ಸರಸ​​ಕ್ಕೆ ಕರೆಯುವ... ಒಂದೇ ಒಂದು ಹೇಳಿಕೆಯಿಂದ ಟಾಲಿವುಡ್​ನ ಶೇಕ್ ಮಾಡಿದ ನಟಿ ಎಸ್ತರ್ ನೊರೊನ್ಹಾ | Ester Noronha

ತೆಲುಗು ನಟಿ ಎಸ್ಟರ್​ ನೊರೊನ್ಹಾ
ತೆಲುಗು ನಟಿ ಎಸ್ಟರ್​ ನೊರೊನ್ಹಾ
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ರರಂಗದಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ವಿರುದ್ಧ ನಟಿ ಎಸ್ಟೆರ್ ನೊರೊನ್ಹಾ ಗರಂ
  • ಅವಕಾಶ ಬೇಕು ಎಂದರೆ ಮಂಚ ಹತ್ತಬೇಕು ಎನ್ನುವರನ್ನು ಇಂಡಸ್ಟ್ರಿಯಿಂದಲೇ ಕಿತ್ತುಬಿಸಾಡಿ
  • ಒಂದೇ ಒಂದು ಗಟ್ಟಿ ನಿರ್ಧಾರದಿಂದ ದೊಡ್ಡ ಬದಲಾವಣೆ ಖಚಿತ ಎಂದ ನಟಿ
ಹೈದರಾಬಾದ್​: ಚಿತ್ರೋದ್ಯಮದಲ್ಲಿ ಕಳೆದ ಕೆಲವು ವರ್ಷಗಳಿಂದ ಭಾರೀ ಸದ್ದು ಮಾಡುತ್ತಿರುವ ಕಾಸ್ಟಿಂಗ್​ ಕೌಚ್​ ಪ್ರಕರಣಗಳು, ಕೇವಲ ಒಂದು ಚಿತರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಹಲವು ಇಂಡಸ್ಟ್ರಿಯ ನಟಿಮಣಿಯರಿಂದ ಇಂತಹ ಗಂಭೀರ ಆರೋಪಗಳು ಕೇಳಿಬಂದಿವೆ. ಅತಿ ಹೆಚ್ಚು ಎಂದರೆ ಅದು ಮಲಯಾಳಂ ಮತ್ತು ಟಾಲಿವುಡ್​ನಲ್ಲಿ ಎಂಬುದು ಗಮನಾರ್ಹ. ಈ ಕುರಿತಂತೆ ತೆಲುಗು ನಟಿ ಎಸ್ತರ್ ನೊರೊನ್ಹಾ (Ester Noronha) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಪಿಡುಗಿನ ವಿರುದ್ಧ ಕಿಡಿಕಾರಿರುವ ಎಸ್ಟರ್ ನೊರೊನ್ಹಾ, ಈ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕಟ್ಟುನಿಟ್ಟಾದ ಸಾಮಾಜಿಕ ಹೊಣೆಗಾರಿಕೆಯ ಅವಶ್ಯಕತೆಯಿದೆ. ಇತ್ತೀಚೆಗೆ ಅಂದರೆ ಈ ಯುಗದ ವೃತ್ತಿಪರ ನಿರ್ದೇಶಕರು ಮತ್ತು ನಿರ್ಮಾಪಕರು ಹೆಚ್ಚಾಗಿ ಪ್ರತಿಭೆಯ ಮೇಲೆ ಮಾತ್ರ ಗಮನಹರಿಸುತ್ತಾರೆ. ಟ್ಯಾಲೆಂಟೆಡ್​ ವ್ಯಕ್ತಿಗಳ ಹುಡುಕಾಟದಲ್ಲಿ ಇವರ ಫೋಕಸ್​ ಇರುತ್ತದೆ ಎಂದಿದ್ದಾರೆ.
ಪ್ರತಿಭೆಯನ್ನು ಮಾತ್ರ ಗುರುತಿಸುವ ವರ್ಗಕ್ಕೆ ಸೇರಿದವರು ಯಾವುದೇ ರೀತಿಯ ವೈಯಕ್ತಿಕ ಅಥವಾ ಲೈಂಗಿಕ ಅನುಕೂಲಗಳ ಬಗ್ಗೆ ಆಸಕ್ತಿ ತೋರುವುದಿಲ್ಲ. ಅದರ ಹಿಂದೆ ಬೀಳೋದಿಲ್ಲ. ಆದಾಗ್ಯೂ, ಹಿಂದಿನ ತಲೆಮಾರಿನ ಕೆಲವು ಸೆಲೆಬ್ರಿಟಿಗಳು ಇಂಥಾ ಕೆಟ್ಟ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ಈಗಲೂ ಮುಂದುವರೆಸಿದ್ದಾರೆ. ಇದು ಉದ್ಯಮದ ಖ್ಯಾತಿಗೆ ಕಳಂಕ ತರುತ್ತಿದೆ. ಯಾರು ಈ ಲೈಂಗಿಕ​ ದಾಹಕ್ಕೆ ಮುಗಿಬೀಳ್ತಾರೋ ಅಂಥವರನ್ನು ಚಿತ್ರರಂಗದಿಂದಲೇ ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ.
ಸಿನಿಮಾದಲ್ಲಿ ಅಥವಾ ಧಾರವಾಹಿಗಳಲ್ಲಿ ಅವಕಾಶ ಪಡೆಯಬೇಕೆಂದರೆ ತಮ್ಮ ಲೈಂಗಿಕ ಬಯಕೆಯನ್ನು ಪೂರೈಸಬೇಕು ಎಂದು ಯಾರೆಲ್ಲ ಹೇಳ್ತಾರೋ, ಅಂತಹ ವ್ಯಕ್ತಿಗಳನ್ನು ಚಿತ್ರರಂಗದಿಂದ ಹೊರಗೆ ನೂಕಬೇಕು. ಈ ರೀತಿಯ ಕಟ್ಟುನಿಟ್ಟಿನ ಕ್ರಮ ಜರುಗಿದರೆ ಮಾತ್ರ ನಿಜವಾದ ಬದಲಾವಣೆಯನ್ನು ನಾವೆಲ್ಲ ನೋಡಬಹುದು ಎಂದು ಒತ್ತಿ ಹೇಳಿದರು. ಎಸ್ಟೆರ್​ ಅವರ ಈ ಒಂದು ಗಟ್ಟಿ ಹೇಳಿಕೆ ಸದ್ಯ ಟಾಲಿವುಡ್​ ಅಂಗಳದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಈ ಬಗ್ಗೆ ಚಿತ್ರರಂಗ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net