ಲಿಲ್ಲಿ ಹೂವುಗಳ ಅಲಂಕಾರ, ಜಪಾನೀಸ್ ಭೋಜನದ ಸತ್ಕಾರ: ವೈರಲ್ ಆಯಿತು 'ವಿರೋಶ್' ಜೋಡಿಯ ಪ್ರೈವೇಟ್ ಡಿನ್ನರ್ ಚಿತ್ರಗಳು! Rashmika Mandanna

ಚಿತ್ರ Instagram
ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಇನ್ನೇನು ಕೆಲವೇ ದಿನಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ
  • ಈಗಾಗಲೇ ಉದಯಪುರಕ್ಕೆ ತಲುಪಿರುವ ಜೋಡಿ ತಮ್ಮ ಬಿಡುವಿನ ಸಮಯವನ್ನು ಆನಂದಿಸುತ್ತಿದ್ದಾರೆ
  • ನಟಿ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಕುಟುಂಬದೊಂದಿಗೆ ಕೂತು ಭೋಜನ ಸವಿಯುತ್ತಿರುವ ನೋಟವನ್ನು ಹಂಚಿಕೊಂಡಿದ್ದಾರೆ
  • ಮೇಣದಬತ್ತಿಗಳು, ಹೂವುಗಳು ಮತ್ತು ಅತ್ಯುತ್ತಮವಾದ ಭೋಜನದ ವ್ಯವಸ್ಥೆಯು ಆ ಸಂಜೆಯ ಘನತೆಯನ್ನು ಹೆಚ್ಚಿಸಿವೆ
Rashmika Mandanna: ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಇನ್ನೇನು ಕೆಲವೇ ದಿನಗಳಲ್ಲಿ ಸಪ್ತಪದಿ ತುಳಿಯಲಿದ್ದು, ಈಗಾಗಲೇ ಉದಯಪುರಕ್ಕೆ ತಲುಪಿರುವ ಜೋಡಿ ತಮ್ಮ ಬಿಡುವಿನ ಸಮಯವನ್ನು ಆನಂದಿಸುತ್ತಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟಿ ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಕುಟುಂಬದೊಂದಿಗೆ ಕೂತು ಭೋಜನ ಸವಿಯುತ್ತಿರುವ ನೋಟವನ್ನು ಹಂಚಿಕೊಂಡಿದ್ದಾರೆ. ಮೇಜಿನ ಚಿತ್ರಗಳು ಅತ್ಯಂತ ಸುಂದರವಾಗಿ ವಿನ್ಯಾಸಗೊಂಡಿವೆ. ಮೇಣದಬತ್ತಿಗಳು, ಹೂವುಗಳು ಮತ್ತು ಅತ್ಯುತ್ತಮವಾದ ಭೋಜನದ ವ್ಯವಸ್ಥೆಯು ಆ ಸಂಜೆಯ ಘನತೆಯನ್ನು ಹೆಚ್ಚಿಸಿವೆ. ಇದು ಮದುವೆಗೆ ಮುನ್ನ ಕುಟುಂಬಗಳ ನಡುವೆ ಬಾಂಧವ್ಯವನ್ನು ಗಟ್ಟಿಗೊಳಿಸುವ 'ಫಾರ್ಮಲ್ ಡಿನ್ನರ್' ಆಗಿ ಕಂಡುಬರುತ್ತಿದೆ.
ಅವರು ಹಂಚಿಕೊಂಡ ಒಂದು ಚಿತ್ರ ಸ್ವಲ್ಪ ಮಸುಕಾಗಿದ್ದರೂ, ಹೆಚ್ಚು ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಬೆಚ್ಚಗಿನ, ಚಿನ್ನದ ಬೆಳಕಿನಲ್ಲಿ ನೀಲಿ ಗುಲಾಬಿ ಬಣ್ಣದ ಲಿಲ್ಲಿಗಳು. ಮೇಜಿನ ಮಧ್ಯಭಾಗದಲ್ಲಿ ಸೇಬುಗಳು ಮತ್ತು ಹಸಿರು ದ್ರಾಕ್ಷಿಗಳು ಅಲಂಕರಿಸುತ್ತವೆ. ಈ ವಿನ್ಯಾಸವು ಅಲಂಕಾರವನ್ನು ಹೆಚ್ಚಿಸುವುದರ ಜೊತೆಗೆ ಇದು ಕೇವಲ ಭೋಜನವಲ್ಲ, ಇದೊಂದು ರಾಯಲ್ ಅನುಭವ ಎಂಬುದನ್ನು ಸಾರುತ್ತಿದೆ.
ಮೇಜಿನ ಮೇಲಿರುವ ಕರವಸ್ತ್ರದ ಮೇಲೆ 'ವಿರೋಶ್' ಎಂಬ ಕಸೂತಿಯನ್ನು ಸಹ ನೋಡಬಹುದು. ಇದು ಅವರ ಎಲ್ಲಾ ಆಚರಣೆಗೆ ಆಳವಾದ ವೈಕಕ್ತಿಕ ಸ್ಪರ್ಶವನ್ನು ನೀಡುತ್ತಿದೆ.
ಮದುವೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ , ನಟ ದೇವರಕೊಂಡ ತಮ್ಮ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಮಿಂದೇಳುತ್ತಿದ್ದಾರೆ. ಸುಂದರವಾದ ಅರ್ವಾಲಿಸ್‌ನ ನೋಟವನ್ನು ನೋಡುತ್ತಾ ಕೊಳದಲ್ಲಿ ತನ್ನ ವಾಲಿಬಾಲ್ ಆಟ ಆಡುತ್ತಾ ವಿಶ್ರಾಂತಿ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಮದುವೆ ದಿನಾಂಕ ಮತ್ತು ಸ್ಥಳದ ವಿವರಗಳು

ನಟ ವಿಜಯ್​ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.
ವಿವಾಹಕ್ಕೆ ಸಂಬಂಧಪಟ್ಟ ಪೂರ್ವ ತಯಾರಿ ಫೆಬ್ರವರಿ 24 ರಿಂದ ಪ್ರಾರಂಭವಾಗಲಿದ್ದು, ಈ ಸಮಾರಂಭಕ್ಕೆ ಆಪ್ತ ಕುಟುಂಬ ಮತ್ತು ಸ್ನೇಹಿತರು ಸೇರಿದಂತೆ ಸುಮಾರು 100 ಜನರಿಗೆ ಮಾತ್ರ ಆಹ್ವಾನವನ್ನು ನೀಡಲಾಗಿದೆ. ಆದಾಗ್ಯೂ, ದಂಪತಿ ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net