ಈ ವರ್ಷದ ಮೊದಲ ತಿಂಗಳು ಜನವರಿ 9ರಂದೇ ಜನನಾಯಗನ್ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಪ್ರಮಾಣಿಕೃತ ಪತ್ರ ನೀಡಿರಲಿಲ್ಲ. ಹಲವು ಕಾನೂನು ತೊಡಕುಗಳನ್ನು ಚಿತ್ರತಂಡ ಎದುರಿಸಿತ್ತು. ಈ ಮಧ್ಯೆ ಪೈರಸಿ ಕಾಟದಿಂದ ಚಿತ್ರತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಈ ಬಗ್ಗೆ ಟಾಲಿವುಡ್, ಸ್ಯಾಂಡಲ್ವುಡ್ನ ತಾರೆಯರು ಹಾಗೂ ಕಾಲಿವುಡ್ನ ಹಿರಿಯ ನಟರು ಪ್ರಸ್ತಾಪಿಸಿ ಕಿಡಿಕಾರಿದ್ದಾರೆ.