ಇಂದಲ್ಲ, ನಾಳೆ ಜೂ. ಎನ್​ಟಿಆರ್... ಮತ್ತೊಮ್ಮೆ ಸ್ಫೋಟಕ ಭವಿಷ್ಯ ನುಡಿದ ಜ್ಯೋತಿಷಿ ವೇಣು ಸ್ವಾಮಿ | ​Venuswamy ​Astrology

ಮತ್ತೊಮ್ಮೆ ಸ್ಫೋಟಕ ಭವಿಷ್ಯ ನುಡಿದ ಜ್ಯೋತಿಷಿ ವೇಣು ಸ್ವಾಮಿ
ಮತ್ತೊಮ್ಮೆ ಸ್ಫೋಟಕ ಭವಿಷ್ಯ ನುಡಿದ ಜ್ಯೋತಿಷಿ ವೇಣು ಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಎರಡೂ ತೆಲುಗು ರಾಜ್ಯಗಳ ಜನರಿಗೆ ಚಿರಪರಿಚಿತರಾಗಿರುವ ಜ್ಯೋತಿಷಿ ವೇಣುಸ್ವಾಮಿ
  • ಸೆಲೆಬ್ರಿಟಿಗಳ ಬಗ್ಗೆ ನುಡಿಯುವ ಸ್ಫೋಟಕ ಭವಿಷ್ಯದಿಂದಲೇ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು
  • ನಟ ಜೂ.ಎನ್​ಟಿಆರ್​ ವಿಚಾರದಲ್ಲಿ ಶಾಕಿಂಗ್ ಸಂಗತಿ ರಿವೀಲ್​
Venuswamy ​Astrology: ಎರಡೂ ತೆಲುಗು ರಾಜ್ಯಗಳ ಜನರಿಗೆ ಚಿರಪರಿಚಿತರಾಗಿರುವ ಜ್ಯೋತಿಷಿ ವೇಣುಸ್ವಾಮಿ, ಸೆಲೆಬ್ರಿಟಿಗಳ ಬಗ್ಗೆ ನುಡಿಯುವ ಸ್ಫೋಟಕ ಭವಿಷ್ಯದಿಂದಲೇ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಲೇವಡಿಗೆ ಗ್ರಾಸವಾಗುತ್ತಾರೆ. ಕೆಲವೊಮ್ಮೆ, ಭಾರಿ ವಿವಾದ ಸೃಷ್ಟಿಸಿ, ಟೀಕೆಗಳ ಸುರಿಮಳೆಗೆ ಗುರಿಯಾಗುತ್ತಾರೆ. ಈಗ ಅದೇ ರೀತಿ, ಅವರು ನುಡಿದ ಮತ್ತೊಂದು ಭವಿಷ್ಯನುಡಿ ನಿಜವಾಗಿದೆಯಂತೆ. ಅದು ನಟ ಜೂ.ಎನ್​ಟಿಆರ್​ ವಿಚಾರದಲ್ಲಿ ಎಂಬುದೇ ಶಾಕಿಂಗ್.
ಈ ಹಿಂದೆ ಸೂಪರ್​ ಸ್ಟಾರ್ ತೆಲುಗು ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುತ್ತಾರೆ ಎಂಬ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಹುಟ್ಟುಹಾಕಿತ್ತು. ಆದರೆ, ಅದು ದಿಟ ಆಗಲಿಲ್ಲ. ಆದರೀಗ, ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ವೇಣುಸ್ವಾಮಿ, ಎನ್‌ಟಿಆರ್‌ ಅವರ ಜಾತಕವನ್ನೇ ಬಿಚ್ಚಿಟ್ಟಿದ್ದಾರೆ.
ಜೂ.ಎನ್​ಟಿಆರ್ ಅವರ ಅಸಲಿ ಜನ್ಮದಿನವೇ ಬೇರೆ. ಅವರು ಆಚರಿಸಿಕೊಳ್ಳುವ ಹುಟ್ಟುಹಬ್ಬವು ನಿಮಗೆಲ್ಲ ತಿಳಿದಿರುವ ಹುಟ್ಟುಹಬ್ಬಕ್ಕಿಂತ ಭಿನ್ನ. ನಿಮಗ್ಯಾರಿಗೂ ಗೊತ್ತಿರದ ಆ ಡೇಟ್​ ನನಗೆ ಮಾತ್ರ ತಿಳಿದಿದೆ. ಈಗಲೂ ಹೇಳ್ತೀನಿ, ಅವರು ರಾಜಕೀಯ ಅಖಾಡಕ್ಕೆ ಕಾಲಿಡುವುದು ಖಚಿತ. ಆದರೆ, ಸದ್ಯದ ಮಟ್ಟಿಗೆ ರಾಜಕೀಯ ಪ್ರವೇಶವಿಲ್ಲ. 2030ರ ವರೆಗೆ ರಾಜಕೀಯಕ್ಕೆ ಬರಬೇಡಿ ಎಂದು ನಾನೇ ಎನ್‌ಟಿಆರ್‌ಗೆ ಹೇಳಿದ್ದೇನೆ ಎಂದರು.

ಜಯಲಲಿತಾ ಅವರ ಜಾತಕನೇ

ಒಮ್ಮೆ ನಟನನ್ನು ಮತ್ತು ಅವರ ತಾಯಿಯನ್ನು ತಿರುಪತಿ ತಿರುಮಲದಲ್ಲಿ ಭೇಟಿಯಾಗಿದ್ದೆ. ಆಗ ನಾನೇ ಅವರಿಗೆ 2030ರ ವರೆಗೆ ರಾಜಕೀಯಕ್ಕೆ ಕಾಲಿಡಬೇಡಿ ಅಂತ ಹೇಳಿದ್ದೆ. ಎನ್​ಟಿಆರ್ ಅವರದ್ದು ಜಯಲಲಿತಾ ಅವರ ಜಾತಕ. ಅವರಿಗೆ ಸಿಎಂ ಗದ್ದುಗೆ ಏರುವ ಅವಕಾಶವಿದೆ ಎಂದರು. ವೇಣುಸ್ವಾಮಿ ಅವರ ಈ ಕಾಮೆಂಟ್​ಗಳು ಸದ್ಯ ಮತ್ತೊಮ್ಮೆ ತೆಲುಗು ನಾಡಿನಲ್ಲಿ ಸಂಚಲನ ಹುಟ್ಟುಹಾಕಿದೆ. ಕೆಲವರು, ಇದು ಸುಳ್ಳು ಎಂದರೆ, ಇನ್ನೂ ಕೆಲವರು ನಟನು ರಾಜಕೀಯಕ್ಕೆ ಬರಲಿ, ಸಿಎಂ ಆಗಲಿ ಎಂದೇ ಆಶಿಸಿದ್ದಾರೆ.
ಸದ್ಯಕ್ಕೆ ಕೈಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಹಿನ್ನಲೆ ವಿಶ್ರಾಂತಿಯಲ್ಲಿರುವ ಎನ್​ಟಿಆರ್, ತಮ್ಮ ಚಿತ್ರಗಳ ಸೆಟ್​ಗೆ ಶೀಘ್ರವೇ ವಾಪಾಸ್​ ಆಗುವ ಮೂಲಕ ಚಿತ್ರೀಕರಣವನ್ನು ಬೇಗ ಮುಗಿಸಿಕೊಡಲು ಬಯಸಿದ್ದಾರೆ. ತಾತ್ಕಾಲಿಕ ಮಟ್ಟಿಗೆ ಅವರ ಬಹುನಿರೀಕ್ಷಿತ ತೆಲುಗಿನ 'ಡ್ರ್ಯಾಗನ್' ಚಿತ್ರದ ಶೂಟ್ ಅನ್ನು ಮುಂದೂಡಲಾಗಿದೆ.

ವೈವಾಹಿಕ ಜೀವನದಲ್ಲಿ ಬಿರುಗಾಳಿ

ವೇಣುಸ್ವಾಮಿ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್​ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರು. ಆಗ ವೇಣು ಭವಿಷ್ಯವನ್ನು ಓಹೋ! ಎನ್ನಲು ಕೆಲವರು ಆರಂಭಿಸಿದರು. ಈ ಮಧ್ಯೆ, ಮತ್ತೊಂದು ಶಾಕಿಂಗ್ ವಿಚಾರ ಏನಂದರೆ, ರಶ್ಮಿಕಾ-ದೇವರಕೊಂಡ ವಿಷಯದಲ್ಲಿ ವೇಣು ನುಡಿದಿದ್ದ ಭವಿಷ್ಯವು ನಿಜವಾಗಿದೆ.
ಕಳೆದ ಕೆಲವು ವರ್ಷಗಳಿಂದ ಟಾಲಿವುಡ್​ ಸ್ಟಾರ್​ ಹೀರೋ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವೆ ಲವ್ವಿಡವ್ವಿ ನಡೆಯುತ್ತಿದೆ. ಅವರಿಬ್ಬರು ಪರಸ್ಪರ ಇಷ್ಟಪಡುತ್ತಿದ್ದಾರೆ ಎಂಬ ವದಂತಿಗಳು ಬಹಳ ಬಲವಾಗಿ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಅವರಿಬ್ಬರ ಸೋಷಿಯಲ್ ಮೀಡಿಯಾ ಪೋಸ್ಟ್​ಗಳು ಆಗಾಗ್ಗೆ ಪುಷ್ಠಿ ನೀಡುತ್ತಿತ್ತು. ಆದರೆ, ಯಾವುದೇ ರೀತಿಯಲ್ಲೂ ಇದು ದೃಢವಾಗಿರಲಿಲ್ಲ. ಆದರೀಗ, ಸ್ಟಾರ್ ಜೋಡಿಗಳು ಕುಟುಂಬದವರ ಸಮ್ಮುಖದಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿರುವುದು ಖಚಿತವಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಯೂಟ್ಯೂಬ್ ಸಂದರ್ಶನಗಳಲ್ಲಿ, ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಆಗುತ್ತಾರೆ ಎಂದು ವೇಣು ಹೇಳಿದ್ದರು. ಅಂತೆಯೇ, ಅವರು ನುಡಿದ ಭವಿಷ್ಯ ಇಂದು ನಿಜವಾಗಿದ್ದು, ಟಾಲಿವುಡ್​ ಮಂದಿಯ ಹುಬ್ಬೇರಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net