ಅಯ್ಯಪ್ಪನ ಭಕ್ತರ ಭಾವನೆಗೆ ಧಕ್ಕೆ? ‘ಇರುಮುಡಿ’ ಸಿನಿಮಾ ವಿರುದ್ಧ ಆಕ್ರೋಶ; ಕ್ಷಮೆಗೆ ಆಗ್ರಹ! Irumudi

ರವಿತೇಜ ಅಭಿನಯದ ಇರುಮುಡಿ ಚಿತ್ರಕ್ಕೆ ಅಖಿಲ ಭಾರತ ಅಯ್ಯಪ್ಪ ದೀಕ್ಷಾ ಪ್ರಚಾರ ಸಮಿತಿ ವಿರೋಧ
ರವಿತೇಜ ಅಭಿನಯದ ಇರುಮುಡಿ ಚಿತ್ರಕ್ಕೆ ಅಖಿಲ ಭಾರತ ಅಯ್ಯಪ್ಪ ದೀಕ್ಷಾ ಪ್ರಚಾರ ಸಮಿತಿ ವಿರೋಧ
Published on
ಆಂಧ್ರಪ್ರದೇಶ: ತೆಲುಗು ಸ್ಟಾರ್​ ನಟ ರವಿತೇಜಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಹಾಗೂ ಶಿವ ನಿರ್ವಾಣ ನಿರ್ದೇಶನದ ಇರುಮುಡಿ (Irumudi) ಸಿನಿಮಾ ಈಗ ಧಾರ್ಮಿಕ ವಿವಾದವೊಂದಕ್ಕೆ ಗುರಿಯಾಗಿದೆ. 
ಈ ಸಿನಿಮಾದ ಕೆಲ ದೃಶ್ಯಗಳು ಅಯ್ಯಪ್ಪ ಸ್ವಾಮಿ ಭಕ್ತರ ಭಾವನೆಗೆ ನೋವುಂಟು ಮಾಡಿದೆ ಎಂದು ಅಖಿಲ ಭಾರತೀಯ ಅಯ್ಯಪ್ಪ ದೀಕ್ಷಾ ಪ್ರಚಾರ ಸಮಿತಿ ಸಿನಿಮಾ ತಂಡದ ವಿರುದ್ಧ ಗರಂ ಆಗಿದೆ. ಅಂತೆಯೇ ಸಿನಿಮಾ ತಂಡದವರು ಬಹಿರಂಗವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಿದೆ. 

ಅಯ್ಯಪ್ಪನ ಭಕ್ತರನ್ನು ತಪ್ಪಾಗಿ ತೋರಿಸಲಾಗಿದೆ!

ಇರುಮುಡಿಯನ್ನು ಅಯ್ಯಪ್ಪ ಸ್ವಾಮಿ ಭಕ್ತರು ವೃತಾಚರ್ಣೆ ಮಾಡುವಾಗ ಧರಿಸುವ ಪವಿತ್ರ ವಸ್ತುವಾಗಿದೆ. ಅದನ್ನು ಈ ಸಿನಿ ತಂಡ ಅಪರಾಧ ಕತೆ ಆಧಾರಿತ ಸಿನಿಮಾದಲ್ಲಿ, ಕೇವಲ ಹಣಗಳಿಕೆಗೆ ಬಳಸಿ ಅದರ ಪಾವಿತ್ರತೆಯನ್ನು ಕಳೆದಿದ್ದಾರೆ.
ಹಾಗೆಯೇ, ಅಯ್ಯಪ್ಪನ ಭಕ್ತರೆಲ್ಲರು ಮಾಲೆ ಧರಿಸಿದಾಗ ಮಾತ್ರ ಕುಡಿತವನ್ನು ಬಿಡುತ್ತಾರೆ, ನಂತರ ಮತ್ತೆ ಕುಡಿತದ ದಾಸರೇ ಆಗಿರುತ್ತಾರೆಂಬಂತೆ ಬಿಂಬಿಸಲಾಗಿದೆ. ಇದರಿಂದ ಅಯ್ಯಪ್ಪ ಸ್ವಾಮಿ ಭಕ್ತರಿಗೆ, ಗುರುಸ್ವಾಮಿಗಳ ಭಾವನಗೆ, ನಂಬಿಕೆ ನೋವಾಗಿದೆ. ಆದ್ದರಿಂದ ರವಿತೇಜಾ ಆದಿಯಾಗಿ ಸಿನಿಮಾ ತಂಡದ ಪ್ರತಿಯೊಬ್ಬರು ಅಯ್ಯಪ್ಪಸ್ವಾಮಿ ಭಕ್ತರಲ್ಲಿ ಕ್ಷಮೆ ಕೇಳಬೇಕೆಂದು ಅಖಿಲ ಭಾರತೀಯ ಅಯ್ಯಪ್ಪ ದೀಕ್ಷಾ ಪ್ರಚಾರ ಸಮಿತಿ ಆಗ್ರಹಿಸಿದೆ. 

ಇರುಮುಡಿ ಸಿನಿಮಾ ಬಗ್ಗೆ

ಇರುಮುಡಿ ಚಿತ್ರವು ಅಯ್ಯಪ್ಪ ಸ್ವಾಮಿ ಮಾಲಾಧಾರಿಯ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಮೂಡಿಬಂದಿರುವ ಕೌಟುಂಬಿಕ ಮತ್ತು ಭಾವನಾತ್ಮಕ ಚಲನಚಿತ್ರವಾಗಿದೆ. ಈ ಚಿತ್ರದಲ್ಲಿ ಮಾಸ್ ಮಹಾರಾಜ ರವಿತೇಜ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪ್ರಿಯಾ ಭವಾನಿ ಶಂಕರ್ ಹಾಗೂ ಬಾಬಿ ನಕ್ಷತ್ರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 
ನಿರ್ದೇಶಕ ಶಿವ ನಿರ್ವಾಣ ಗ್ರಾಮೀಣ ಸೊಗಡು ಮತ್ತು ತಂದೆ-ಮಗಳ ನಡುವಿನ ಅಪರೂಪದ ಬಾಂಧವ್ಯದ ಕಥೆಯೊಂದಿಗೆ ತೆರೆಗೆ ತಂದಿದ್ದಾರೆ. ಕುಡಿತದ ಚಟಕ್ಕೆ ದಾಸನಾದ ತಂದೆ ಮತ್ತು ಮಗಳ ಭಾವನಾತ್ಮಕ ಪಯಣ, ನಂಬಿಕೆ ಹಾಗೂ ವಿಮೋಚನೆಯ ಸುತ್ತ ಕಥೆಯು ಸಾಗಲಿದ್ದು, ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆಯನ್ನು ಗಳಿಸಿದೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net