ದು, ನಟನ ಫ್ಯಾನ್ಸ್​ಗೆ ಕಡೆಗೂ ಕ್ಷಮಾಪಣೆ ಕೋರಿದ್ದಾರೆ.
ತಮ್ಮ ಮುಂಬರುವ ಕ್ರೈಮ್ ಕಾಮಿಡಿ ಜಾನರ್​ನ 'ರಿವಾಲ್ವರ್ ರೀಟಾ' ಚಿತ್ರದ ಪ್ರಚಾರದಲ್ಲಿ ಸದ್ಯ ಬಿಜಿಯಾಗಿರುವ ಕೀರ್ತಿ ಸುರೇಶ್, ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾದ ಈ ಹಿಂದೆ ಮಾಡಿದ ಕಾಮೆಂಟ್ ಅನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ. 2024ರಲ್ಲಿ 'ರಘು ತಾತಾ' ಚಿತ್ರದ ಪ್ರಚಾರದ ಸಮಯದಲ್ಲಿ, ನಿಮ್ಮ ಪ್ರಕಾರ ಯಾರು ಉತ್ತಮ ಡ್ಯಾನ್ಸರ್​ ಎಂದು ನೀವು ಭಾವಿಸುತ್ತೀರಿ ಎಂಬ ಪ್ರಶ್ನೆಗೆ, ಚಿರಂಜೀವಿಗಿಂತ ದಳಪತಿ ವಿಜಯ್ ಅವರೇ ಬೆಸ್ಟ್​ ಎಂದಿದ್ದರು. ನಟಿಯ ಈ ಹೇಳಿಕೆಯ ವಿಡಿಯೋ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಮತ್ತು ನಟನ ಫ್ಯಾನ್ಸ್​ ಕೆಂಗಣ್ಣಿಗೆ ಗುರಿಯಾಯಿತು. ಇದನ್ನು ನೆನಪಿಸಿಕೊಂಡು ಕೀರ್ತಿ ಮಾತನಾಡಿದ್ದಾರೆ.
ತೆಲುಗು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೀರ್ತಿ ಸುರೇಶ್​, "ಚಿತ್ರದ ಪ್ರಚಾರದ ವೇಳೆ ಈ ವಿಷಯವನ್ನು ಪ್ರಸ್ತಾಪಿಸುತ ಚಿರಂಜೀವಿ ಫ್ಯಾನ್ಸ್​ಗೆ ಕ್ಷಮೆಯಾಚಿಸಿದರು. ಈ ಹಿಂದಿನಿಂದಲೂ ನಾನು ದಳಪತಿ ವಿಜಯ್ ಅವರ ಅಪ್ಪಟ ಅಭಿಮಾನಿ. ಚಿರಂಜೀವಿ ಗಾರು ಅವರಿಗೂ ಗೊತ್ತಿದೆ ನಾನೆಷ್ಟು ದೊಡ್ಡ ಫ್ಯಾನ್​​ ಅವರಿಗೆ ಅಂತ. ಯಾರು ಉತ್ತಮ ಡ್ಯಾನ್ಸರ್​ ಪ್ರಶ್ನೆಗೆ ನಾನು ಕೊಟ್ಟ ಉತ್ತರ ಯಾರನ್ನೂ ನೋಯಿಸಬೇಕು ಎಂದಲ್ಲ. ನನಗೆ ಚಿರಂಜೀವಿ ಸರ್​ ಎಂದರೆ ಅಪಾರವಾದ ಪ್ರೀತಿ ಮತ್ತು ಗೌರವವಿದೆ" ಎಂದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net